‘ಕಾಟೇರ’ ಸಿನಿಮಾ (Kaatera Movie) ಸ್ಯಾಂಡಲ್ವುಡ್ನ ಸೂಪರ್ ಹಿಟ್ ಚಿತ್ರ ಎನಿಸಿಕೊಂಡಿದೆ. ಈ ಚಿತ್ರ ರಿಲೀಸ್ ಆಗಿ ಮೂರು ವಾರಗಳಲ್ಲಿ 200 ಕೋಟಿ ರೂಪಾಯಿ ಕ್ಲಬ್ ಸೇರುವ ಸೂಚನೆ ಸಿಕ್ಕಿದೆ. ಇದನ್ನು ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಗೆಲುವನ್ನು ಸಂಭ್ರಮಿಸಲಾಗುತ್ತಿದೆ. ಇನ್ನೂ ಕೆಲವು ದಿನಗಳ ಕಾಲ ‘ಕಾಟೇರ’ ಅಬ್ಬರಿಸಲಿದೆ. ಈ ಚಿತ್ರದಿಂದ ನಟ ದರ್ಶನ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಅವರು ದೊಡ್ಡ ಗೆಲುವು ಕಂಡಿದ್ದಾರೆ.
‘ಕಾಟೇರ’ ಸಿನಿಮಾ ಕಳೆದ ವರ್ಷ ಡಿಸೆಂಬರ್ 29ರಂದು ರಿಲೀಸ್ ಆಯಿತು. ಒಂದು ವಾರ ಮೊದಲು ರಿಲೀಸ್ ಆದ ‘ಡಂಕಿ’ ಹಾಗೂ ‘ಸಲಾರ್’ ಸಿನಿಮಾಗಳ ಅಬ್ಬರದ ನಡುವೆಯೂ ‘ಕಾಟೇರ’ ಉತ್ತಮ ಓಪನಿಂಗ್ ಪಡೆಯಿತು. ಈ ಸಿನಿಮಾದ ಮೊದಲ ದಿನದ ಗಳಿಕೆ ನೋಡಿ ಚಿತ್ರತಂಡಕ್ಕೆ ಖುಷಿ ಆಯಿತು. ಈ ಸಿನಿಮಾ ಸತತ 19 ನೇ ದಿನವೂ ಉತ್ತಮ ಗಳಿಕೆ ಮಾಡುತ್ತಿದೆ.
18 ದಿನಗಳಿಗೆ ‘ಕಾಟೇರ’ ಸಿನಿಮಾ 190.89 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ದರ್ಶನ್ ಅವರು ತಮ್ಮ ನಾಗಾಲೋಟ ಮುಂದುವರಿಸಿದ್ದಾರೆ. ಜನವರಿ 26ರಂದು ಗಣಾರಾಜ್ಯೋತ್ಸವದ ಪ್ರಯುಕ್ತ ರಜೆ ಇದೆ. ಇದು ಸಿನಿಮಾಗೆ ಸಹಕಾರಿ ಆಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಈ ಚಿತ್ರ ಜೀ ಕನ್ನಡ ವಾಹಿನಿ ಹಾಗೂ ಜಿ5 ಒಟಿಟಿಯಲ್ಲಿ ಪ್ರಸಾರ ಕಾಣಲಿದೆ.
‘ಸಂಕ್ರಾಂತಿಗೆ ಮತ್ತೊಮ್ಮೆ ಕಾಟೇರ’ ಹ್ಯಾಶ್ಟ್ಯಾಗ್ ಟ್ವಿಟರ್ನಲ್ಲಿ ಟ್ರೆಂಡ್ ಆಯಿತು. ಅವರ ಅಭಿಮಾನಿಗಳು ಸಂಕ್ರಾಂತಿ ಸಂದರ್ಭದಲ್ಲಿ ಮತ್ತೊಮ್ಮೆ ಹೋಗಿ ‘ಕಾಟೇರ’ ವೀಕ್ಷಣೆ ಮಾಡಿದರು. ಇದು ಚಿತ್ರದ ಗಳಿಕೆಗೆ ಸಹಕಾರಿ ಆಗಿದೆ. ಈ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್ ಸೇರುತ್ತಿರುವ ಬಗ್ಗೆ ಅಭಿಮಾನಿಗಳಿಗೆ ಖುಷಿ ಇದೆ.
ಇದನ್ನೂ ಓದಿ: ‘ದರ್ಶನ್ ನಟನೆಯ ಕಾಟೇರ ನೋಡಿದ್ರಾ’; ಅಭಿಮಾನಿ ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರ ಏನು?
‘ಕಾಟೇರ’ ಚಿತ್ರದಲ್ಲಿ ದರ್ಶನ್ಗೆ ಜೊತೆಯಾಗಿ ಆರಾಧನಾ ರಾಮ್ ನಟಿಸಿದ್ದಾರೆ. ಮೊದಲ ಚಿತ್ರದಲ್ಲೇ ಸಾಕಷ್ಟು ಜನಪ್ರಿಯತೆ ಪಡೆದರು. ಕುಮಾರ್ ಗೋವಿಂದ, ಜಗಪತಿ ಬಾಬು, ವೈಜನಾಥ್ ಬೀರಾದಾರ್, ಶ್ರುತಿ ಸೇರಿ ದೊಡ್ಡ ಪಾತ್ರವರ್ಗ ಚಿತ್ರದಲ್ಲಿದೆ. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರಕ್ಕೆ, ರಾಕ್ಲೈನ್ ವೆಂಕಟೇಶ್ ನಿರ್ಮಾಣ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:54 pm, Wed, 17 January 24