ಸ್ಯಾಂಡಲ್ವುಡ್ನ ದೊಡ್ಡ ಸ್ಟಾರ್ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗುತ್ತಿವೆ. ‘ಪೊಗರು’ ಬಳಿಕ ‘ರಾಬರ್ಟ್’ ಆಗಮಿಸುತ್ತಿದೆ. ನಂತರ ‘ಯುವರತ್ನ’, ‘ಸಲಗ’, ‘ಕೋಟಿಗೊಬ್ಬ 3’ ಚಿತ್ರಗಳು ತೆರೆಕಾಣಲಿವೆ. ಗಲ್ಲಾಪೆಟ್ಟಿಗೆಯಲ್ಲಿ ಕ್ಲ್ಯಾಶ್ ತಪ್ಪಿಸಲು ಸೂಕ್ತ ರೀತಿಯಲ್ಲಿ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಹಾಗಿದ್ದರೂ ‘ಕೋಟಿಗೊಬ್ಬ 3’ ಮತ್ತು ‘ರಾಬರ್ಟ್’ ಸಿನಿಮಾಗಳ ನಡುವೆ ಬೇರೊಂದು ರೀತಿಯಲ್ಲಿ ಹಣಾಹಣಿ ಏರ್ಪಟ್ಟಿದೆ.
ಮೇಕಿಂಗ್ ವಿಡಿಯೋಗಳ ಮುಖಾಮುಖಿ
‘ರಾಬರ್ಟ್’ ಸಿನಿಮಾ ಮಾ.11ರಂದು ಭರ್ಜರಿಯಾಗಿ ಬಿಡುಗಡೆ ಆಗಲಿದೆ. ‘ಕೋಟಿಗೊಬ್ಬ 3’ ಚಿತ್ರ ಏಪ್ರಿಲ್ ಕೊನೇ ವಾರದಲ್ಲಿ ಆಗಮಿಸಲಿದೆ. ಆದರೆ ಈಗ ಈ ಎರಡೂ ಸಿನಿಮಾಗಳು ಒಂದು ದಿನದ ಆಸುಪಾಸಿನಲ್ಲಿ ಮೇಕಿಂಗ್ ವಿಡಿಯೋಗಳನ್ನು ರಿಲೀಸ್ ಮಾಡಿಕೊಂಡಿವೆ. ಮಾರ್ಚ್ 7ರಂದು ‘ಕೋಟಿಗೊಬ್ಬ 3’ ಹಾಗೂ ಮಾ.8ರಂದು ‘ರಾಬರ್ಟ್’ ಸಿನಿಮಾದ ಮೇಕಿಂಗ್ ವಿಡಿಯೋಗಳು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ವೀಕ್ಷಣೆಗೆ ಲಭ್ಯವಾಗಿವೆ. ಹೀಗೆ ಏಕಕಾಲಕ್ಕೆ ಈ ಎರಡು ಸಿನಿಮಾಗಳು ಸದ್ದು ಮಾಡುತ್ತಿವೆ. ‘ರಾಬರ್ಟ್’ ಬಿಡುಗಡೆ ಹೊಸ್ತಿಲಿನಲ್ಲೇ ‘ಕೋಟಿಗೊಬ್ಬ 3’ ಮೇಕಿಂಗ್ ವಿಡಿಯೋ ರಿಲೀಸ್ ಆಗಿರುವುದು ಅಚ್ಚರಿಗೆ ಕಾರಣ ಆಗಿದೆ.
ತೆರೆಹಿಂದಿನ ಕಥೆ ಹೇಳಿದ ‘ರಾಬರ್ಟ್’ ತಂಡ
ಸೋಮವಾರ (ಮಾ.8) ಬಿಡುಗಡೆಯಾದ ಮೇಕಿಂಗ್ ವಿಡಿಯೋ ಮೂಲಕ ಹಲವು ವಿಚಾರಗಳನ್ನು ‘ರಾಬರ್ಟ್’ ತಂಡ ಹಂಚಿಕೊಂಡಿದೆ. ಸಿನಿಮಾ ಕಾನ್ಸೆಪ್ಟ್ ಹೊಳೆದಿದ್ದು ಹೇಗೆ? ಫೈಟಿಂಗ್ ದೃಶ್ಯಗಳನ್ನು ಹೇಗೆ ಚಿತ್ರಿಸಲಾಗಿದೆ? ನಾಯಕಿ ಆಶಾ ಭಟ್ ಅವರ ಮೊದಲ ದಿನದ ಶೂಟಿಂಗ್ ಅನುಭವ ಹೇಗಿತ್ತು? ದರ್ಶನ್ ಅವರ ಡೆಡಿಕೇಷನ್ ಯಾವ ರೀತಿ ಇತ್ತು ಎಂಬಿತ್ಯಾದಿ ವಿಷಯಗಳ ಬಗ್ಗೆ ಚುಟುಕು ಮಾಹಿತಿ ನೀಡಲಾಗಿದೆ. ಮಾ. 9 ಮತ್ತು 10ರಂದು ಕೂಡ ಈ ಸಿನಿಮಾದ ಇನ್ನೆರಡು ಮೇಕಿಂಗ್ ವಿಡಿಯೋಗಳು ಬಿಡುಗಡೆ ಆಗಲಿವೆ.
#Roberrt #RoberrtStormMarch11 @umap30071 @StarAshaBhat @TharunSudhir @aanandaaudio pic.twitter.com/tGFdvbxdLJ
— Darshan Thoogudeepa (@dasadarshan) March 8, 2021
Here is the 1st#Kotigobba3MaKINGVideo https://t.co/2faVJTyVt2#Kotigobba3
??????
— Kichcha Sudeepa (@KicchaSudeep) March 7, 2021
ಕೋಟಿಗೊಬ್ಬನ ಶೂಟಿಂಗ್ ಝಲಕ್
ಸುದೀಪ್ ಅವರ ‘ಕೋಟಿಗೊಬ್ಬ 3’ ಸಿನಿಮಾ ಮೇಲೆ ಕೂಡ ಅಷ್ಟೇ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಕೋಟಿಗೊಬ್ಬ ಎಂಬ ಶೀರ್ಷಿಕೆಯೇ ಹೈಪ್ಗೆ ಕಾರಣ ಆಗಿದೆ. ಸುದೀಪ್ ಜೊತೆ ಮಡೋನ್ನಾ ಸೆಬಾಸ್ಟಿಯನ್, ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸಾನಿ, ರವಿಶಂಕರ್ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾದ ಶೂಟಿಂಗ್ನ ಝಲಕ್ ತೋರಿಸುವ ಸಲುವಾಗಿ ಮೇಕಿಂಗ್ ವಿಡಿಯೋ ಹೊರಬಂದಿದೆ. ಭಾನುವಾರ (ಮಾ.7) ಬಿಡುಗಡೆಯಾದ ಈ ವಿಡಿಯೋ ಒಂದು ದಿನದಲ್ಲಿ ನಾಲ್ಕೂವರೆ ಲಕ್ಷ ವ್ಯೂಸ್ ಪಡೆದುಕೊಂಡಿದೆ. ತೆರೆಹಿಂದಿನ ತುಣುಕುಗಳನ್ನು ನೋಡಿದ ಅಭಿಮಾನಿಗಳ ಮನದಲ್ಲಿ ಚಿತ್ರದ ಬಗ್ಗೆ ಇದ್ದ ನಿರೀಕ್ಷೆ ದ್ವಿಗುಣವಾಗಿದೆ.
Published On - 1:27 pm, Mon, 8 March 21