- Kannada News Photo gallery Darshan Thoogudeepa Enters To Bellary Jail Here are the Darshan Photos Darshan New Photos Entertainment News In Kannada
ಬ್ರ್ಯಾಂಡೆಡ್ ಬಟ್ಟೆ, ಕೂಲಿಂಗ್ ಗ್ಲಾಸ್ ಹಾಕಿ ಬಳ್ಳಾರಿ ಜೈಲಿಗೆ ದರ್ಶನ್ ಎಂಟ್ರಿ; ಆದರೆ..
ಜೈಲಿನ ಒಳಗೆ ಹೋಗುತ್ತಿದ್ದಂತೆ ಮೊದಲಿಗೆ ಜೈಲು ಡೈರಿಯಲ್ಲಿ ದರ್ಶನ್ರ ಮಾಹಿತಿ ಬರೆದುಕೊಳ್ಳಲಾಗಿದೆ. ದರ್ಶನ್ ಆರೋಪಿಯಾಗಿರುವ ಪ್ರಕರಣದ ಮಾಹಿತಿಯನ್ನು ತುಂಬಿಕೊಳ್ಳಲಾಗಿದೆ. ಯಾವ ಜೈಲಿನಿಂದ ಬಂದಿದ್ದಾರೆ, ಯಾವ ಸಮಯಕ್ಕೆ ಬಂದಿದ್ದಾರೆ ಇನ್ನಿತರೆ ಮಾಹಿತಿಗಳನ್ನು ಬರೆಸಿಕೊಳ್ಳಲಾಗಿದೆ.
Updated on: Aug 29, 2024 | 11:35 AM

ನಟ ದರ್ಶನ್ ಅವರು ಜೈಲಿಗೆ ಎಂಟ್ರಿ ಕೊಡುತ್ತಿರುವ ವಿಡಿಯೋ ಹಾಗೂ ಫೋಟೋಗಳು ಟಿವಿ9 ಕನ್ನಡಕ್ಕೆ ಲಭ್ಯ ಆಗಿದೆ. ದರ್ಶನ್ ಜೈಲಿಗೆ ಎಂಟ್ರಿ ಪಡೆಯುವಾಗ ಅವರು ಕೂಲಿಂಗ್ ಗ್ಲಾಸ್ ಧರಿಸಿದ್ದರು. ಜೊತೆಗೆ ಬ್ರ್ಯಾಂಡೆಡ್ ಶರ್ಟ್ ಹಾಕಿದ್ದರು. ಕೈಯಲ್ಲಿ ಕಡಗ ಕೂಡ ಇತ್ತು.

ದರ್ಶನ್ ಜೈಲಿಗೆ ಎಂಟ್ರಿ ಆಗುವಾಗ ಬಿಗಿ ಭದ್ರತೆ ಆಯೋಜನೆ ಮಾಡಲಾಗಿತ್ತು. ಪೊಲೀಸರ ಸಮ್ಮುಖದಲ್ಲಿ ಅವರು ಜೈಲಿನ ಒಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೊದಲು ಅವರಿಗೆ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಲಾಗುತ್ತದೆ.

ಬಳ್ಳಾರಿಯಲ್ಲಿ ಜೈಲಿನ ನಿಯಮಗಳನ್ನ ಪಾಲನೆ ಮಾಡಲು ದರ್ಶನ್ಗೆ ಸೂಚನೆ ನೀಡಲಾಗಿದೆ. ಹೀಗಾಗಿಯೇ ದರ್ಶನ್ ಹಾಕಿದ್ದ ಬೆಳ್ಳಿ ಕಡಗ, ಸನ್ಗ್ಲಾಸ್, ಕತ್ತಿನಲ್ಲಿ ಹಾಕಿದ್ದ ಮಣಿ ಸರ ಹಾಗೂ ದಾರವನ್ನು ಪೊಲೀಸರು ಬಿಚ್ಚಿಸಿದ್ದಾರೆ.

ದರ್ಶನ್ ಅವರ ನ್ಯಾಯಾಂಗ ಬಂಧನದ ಅವಧಿ ಸೆಪ್ಟೆಂಬರ್ 9ರವರೆಗೆ ಮುಂದಕ್ಕೆ ಹೋಗಿದೆ. ಹೀಗಾಗಿ, ಅಲ್ಲಿವರೆಗೂ ದರ್ಶನ್ ಬಳ್ಳಾರಿ ಜೈಲಿನಲ್ಲಿಯೇ ಇರಬೇಕಾದ ಅನಿವಾರ್ಯತೆ ಇದೆ. ಆ ಬಳಿಕ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು.

ದರ್ಶನ್ ಅವರು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ವಿಲನ್ಸ್ ಗಾರ್ಡನ್ ನಾಗನ ಜೊತೆ ಆಪ್ತತೆ ಬೆಳೆಸಿಕೊಂಡಿದ್ದರು. ಅವನ ಜೊತೆ ಸಿಗರೇಟ್ ಸೇದುತ್ತಾ ಕುಳಿತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.




