‘ಶೀಘ್ರವೇ ಹೊಸ ದಿನಾಂಕ ಪ್ರಕಟಿಸುತ್ತೇವೆ’; ದರ್ಶನ್ ರ‍್ಯಾಲಿ ರದ್ದಾದ ಬಗ್ಗೆ ಮಾಹಿತಿ ನೀಡಿದ ಫ್ಯಾನ್ಸ್
ಬೊಮ್ಮನಹಳ್ಳಿ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಉಮಾಪತಿ ಅವರು ಸ್ಪರ್ಧಿಸಿದ್ದರು. ಆದರೆ, ಚುನಾವಣೆಯಲ್ಲಿ ಅವರು ಸೋತರು. ಈಗ ಮತ್ತದೇ ಕ್ಷೇತ್ರದಲ್ಲಿ ಅವರು ಸ್ಪರ್ಧೆ ಮಾಡುವ ಉದ್ದೇಶ ಇಟ್ಟುಕೊಂಡಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಬೈಕ್ ರ‍್ಯಾಲಿ ಮಾಡಲು ದರ್ಶನ್ ಫ್ಯಾನ್ಸ್ ಮುಂದಾಗಿದ್ದರು. ಇದಕ್ಕೆ ದರ್ಶನ್ ಕೂಡ ಸಾಥ್ ನೀಡಲಿದ್ದಾರೆ ಎನ್ನಲಾಗಿತ್ತು. ಆದರೆ, ರ‍್ಯಾಲಿಗೆ ಅವಕಾಶ ಸಿಕ್ಕಿಲ್ಲ.
ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಇಂದು (ಫೆಬ್ರವರಿ 26) ಬೃಹತ್ ಬೈಕ್ ರ‍್ಯಾಲಿ ನಡೆಸಲು ದರ್ಶನ್ (Darshan) ಫ್ಯಾನ್ಸ್ ಪ್ಲ್ಯಾನ್ ಮಾಡಿದ್ದರು. ಆದರೆ, ಈ ಪ್ಲ್ಯಾನ್ ಯಶಸ್ಸು ಕಾಣಲಿಲ್ಲ. ಭರ್ಜರಿ ರ‍್ಯಾಲಿಗೆ ಪೊಲೀಸರು ಅನುಮತಿ ನೀಡಲೇ ಇಲ್ಲ. ಈ ಹಿನ್ನೆಲೆಯಲ್ಲಿ ರ‍್ಯಾಲಿ ರದ್ದಾಗಿದೆ. ಈ ಬಗ್ಗೆ ದರ್ಶನ್ ಅಭಿಮಾನಿಗಳ ಕಡೆಯಿಂದ ಅಧಿಕೃತ ಮಾಹಿತಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಲಾಗಿದೆ. ಇದರಿಂದ ದರ್ಶನ್ಗೆ ಹಿನ್ನಡೆ ಆಗಿದೆ.
ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹಾಗೂ ದರ್ಶನ್ ಮಧ್ಯೆ ಮಾತಿನ ಸಮರ ನಡೆದಿದೆ. ದರ್ಶನ್ ನಟನೆಯ ‘ಕಾಟೇರ’ ಸಿನಿಮಾಗೆ ಕಥೆ ನೀಡಿದ್ದು ನಾನು ಎಂದಿದ್ದರು ಉಮಾಪತಿ. ಇದಕ್ಕೆ ಉತ್ತರ ನೀಡಿದ್ದ ದರ್ಶನ್ ಅವರು ತಗಡು ಪದ ಬಳಕೆ ಮಾಡಿದ್ದರು. ಇದಕ್ಕೆ ಉಮಾಪತಿ ಅವರು ಖಡಕ್ ಆಗಿ ಉತ್ತರ ನೀಡಿದ್ದರು. ಇನ್ನು ದರ್ಶನ್ ವಿರುದ್ಧ ಕೆಲವು ದೂರುಗಳು ದಾಖಲಾಗಿದ್ದು ಇದರ ಹಿಂದೆ ಉಮಾಪತಿ ಇದ್ದಾರೆ ಎಂಬುದು ದರ್ಶನ್ ಫ್ಯಾನ್ಸ್ ಆರೋಪ. ಈ ಘಟನೆ ಬೆನ್ನಲ್ಲೇ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ದರ್ಶನ್ ಬೈಕ್ ರ‍್ಯಾಲಿ ನಡೆಸಲು ಮುಂದಾಗಿದ್ದರು. ಆದರೆ, ಇದಕ್ಕೆ ಅನುಮತಿ ಸಿಕ್ಕಿಲ್ಲ.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಉಮಾಪತಿ ಅವರು ಸ್ಪರ್ಧಿಸಿದ್ದರು. ಆದರೆ, ಈ ಚುನಾವಣೆಯಲ್ಲಿ ಸೋತರು. ಈಗ ಮತ್ತದೇ ಕ್ಷೇತ್ರದಲ್ಲಿ ಅವರು ಸ್ಪರ್ಧೆ ಮಾಡುವ ಉದ್ದೇಶ ಇಟ್ಟುಕೊಂಡಿದ್ದಾರೆ. ಈ ಕಾರಣಕ್ಕೆ ಈ ಕ್ಷೇತ್ರದಲ್ಲಿ ಬೈಕ್ ರ‍್ಯಾಲಿ ಮಾಡಲು ದರ್ಶನ್ ಫ್ಯಾನ್ಸ್ ಮುಂದಾಗಿದ್ದರು. ಇದಕ್ಕೆ ದರ್ಶನ್ ಕೂಡ ಸಾಥ್ ನೀಡಲಿದ್ದಾರೆ ಎನ್ನಲಾಗಿತ್ತು. ಈಗ ಈ ಬಗ್ಗೆ ಹೊಸ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ಉಮಾಪತಿ ಶ್ರೀನಿವಾಸ್ ಕ್ಷೇತ್ರದಲ್ಲಿ ದರ್ಶನ್ ಅಭಿಮಾನಿಗಳ ಬೈಕ್ ರ‍್ಯಾಲಿಗೆ ಇಲ್ಲ ಪೊಲೀಸರ ಅನುಮತಿ?
‘ಆತ್ನೀಯ ಅಭಿಮಾನಿಗಳೇ ಕ್ಷಮೆ ಇರಲಿ. ಪೊಲೀಸ್ ಇಲಾಖೆಯಿಂದ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಡಿ. ಬಾಸ್ ಜಿಂದಾ ಬಾದ್ ಬೃಹತ್ ಬೈಕ್ ರ‍್ಯಾಲಿಯನ್ನು ಮುಂದೂಡಲಾಗಿದೆ. ಶೀಘ್ರದಲ್ಲೇ ಹೊಸ ದಿನಾಂಕ ತಿಳಿಸಲಾಗುವುದು’ ಎಂದು ಬರೆಯಲಾಗಿದೆ. ಮೂಲಗಳ ಪ್ರಕಾರ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಬಹುದು ಎಂದು ಪೊಲೀಸರು ಫ್ಯಾನ್ಸ್ಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ