Devil Movie: ‘ಡೆವಿಲ್’ ಚಿತ್ರಕ್ಕೆ ಹೊಸ ರಿಲೀಸ್ ದಿನಾಂಕ ಘೋಷಿಸಿದ ದರ್ಶನ್

|

Updated on: May 23, 2024 | 10:31 AM

ದರ್ಶನ್​ಗೆ ಕಳೆದ ಡಿಸೆಂಬರ್ ಅದೃಷ್ಟ ತಂದುಕೊಟ್ಟಿತ್ತು. ಅವರ ನಟನೆಯ ‘ಕಾಟೇರ’ ಸಿನಿಮಾ ರಿಲೀಸ್ ಆಗಿ 200 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ಈಗ ಅವರ ಮುಂದಿನ ಚಿತ್ರವನ್ನು ಡಿಸೆಂಬರ್ ಅಂತ್ಯಕ್ಕೆ ತೆರೆಮೇಲೆ ತರುತ್ತಿದ್ದಾರೆ. ಈ ಬಗ್ಗೆ ತಂಡದ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ.

Devil Movie: ‘ಡೆವಿಲ್’ ಚಿತ್ರಕ್ಕೆ ಹೊಸ ರಿಲೀಸ್ ದಿನಾಂಕ ಘೋಷಿಸಿದ ದರ್ಶನ್
ದರ್ಶನ್
Follow us on

ನಟ ದರ್ಶನ್ (Darshan) ಅವರು ಸದ್ಯ ವಿಶ್ರಾಂತಿಯಲ್ಲಿ ಇದ್ದಾರೆ. ಅವರ ಕೈಗೆ ಪೆಟ್ಟಾಗಿದ್ದರಿಂದ ಅವರು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ‘ಡೆವಿಲ್’ ಸಿನಿಮಾ ಶೂಟಿಂಗ್ ವೇಳೆ ಈ ಗಾಯ ಆಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದರೆ ಸಿನಿಮಾ ಅಕ್ಟೋಬರ್​ನಲ್ಲೇ ರಿಲೀಸ್ ಆಗಬೇಕಿತ್ತು. ಆದರೆ. ಕೈಗೆ ಪೆಟ್ಟಾದ ಕಾರಣ ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಈಗ ಹೊಸ ರಿಲೀಸ್ ದಿನಾಂಕವನ್ನು ದರ್ಶನ್ ಘೋಷಿಸಿದ್ದಾರೆ. ಈ ವರ್ಷ ಕ್ರಿಸ್​ಮಸ್​ಗೆ ಚಿತ್ರ ರಿಲೀಸ್ ಆಗಲಿದೆ.

ದರ್ಶನ್​ಗೆ ಕಳೆದ ಡಿಸೆಂಬರ್ ಅದೃಷ್ಟ ತಂದುಕೊಟ್ಟಿತ್ತು. ಅವರ ನಟನೆಯ ‘ಕಾಟೇರ’ ಸಿನಿಮಾ ರಿಲೀಸ್ ಆಗಿ 200 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ಈಗ ಅವರ ಮುಂದಿನ ಚಿತ್ರವನ್ನು ಡಿಸೆಂಬರ್ ಅಂತ್ಯಕ್ಕೆ ತೆರೆಮೇಲೆ ತರುತ್ತಿದ್ದಾರೆ. ಈ ಬಗ್ಗೆ ತಂಡದ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ. ಈ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ.

‘ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಹಾಗೂ ಕನ್ನಡಾಭಿಮಾನಿಗಳಿಗೆ ವಿಶೇಷ ಪ್ರಕಟಣೆ –  ‘ಡೆವಿಲ್’ ಚಿತ್ರವು ಇದೇ ಕ್ರಿಸ್ಮಸ್ 2024 ಬೆಳ್ಳಿತೆರೆಯ ಮೇಲೆ ಬರಲಿದೆ. ನಿಮ್ಮ ಪ್ರೀತಿ-ಹಾರೈಕೆ ಸದಾ ಕನ್ನಡ ಚಿತ್ರಗಳ ಮೇಲಿರಲಿ’ ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

ದರ್ಶನ್ ಅವರು ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಅವರು ವರ್ಷಕ್ಕೆ ಎರಡು ಸಿನಿಮಾಗಳಲ್ಲಿ ನಟಿಸೋ ಟಾರ್ಗೆಟ್ ಇಟ್ಟುಕೊಂಡಿದ್ದರು. ಈಗ ಕೈಗೆ ಪೆಟ್ಟಾಗಿರುವುದರಿಂದ ಈ ವರ್ಷ ಅದು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಪತ್ನಿ ವಿಜಯಲಕ್ಷ್ಮಿ ಜೊತೆ ಅವರು ವಿದೇಶಕ್ಕೆ ತೆರಳಿದ್ದರು. ಅಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ದರ್ಶನ್ ಅವರು ಸಂಪೂರ್ಣ ಗುಣಮುಖರಾದ ಬಳಿಕ ಸಿನಿಮಾದ ಶೂಟ್ ಆರಂಭಿಸಲಿದ್ದಾರೆ.

ಇದನ್ನೂ ಓದಿ: ಹೇಗಿದೆ ನೋಡಿ ದರ್ಶನ್ ನಟನೆಯ ‘ಡೆವಿಲ್’ ಮೇಕಿಂಗ್; ವಿಡಿಯೋ ರಿಲೀಸ್ ಮಾಡಿದ ಟೀಂ

‘ಡೆವಿಲ್’ ಚಿತ್ರವನ್ನು ಪ್ರಕಾಶ್ ವೀರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅವರಿಗೆ ನಿರ್ದೇಶನದಲ್ಲಿ ಸಾಕಷ್ಟು ಅನುಭವ ಇದೆ. ಈ ಮೊದಲು ದರ್ಶನ್ ನಟನೆಯ ‘ತಾರಕ್’ ಚಿತ್ರವನ್ನು ಅವರೇ ನಿರ್ದೇಶನ ಮಾಡಿದ್ದರು. ಈ ಸಿನಿಮಾ 2017ರಲ್ಲಿ ಬಿಡುಗಡೆ ಆಗಿತ್ತು. ಇವರು ಎರಡನೇ ಬಾರಿಗೆ ಒಂದಾಗಿದ್ದು, ಕುತೂಹಲ ಹೆಚ್ಚಿಸಿದೆ. ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಸಿನಿಮಾದ ಮೇಕಿಂಗ್ ವಿಡಿಯೋನ ತಂಡ ರಿಲೀಸ್ ಮಾಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.