Darshan Thoogudeepa: ಬಳ್ಳಾರಿ ಜೈಲು ಸೇರಿದ ದರ್ಶನ್​ಗೆ ಹೊಸ ಕೈದಿ ಸಂಖ್ಯೆ

Darshan Thoogudeepa: ನಟ ದರ್ಶನ್​ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ 6106 ಅನ್ನು ಆರೋಪಿ ಸಂಖ್ಯೆಯಾಗಿ ನೀಡಿದ್ದರು. ಆ ಸಂಖ್ಯೆಯನ್ನು ಅವರ ಅಭಿಮಾನಿಗಳು ಹಚ್ಚೆ ಹಾಕಿಸಿಕೊಂಡಿದ್ದರು. ಈಗ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ದರ್ಶನ್​ಗೆ ಹೊಸ ಸಂಖ್ಯೆಯನ್ನು ನೀಡಲಾಗಿದೆ.

Darshan Thoogudeepa: ಬಳ್ಳಾರಿ ಜೈಲು ಸೇರಿದ ದರ್ಶನ್​ಗೆ ಹೊಸ ಕೈದಿ ಸಂಖ್ಯೆ

Updated on: Aug 29, 2024 | 12:03 PM

ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್​ ಇಂದು (ಆಗಸ್ಟ್ 29) ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್​ಗೆ ವಿಶೇಷ ಆತಿಥ್ಯ ದೊರೆತ ಕಾರಣ ಹಾಗೂ ಜೈಲಿನ ಕೆಲ ನಿಯಮಗಳು ಸರಿಯಾಗಿ ಪಾಲಿಸದೇ ಇರುವ ಕಾರಣ ದರ್ಶನ್ ಸೇರಿದಂತೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಇತರೆ ಕೆಲವು ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿದೆ. ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್​ಗೆ ಈಗ ಹೊಸ ಕೈದಿ ಸಂಖ್ಯೆ ನೀಡಲಾಗಿದೆ.

ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟ ದರ್ಶನ್​ಗೆ 6106 ಅನ್ನು ಆರೋಪಿ ಸಂಖ್ಯೆಯನ್ನಾಗಿ ನೀಡಲಾಗಿತ್ತು. ಆಗ ದರ್ಶನ್​ರ ಹಲವು ಅಭಿಮಾನಿಗಳು 6106 ಸಂಖ್ಯೆಯನ್ನು ಗಾಡಿಗಳ ಮೇಲೆ ಬರೆಸಿಕೊಂಡಿದ್ದರು. ಕೆಲವರಂತೂ ಅತಿರೇಕಕ್ಕೆ ಹೋಗಿ 6106 ಅನ್ನು ಹಚ್ಚೆಯಾಗಿ ಹಾಕಿಸಿಕೊಂಡರು. ಯಾರೋ ಒಬ್ಬರು, ಮಗುವಿಗೂ ಕೈದಿ ರೀತಿ ಬಟ್ಟೆ ತೊಡಿಸಿ, ಅದರ ಮೇಲೆ 6106 ಎಂದು ಬರೆದಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. 6106 ಹೆಸರಿನ ಸಿನಿಮಾ ನೊಂದಣಿಗೆ ಅರ್ಜಿಗಳು ಬಂದಿದ್ದವು. ಆದರೆ ಈಗ ಬಳ್ಳಾರಿಯಲ್ಲಿ ದರ್ಶನ್​ಗೆ ಹೊಸ ಕೈದಿ ಸಂಖ್ಯೆ ನೀಡಲಾಗಿದೆ.

ಇದನ್ನೂ ಓದಿ:ಬ್ರ್ಯಾಂಡೆಡ್ ಬಟ್ಟೆ, ಕೂಲಿಂಗ್ ಗ್ಲಾಸ್ ಹಾಕಿ ಬಳ್ಳಾರಿ ಜೈಲಿಗೆ ದರ್ಶನ್ ಎಂಟ್ರಿ; ಆದರೆ..

ಬಳ್ಳಾರಿಯಲ್ಲಿ ನಟ ದರ್ಶನ್​ಗೆ 511 ಸಂಖ್ಯೆ ನೀಡಲಾಗಿದೆ. ಇದು ದರ್ಶನ್​ರ ಹೊಸ ಆರೋಪಿ ಸಂಖ್ಯೆ. ದರ್ಶನ್ ಈ ಹಿಂದೆ ಯಾವುದೇ ಸಿನಿಮಾದಲ್ಲಿ ಕೈದಿಯಾಗಿ ನಟಿಸಿದಾಗಲೂ ಕೈದಿ ಸಂಖ್ಯೆಯನ್ನು 171 ಅನ್ನು ಹಾಕಿಸಿಕೊಳ್ಳುವುದು ಅಭ್ಯಾಸವಾಗಿತ್ತು. ದರ್ಶನ್​ರ ಅದೃಷ್ಟ ಸಂಖ್ಯೆ ಒಂಬತ್ತು ಆಗಿದ್ದು, 171 ಅನ್ನು ಕೂಡಿದರೆ 9 ಸಂಖ್ಯೆ ಬರುವ ಕಾರಣ ಅದೇ ಸಂಖ್ಯೆಯನ್ನು ದರ್ಶನ್ ತನ್ನ ಎಲ್ಲ ಸಿನಿಮಾಗಳಲ್ಲಿಯೂ ಬಳಸುತ್ತಿದ್ದರು. ಆದರೆ ಈಗ ಬಳ್ಳಾರಿ ಜೈಲಿನಲ್ಲಿ ಅವರಿಗೆ 511 ಸಂಖ್ಯೆ ನೀಡಲಾಗಿದೆ.

ಹೊಸ ಕೈದಿಗಳು ಯಾರೇ ಬಂದರು ಅವರಿಗೆ ಹೊಸ ಸಂಖ್ಯೆ ನೀಡುವುದು ಜೈಲಿನ ನಿಯಮ ಆಗಿರುವ ಕಾರಣ ಹಾಗೂ ಕ್ರಮ ಸಂಖ್ಯೆ ಆಧಾರದಲ್ಲಿ ಕೈದಿಗಳಿಗೆ ಸಂಖ್ಯೆ ನೀಡುವ ಕಾರಣ. ಇದೀಗ ದರ್ಶನ್​ಗೆ 511 ಸಂಖ್ಯೆಯನ್ನು ನೀಡಲಾಗಿದೆ. ಬೇರೆ ಬೇರೆ ಜೈಲುಗಳಿಗೆ ತೆರಳಿರುವ ಇದೇ ಪ್ರಕರಣದ ಬೇರೆ ಆರೋಪಿಗಳಿಗೂ ಸಹ ಹೊಸ ಕೈದಿ ಸಂಖ್ಯೆಗಳನ್ನು ನೀಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ