ಸೋಷಿಯಲ್ ಮೀಡಿಯಾದಲ್ಲಿ ‘ದಚ್ಚು-ಕಿಚ್ಚ’ ಫ್ಯಾನ್ಸ್ ಡಿಚ್ಚಿ ಡಿಚ್ಚಿ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಇಬ್ಬರೂ ಒಂದು ಕಾಲದಲ್ಲಿ ಕುಚಿಕು ಗೆಳೆಯರು. ಆದ್ರೆ ಕಾರಣಾಂತರಗಳಿಂದ ಕೆಲ ವರ್ಷಗಳಿಂದ ಇಬ್ಬರ ನಡುವಿನ ಸ್ನೇಹ ಅಷ್ಟಕಷ್ಟೆ. ಇತ್ತೀಚೆಗೆ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಬಿಡುಗಡೆಯಾದ ದಿನವೇ ಪೈರಸಿಯಾಗಿತ್ತು. ಇದಕ್ಕೆ ಕಾರಣ ದರ್ಶನ್ ಅಭಿಮಾನಿಗಳು ಅಂತ ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚನ ಫ್ಯಾನ್ಸ್ ಮುಗಿಬಿದ್ದಿದ್ದರು. ಇದೀಗ ದರ್ಶನ್ ಅಭಿಮಾನಿಗಳು ಬಹಿರಂಗವಾಗಿ ಪತ್ರ ಬರೆದಿದ್ದಾರೆ. ಸುದೀಪ್ ಹೆಸರು ಬಳಸದೇ ಕೆಲ ಘಟನೆಗಳನ್ನ ಉಲ್ಲೇಖಿಸಿ ಪತ್ರ ಬರೆದಿರುವ ದರ್ಶನ್ […]
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಇಬ್ಬರೂ ಒಂದು ಕಾಲದಲ್ಲಿ ಕುಚಿಕು ಗೆಳೆಯರು. ಆದ್ರೆ ಕಾರಣಾಂತರಗಳಿಂದ ಕೆಲ ವರ್ಷಗಳಿಂದ ಇಬ್ಬರ ನಡುವಿನ ಸ್ನೇಹ ಅಷ್ಟಕಷ್ಟೆ. ಇತ್ತೀಚೆಗೆ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಬಿಡುಗಡೆಯಾದ ದಿನವೇ ಪೈರಸಿಯಾಗಿತ್ತು. ಇದಕ್ಕೆ ಕಾರಣ ದರ್ಶನ್ ಅಭಿಮಾನಿಗಳು ಅಂತ ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚನ ಫ್ಯಾನ್ಸ್ ಮುಗಿಬಿದ್ದಿದ್ದರು. ಇದೀಗ ದರ್ಶನ್ ಅಭಿಮಾನಿಗಳು ಬಹಿರಂಗವಾಗಿ ಪತ್ರ ಬರೆದಿದ್ದಾರೆ.
ಸುದೀಪ್ ಹೆಸರು ಬಳಸದೇ ಕೆಲ ಘಟನೆಗಳನ್ನ ಉಲ್ಲೇಖಿಸಿ ಪತ್ರ ಬರೆದಿರುವ ದರ್ಶನ್ ಅಭಿಮಾನಿಗಳು, ದರ್ಶನ್ ಹೆಸರು ಬಳಸಿಕೊಂಡು ಬೆಳೆದಿದ್ದೀರಿ, ಈಗ ಪ್ರಚಾರಕ್ಕೂ ಡಿಬಾಸ್ ಹೆಸರು ಬೇಕೇ..? ಎಂದು ಪ್ರಶ್ನಿಸಿದ್ದಾರೆ. ದರ್ಶನ್ ಅಭಿನಯದ ಚಕ್ರವರ್ತಿ, ತಾರಕ್, ಯಜಮಾನ, ಕುರುಕ್ಷೇತ್ರ ಚಿತ್ರಗಳ ಅಪಪ್ರಚಾರ ಆದಾಗ ಫ್ಯಾನ್ಸ್ ಯಾರನ್ನೂ ದೂಷಿಸಲಿಲ್ಲ, ಅಭಿಮಾನಿಗಳನ್ನ ಯುದ್ಧಕ್ಕೆ ಎತ್ತಿ ಕಟ್ಟಲಿಲ್ಲ. ಫ್ಯಾನ್ ವಾರ್ ಪರಿಚಯಿಸಿದ್ದು ನೀವು, ನಿಮ್ಮ ಫ್ಯಾನ್ಸ್ ಎಂದು ಗರಂ ಆಗಿದ್ದಾರೆ.
ನಟ ಗಣೇಶ್ ಅವರ ಮುಂಗಾರು ಮಳೆ ಬಗ್ಗೆ ಕೆಟ್ಟದಾಗಿ ಮಾತಾಡಿದ್ದೀರಿ. ರಾಜ್ಕಪ್ನಲ್ಲಿ ಜಗಳ, ನಟ ಯಶ್ ವಿರುದ್ಧ ಏಕವಚನ ಬಳಕೆ ಮಾಡಿ ಚಿತ್ರರಂಗವನ್ನು 2 ಭಾಗ ಮಾಡಿದ್ದೀರಿ. ನಿಮ್ಮ ಅಭಿಮಾನಿಗಳಿಂದಲೇ ದರ್ಶನ್ಗೆ ಅವಾಚ್ಯ ಪದಗಳಿಂದ ನಿಂದನೆಯಾಗುತ್ತಿದೆ. ಇದಕ್ಕೆ ನಿಮ್ಮ ಪರೋಕ್ಷ ಬೆಂಬಲ ಇದೆಯೇ? ಎಂದು ಉಲ್ಲೇಖಿಸಿ ದರ್ಶನ್ ಅಭಿಮಾನಿಗಳು ಪತ್ರ ಬರೆದಿದ್ದಾರೆ.
Published On - 7:34 pm, Mon, 16 September 19