Darshan: ನಟ ದರ್ಶನ್​ಗೆ ಮೊದಲೇ ಇತ್ತಾ ಗಂಡಾಂತರದ ಮುನ್ಸೂಚನೆ?

| Updated By: ರಾಜೇಶ್ ದುಗ್ಗುಮನೆ

Updated on: Jun 29, 2024 | 11:11 AM

ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದಾರೆ. ಈ ಕಾರಣದಿಂದಲೇ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಈ ಪ್ರಕರಣದಿಂದ ಹೊರಗೆ ಬರೋದು ಅವರಿಗೆ ಅಷ್ಟು ಸುಲಭವಿಲ್ಲ. ಅವರಿಗೆ ಈ ಬಗ್ಗೆ ಮೊದಲೆ ಸೂಚನೆ ಸಿಕ್ಕಿತ್ತು ಎನ್ನಲಾಗಿದೆ.

Darshan: ನಟ ದರ್ಶನ್​ಗೆ ಮೊದಲೇ ಇತ್ತಾ ಗಂಡಾಂತರದ ಮುನ್ಸೂಚನೆ?
ದರ್ಶನ್
Follow us on

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಅವರು ಅರೆಸ್ಟ್ ಆಗಿದ್ದಾರೆ. ಪವಿತ್ರಾ ಗೌಡ ಎ1 ಆರೋಪಿ ಆದರೆ, ದರ್ಶನ್ ಎ2 ಆರೋಪಿ ಎನಿಸಿಕೊಂಡಿದ್ದಾರೆ. ಸದ್ಯ ದರ್ಶನ್ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಅವರ ವಿರುದ್ಧ ಸದ್ಯ ಇರೋದು ಗಂಭೀರ ಆರೋಪ. ಹೀಗಾಗಿ, ಸದ್ಯಕ್ಕಂತೂ ಜಾಮೀನು ಸಿಗೋದು ಅನುಮಾನ ಎನ್ನಲಾಗುತ್ತಿದೆ. ಈ ಮಧ್ಯೆ ಈ ವರ್ಷ ಅಪಾಯ ಇದೆ ಅನ್ನೋದು ದರ್ಶನ್​ಗೆ ಮೊದಲೇ ಗೊತ್ತಿತ್ತಾ ಎನ್ನುವ ಪ್ರಶ್ನೆ ಮೂಡಿದೆ.

ಎರಡು ತಿಂಗಳ ಹಿಂದೆ ನಟ ದರ್ಶನ್ ಸುದರ್ಶನ ಹೋಮ ಮಾಡಿಸಿದ್ದರು. ನಕಾರಾತ್ಮಕ ಅಂಶಗಳನ್ನು ನಾಶಮಾಡಲು, ಶತ್ರುಗಳ ಮೇಲೆ ವಿಜಯ ಪ್ರಾಪ್ತಿಗೆ ಅಥವಾ ಮಾಟ-ಮಂತ್ರ ಮಾಡಿಸಿರೋ ಅನುಮಾನ ಇದ್ದರೆ ಈ ಹೋಮ ಮಾಡಿಸಲಾಗುತ್ತದೆ. ದರ್ಶನ್ ಕೂಡ ಇದೇ ಹೋಮ ಮಾಡಿಸಿದ್ದರು ಎನ್ನಲಾಗಿದೆ.

ಅರೆಸ್ಟ್ ಆಗುವುದಕ್ಕೂ ಮುನ್ನ ಅವರು ಮನೆಯನ್ನು ಹೊಸದಾಗಿ ರಿನೋವೇಷನ್ ಮಾಡಿದ್ದರು. ಹೀಗಾಗಿ, ಅವರು ವಿಶೇಷ ಪೂಜೆ ಇಟ್ಟುಕೊಂಡಿದ್ದರು. ಈ ಕಾರಣದಿಂದಲೇ ವಿಜಯಲಕ್ಷ್ಮಿ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಕೊಲೆ ನಡೆದ ಬಳಿಕ ದರ್ಶನ್ ಪೂಜೆಯಲ್ಲಿ ಭಾಗಿ ಆಗಿದ್ದರು.

ಇದನ್ನೂ ಓದಿ: ‘ಬಾಸ್-ಅಕ್ಕ ಚೆನ್ನಾಗಿದ್ರು, ನಟಿ ಬಂದಮೇಲೆ ಹೀಗಾಗಿದ್ದು’; ಜನಪ್ರಿಯ ಧಾರಾವಾಹಿಯಲ್ಲಿ ದರ್ಶನ್ ಕಥೆ?

ಆ್ಯಕ್ಷನ್ ದೃಶ್ಯಗಳನ್ನು ಇಡದಂತೆ ಮಿಲನಾ ಪ್ರಕಾಶ್​ಗೆ ದರ್ಶನ್ ಆಪ್ತರು ಹೇಳಿದ್ದರಂತೆ. ಜಾಗ್ರತೆ ವಹಿಸಿದರೂ ದರ್ಶನ್​ಗೆ ಪೆಟ್ಟಾಗಿತ್ತು. ಅವರ ಕೈಗೆ ಪೆಟ್ಟಾಗಲು ಇದೂ ಕಾರಣ. 2017-18ರಿಂದ ದರ್ಶನ್ ಅವರಿಗೆ ಸಾಡೇ ಸಾತಿ ಇದೆ. ಜೂನ್-ನವೆಂಬರ್ 15ವರೆಗೆ ಅವರು ಮತ್ತಷ್ಟು ತೊಂದರೆ ಅನುಭವಿಸಲಿದ್ದಾರೆ. ಹಣ, ಮಾತು, ಆರೋಗ್ಯ, ಸಾಂಸಾರಿಕವಾಗಿ ಸಮಸ್ಯೆ ತೀವ್ರವಾಗುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.