ಪ್ರಶಾಂತ್ ನೀಲ್ ಬಗ್ಗೆ ಪ್ರಭಾಸ್, ಶ್ರುತಿ ಹಾಸನ್ಗೆ ಒಂದೇ ದೂರು
Prashanth Neel: ಪ್ರಶಾಂತ್ ನೀಲ್ ಬಗ್ಗೆ ಪ್ರಭಾಸ್ ಹಾಗೂ ಶ್ರುತಿ ಹಾಸನ್ಗೆ ಇರುವುದು ಒಂದೇ ದೂರು. ನೀಲ್ ತಂತ್ರಗಳ ಬಗ್ಗೆ ಪೃಥ್ವಿರಾಜ್ ಸುಕುಮಾರ್ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ.
‘ಕೆಜಿಎಫ್’ (KGF) ಸಿನಿಮಾ ಗೆದ್ದಿದ್ದನ್ನು ಕೆಲವರು ‘ಅದೃಷ್ಟ’ ಎಂದಿದ್ದರು. ಆದರೆ ಮತ್ತೆ ಅದೇ ಮಾದರಿಯ ದೊಡ್ಡ ಗೆಲುವನ್ನು ‘ಸಲಾರ್’ ಮೂಲಕ ರಿಪೀಟ್ ಮಾಡಿರುವ ಪ್ರಶಾಂತ್ ನೀಲ್, ‘ಕೆಜಿಎಫ್’ ಗೆದ್ದಿದ್ದು ಅದೃಷ್ಟವಲ್ಲ, ಅದು ತಮ್ಮ ಪ್ರತಿಭೆ ಎಂಬುದನ್ನು ಸಾಬೀತು ಮಾಡಿದ್ದಾರೆ. ‘ಸಲಾರ್’ ಸಿನಿಮಾದ ಯಶಸ್ಸನ್ನು ಇಡೀ ಚಿತ್ರತಂಡ ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ ಸಂಭ್ರಮ ಆಚರಿಸಿದೆ. ಇದರ ನಡುವೆ ‘ಸಲಾರ್’ನ ಮೂವರು ಮುಖ್ಯ ನಟರಾದ ಪ್ರಭಾಸ್, ಶ್ರುತಿ ಹಾಸನ್ ಹಾಗೂ ಪೃಥ್ವಿರಾಜ್ ಸುಕುಮಾರ್ ಅವರು ಆಪ್ತವಾಗಿ ಚರ್ಚೆ ಮಾಡಿದ್ದಾರೆ. ಈ ವೇಳೆ ಪ್ರಶಾಂತ್ ನೀಲ್ ಬಗ್ಗೆಯೂ ಈ ಮೂವರು ಮಾತನಾಡಿದ್ದಾರೆ.
ಪ್ರಭಾಸ್ ಹಾಗೂ ಶ್ರುತಿ ಹಾಸನ್ ಪ್ರಶಾಂತ್ ನೀಲ್ ಬಗ್ಗೆ ಮಾತನಾಡುತ್ತಾ, ‘ಪ್ರಶಾಂತ್ ನೀಲ್ ಬಹಳ ಕೆಟ್ಟದಾಗಿ ಕತೆ ಹೇಳುತ್ತಾರೆ’ ಎಂದರು. ಶ್ರುತಿ ಹಾಸನ್ ಸಹ ಇದಕ್ಕೆ ಒಪ್ಪಿಕೊಂಡರು, ‘ನನಗೆ ಮೊದಲು ಜೂಮ್ ಕಾಲ್ನಲ್ಲಿ ಕತೆ ಹೇಳಿದರು. ನನಗೆ ಸರಿಯಾಗಿ ಏನೂ ಗೊತ್ತಾಗಲಿಲ್ಲ’ ಎಂದರು. ಆದರೆ ಅಲ್ಲಿಯೇ ಕೂತಿದ್ದ ಪೃಥ್ವಿರಾಜ್ ಸುಕುಮಾರನ್, ‘ನನಗೂ ಮೊದಲು ಜೂಮ್ ಕಾಲ್ನಲ್ಲಿ ಅದಾದ ನಂತರ ನೇರವಾಗಿ ಸಿಕ್ಕಿ ಕತೆ ಹೇಳಿದರು. ಎರಡೂ ಬಾರಿಯೂ ಅದ್ಭುತವಾಗಿ ಕತೆ ಹೇಳಿದರು’ ಎಂದರು. ಆಗ ಪ್ರಭಾಸ್ ಹಾಗೂ ಶ್ರುತಿ, ‘ಬಹುಷಃ ಪ್ರಶಾಂತ್ ನಮ್ಮಿಬ್ಬರನ್ನೂ ಗಂಭೀರವಾಗಿ ಪರಿಗಣಿಸಿರಲಿಲ್ಲ ಅದಕ್ಕೆ ನಮಗೆ ಸರಿಯಾಗಿ ಕತೆ ಹೇಳಿಲ್ಲ ಅನ್ನಿಸುತ್ತದೆ’ ಎಂದು ತಮಾಷೆ ಮಾಡಿದರು.
ಅದಾದ ಬಳಿಕ ಮಾತು ಮುಂದುವರೆಸಿದ ಪ್ರಭಾಸ್, ‘ನನ್ನ ಎರಡು ದಶಕದ ಚಿತ್ರರಂಗದ ಪಯಣದಲ್ಲಿ ನನ್ನನ್ನು ಕಂಫರ್ಟ್ ಮಾಡಿದ್ದು ಪ್ರಶಾಂತ್ ಒಬ್ಬರೇ. ವಿವಿ ವಿನಾಯಕ್ ಸಹ ಬಹಳ ಕಂಫರ್ಟ್ ಆಗಿ ಕೆಲಸ ಮಾಡಿದರು. ಆದರೆ ಅದು ಆರು ತಿಂಗಳು ಮಾತ್ರ. ಆದರೆ ಪ್ರಶಾಂತ್ ಜೊತೆ ಎರಡು ವರ್ಷ ಕೆಲಸ ಮಾಡಿದರೂ ಸಹ ನನಗೆ ಸಾಕಪ್ಪ ಎಂದು ಅನ್ನಿಸಲಿಲ್ಲ. ಇವರೊಟ್ಟಿಗೆ ಇರಬೇಕು, ಶೂಟ್ ಆದ ಬಳಿಕವೂ ಭೇಟಿ ಮಾಡಬೇಕು, ಮಾತನಾಡಬೇಕು ಅನ್ನಿಸುವ ವ್ಯಕ್ತಿ ಪ್ರಶಾಂತ್’ ಎಂದರು.
ಇದನ್ನೂ ಓದಿ:Prashanth Neel:‘ನಾನು ಬ್ಯಾಡ್ ಹಸ್ಬಂಡ್’; ಓಪನ್ ಆಗಿ ಮಾತನಾಡಿದ ಪ್ರಶಾಂತ್ ನೀಲ್
ಪೃಥ್ವಿರಾಜ್ ಸುಕುಮಾರ್ ಮಾತನಾಡಿ, ‘ಪ್ರಶಾಂತ್ ಸಿನಿಮಾ ನೋಡಿದಾಗ ಅವರು ಕಲರ್ ಟೋನ್, ಕ್ಯಾಮೆರಾ ಆಂಗಲ್, ಸೆಟ್, ಲುಕ್ ಇದಕ್ಕೆ ಹೆಚ್ಚು ಆದ್ಯತೆ ಕೊಡುತ್ತಾರೆ ಅಂದುಕೊಂಡಿದ್ದೆ. ಆದರೆ ಪ್ರಶಾಂತ್ ಅದ್ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಬದಲಿಗೆ ಅವರು ತಲೆ ಕೆಡಿಸಿಕೊಳ್ಳುವುದು ನಟರ ಬಗ್ಗೆ. ನಟನೆ ಬಗ್ಗೆ, ಒಳ್ಳೆಯ ಆಕ್ಟಿಂಗ್ ಬಗ್ಗೆ. ಅದರಷ್ಟು ಇನ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದರು.
ಮುಂದುವರೆಸು, ‘ಅವರ ಸಿನಿಮಾದ ಕಲರ್ ಟೋನ್, ಪೋಸ್ಟ್ ಪ್ರೊಡಕ್ಷನ್ನಲ್ಲಿ ಮಾಡುವಂಥಹದ್ದು ಅಂದು ನಾನು ಅಂದುಕೊಂಡಿದ್ದೆ ಆದರೆ ಅವರು ಪೋಸ್ಟ್ ಪ್ರೊಡಕ್ಷನ್ನಲ್ಲಿ ಕಲರ್ ಕರೆಕ್ಷನ್ ಮಾಡುವುದೇ ಇಲ್ಲ. ಸೆಟ್ನಲ್ಲಿಯೇ ಲೈಟಿಂಗ್ ಮೂಲಕ ಆ ಔಟ್ಪುಟ್ ತೆಗೆಯುತ್ತಾರೆ. ಅವರ ಹಾಗೂ ಭುವನ್ ಅವರ ನಡುವೆ ಅದ್ಭುತವಾದ ಅಂಡರ್ಸ್ಟ್ಯಾಂಡಿಗ್ ಇದೆ. ಪರಸ್ಪರರಿಗೆ ಏನು ಬೇಕು ಎಂಬುದು ಇಬ್ಬರಿಗೂ ಮೊದಲೇ ಗೊತ್ತಿರುತ್ತದೆ ಹಾಗಾಗಿ ಅವರ ಔಟ್ಪುಟ್ ಅಷ್ಟು ಚೆನ್ನಾಗಿ ಬರುತ್ತದೆ’ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ