ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿರೋ ನಟ ದರ್ಶನ್ ಹಾಗೂ ಗ್ಯಾಂಗ್ ಬೇರೆ ಬೇರೆ ಜೈಲುಗಳಲ್ಲಿ ವಿಚಾರಾಣಾಧೀನ ಖೈದಿಗಳಾಗಿ ಇಡಲಾಗಿದೆ. ಆರಂಭದಲ್ಲಿ ಅವರು ಬೆಂಗಳೂರಿನ ಜೈಲಿನಲ್ಲಿ ಇದ್ದರು. ಈ ವೇಳೆ ಅವರು ಹಣ ಪಡೆದು ಸಾಕಷ್ಟು ವ್ಯವಸ್ಥೆ ಪಡೆದಿದ್ದಾರೆ ಎನ್ನಲಾಗಿತ್ತು. ದರ್ಶನ್ ಜೈಲಿನಲ್ಲಿ ಹಾಯಾಗಿ ಸಮಯ ಕಳೆಯುತ್ತಾ ಇದ್ದ ಫೋಟೋ ವೈರಲ್ ಆಗಿತ್ತು. ಈ ಕಾರಣಕ್ಕೆ ಅವರನ್ನು ಬಳ್ಳಾರಿ ಜೈಲಿನಲ್ಲಿ ಶಿಫ್ಟ್ ಮಾಡಲಾಗಿತ್ತು. ಈಗ ಅವರು ಎಂಟು ದಿನಕ್ಕೆ ಎಷ್ಟು ಖರ್ಚು ಮಾಡಿದ್ದಾರೆ ಎಂಬ ಲೆಕ್ಕ ಸಿಕ್ಕಿದೆ.
ನಟ ದರ್ಶನ್ ಅವರು ದರ್ಶನ್ 735 ರೂಪಾಯಿ ಖರ್ಚು ಮಾಡಿದ್ದಾರೆ. ಕಾಫಿ, ಟೀಗಾಗಿ ಅವರು ಈ ಹಣ ಬಳಕೆ ಮಾಡಿಕೊಂಡಿದ್ದಾರೆ. ಅವರು ಇಲ್ಲಿ ಸರಳವಾದ ಜೀವನ ನಡೆಸೋ ಅನಿವಾರ್ಯತೆ ಬಂದೊದಗಿದೆ. ಮದ್ಯ ಸೇವನೆ, ಸಿಗರೇಟ್ ಸೇದಲು ಅವರಿಗೆ ಇಲ್ಲಿ ಅವಕಾಶವಿಲ್ಲ. ಇದರಿಂದ ಅವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ದರ್ಶನ್ ಅವರು ಹೊರಗೆ ಸಾಕಷ್ಟು ಸುಖವಾಗಿ ಜೀವನ ನಡೆಸುತ್ತಾ ಬಂದವರು. ವಾರಕ್ಕೆ ಎರಡು ಪಾರ್ಟಿ ಮಾಡುತ್ತಾ ಇರುತ್ತಿದ್ದರು. ಗೆಳೆಯರ ಜೊತೆ ಸುತ್ತಾಡುತ್ತಿದ್ದರು. ವನ್ಯ ಜೀವಿಗಳ ಬಗ್ಗೆ ಅವರಿಗೆ ಅಪಾರ ಪ್ರೀತಿ ಇತ್ತು. ಈ ಕಾರಣಕ್ಕೆ ದರ್ಶನ್ ಅವರಿಗೆ ಜೈಲಿನ ಜೀವನ ಕಷ್ಟ ಆಗುತ್ತಿದೆ.
ಇದನ್ನೂ ಓದಿ: ಚಾರ್ಜ್ಶೀಟ್ ಸಲ್ಲಿಕೆ ಬಳಿಕ ದೇವರ ಮೊರೆ ಹೋದ ದರ್ಶನ್ ಪತ್ನಿ ವಿಜಯಲಕ್ಷ್ಮಿ
ಬಳ್ಳಾರಿ ಜೈಲಿನಲ್ಲಿ ದರ್ಶನ್ ಅವರಿಗೆ ಕಠಿಣ ನಿಯಮ ಹಾಕಲಾಗಿದೆ. ಅವರು ಎಲ್ಲವನ್ನು ಫಾಲೋ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಅವರು ನಿತ್ಯ ಜೈಲಿನಲ್ಲಿ ನೀಡುವ ಊಟ ಹಾಗೂ ತಿಂಡಿ ಸೇವನೆ ಮಾಡುತ್ತಿದ್ದಾರೆ. ಇದರ ಜೊತೆಗೆ ಅವರು ಜೈಲಿನ ಕ್ಯಾಂಟೀನ್ನಲ್ಲಿ ಸಿಗುವ ಕೆಲ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ. ಸೆಪ್ಟೆಂಬರ್ 5ರಂದು ಅವರು ಜೈಲಿನಲ್ಲಿ ಪತ್ನಿ ವಿಜಯಲಕ್ಷ್ಮೀ ಅವರನ್ನು ಭೇಟಿ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.