ನಟ ದರ್ಶನ್ ಪ್ರಮುಖ ಆರೋಪಿ ಆಗಿರುವ ರೇಣುಕಾಸ್ವಾಮಿ ಕೊಲೆ ಕೇಸ್ನ ಜಾರ್ಜ್ಶೀಟ್ ಇಂದು (ಸೆ.4) ಸಲ್ಲಿಕೆ ಆಗಿದೆ. ಈ ಹಿನ್ನೆಲೆಯಲ್ಲಿ ದರ್ಶನ್ಗೆ ಸಂಕಷ್ಟ ಹೆಚ್ಚಾಗಿದೆ. ಚಾರ್ಜ್ಶೀಟ್ನಲ್ಲಿ ಇರುವ ವಿಚಾರಗಳನ್ನು ತಿಳಿದುಕೊಳ್ಳಲು ದರ್ಶನ್ ಹಾತೊರೆಯುತ್ತಿದ್ದಾರೆ. ಆದರೆ ಕುಟುಂಬದವರ ಜೊತೆ ಮಾತನಾಡುವುದು ಅಷ್ಟು ಸುಲಭವಲ್ಲ. ಬಳ್ಳಾರಿ ಜೈಲಿನಲ್ಲಿ ಇರುವ ಅವರು ಕೇವಲ 5 ನಿಮಿಷಗಳ ಕಾಲ ಪತ್ನಿ ವಿಜಯಲಕ್ಷ್ಮಿ ಜೊತೆ ಮಾತನಾಡಿದ್ದಾರೆ. ಆದರೆ ಪೂರ್ತಿ ವಿಷಯ ತಿಳಿದುಕೊಳ್ಳುವುದಕ್ಕೂ ಮುನ್ನವೇ ಅವಧಿ ಮುಕ್ತಾಯ ಆಗಿದ್ದರಿಂದ ದರ್ಶನ್ ಪರದಾಡಿದ್ದಾರೆ.
ಬಳ್ಳಾರಿ ಸೆಂಟ್ರಲ್ ಜೈಲ್‌ನ ಲ್ಯಾಂಡ್ ಲೈನ್ನಿಂದ ಪತ್ನಿ ವಿಜಯಲಕ್ಷ್ಮಿ ನಂಬರ್‌ಗೆ ದರ್ಶನ್ ಕರೆ ಮಾಡಿದ್ದಾರೆ. ಅತ್ತ ಕಡೆಯಿಂದ ವಿಜಯಲಕ್ಷ್ಮಿ ಫೋನ್ ರಿಸೀವ್ ಮಾಡುತ್ತಿದ್ದಂತೆಯೇ ದರ್ಶನ್ ಭಾವುಕರಾಗಿದ್ದಾರೆ. 5 ನಿಮಿಷಗಳ ಕಾಲ ಅವರು ಎಮೋಷನಲ್ ಆಗಿಯೇ ಮಾತನಾಡಿದ್ದಾರೆ. ಕುಟುಂಬಸ್ಥರ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಚಾರ್ಜ್ಶೀಟ್ನಲ್ಲಿ ಇರುವ ವಿಚಾರಗಳನ್ನು ತಿಳಿಯಲು ಪ್ರಯತ್ನಿಸಿದ್ದಾರೆ.
ಇದನ್ನೂ ಓದಿ: ರೇಣುಕಾ ಸ್ವಾಮಿ ಕೊಲೆ ಕೇಸ್; ದರ್ಶನ್ ವಿರುದ್ಧ ಇರೋ ಸಾಕ್ಷಿದಾರರು ಯಾರ್ಯಾರು?
ಈ ಕೇಸ್ನಲ್ಲಿ ತಮಗೆ ಜಾಮೀನು ಸಿಗುತ್ತಾ ಅಥವಾ ಎಲ್ಲವಾ ಎಂಬ ಆತಂಕದಲ್ಲೇ ದರ್ಶನ್ ಅವರು ಪತ್ನಿಯೊಂದಿಗೆ ಚರ್ಚೆ ಮಾಡಿದ್ದಾರೆ. ಮಾತನಾಡಲು ಸಿಕ್ಕ 5 ನಿಮಿಷ ಅವಧಿಯಲ್ಲಿ ಎಲ್ಲವೂ ಕೇಳಲಾಗಲಿಲ್ಲ ಎಂಬ ಟೆನ್ಷನ್ನಲ್ಲಿ ದರ್ಶನ್ ಪರಿತಪಿಸಿದ್ದಾರೆ. ಚಾರ್ಜ್ಶೀಟ್ ಹಾಗೂ ಮುಂದಿನ ಕಾನೂನು ಪ್ರಕ್ರಿಯೆ ಬಗ್ಗೆ ಸರಿಯಾಗಿ ಮಾಹಿತಿ ಪಡೆಯಲು 5 ನಿಮಿಷದಲ್ಲಿ ಸಾಧ್ಯವಾಗಲಿಲ್ಲ. ಆದ್ದರಿಂದ ದರ್ಶನ್ಗೆ ಟೆನ್ಷನ್ ಹೆಚ್ಚಾಗಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಚಾರ್ಜ್ಶೀಟ್ ಸಲ್ಲಿಕೆ; ದರ್ಶನ್ ಎ2 ಆರೋಪಿ ಆಗಿ ಮುಂದುವರಿಕೆ
ಇಂಥ ತುರ್ತು ಪರಿಸ್ಥಿತಿಯಲ್ಲಿ ಕೂಡ ಪತ್ನಿ ಮತ್ತು ವಕೀಲರ ಜೊತೆ ಸೂಕ್ತವಾಗಿ ಮಾತನಾಡಲು ದರ್ಶನ್ಗೆ ಸಾಧ್ಯವಾಗಿಲ್ಲ. ಅವರ ಸಂಪೂರ್ಣ ಮಾತುಕತೆಯನ್ನು ರೆಕಾರ್ಡ್ ಮಾಡಲಾಗಿದೆ. ಪತ್ನಿಯ ದೂರವಾಣಿ ಕರೆ ಕಟ್ ಆಗುತ್ತಿದ್ದಂತೆಯೇ ದರ್ಶನ್ ಅವರು ಸೆಲ್ನತ್ತ ತೆರಳಿದ್ದಾರೆ. ಜೈಲಿನಲ್ಲಿರುವ ದರ್ಶನ್ಗೆ ಈಗ ನೆನಪಿರುವುದು ಪತ್ನಿಯ ಫೋನ್ ನಂಬರ್ ಮಾತ್ರ. ಹಾಗಾಗಿ ಆ ನಂಬರ್ ಮೂಲಕವೇ ಲಾಯರ್ ಜತೆ ಮಾತನಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.