AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಸ್-ಅಕ್ಕ ಚೆನ್ನಾಗಿದ್ರು, ನಟಿ ಬಂದಮೇಲೆ ಹೀಗಾಗಿದ್ದು’; ಜನಪ್ರಿಯ ಧಾರಾವಾಹಿಯಲ್ಲಿ ದರ್ಶನ್ ಕಥೆ?

ಕಲರ್ಸ್ ಕನ್ನಡದಲ್ಲಿ ‘ಶಾಂತಂ ಪಾಪಂ’ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ನೋಡಿದ ಅನೇಕರಿಗೆ ರೇಣುಕಾ ಸ್ವಾಮಿ ಕೊಲೆ ಕೇಸ್ ನೆನಪಾಗಿದೆ. ದರ್ಶನ್ ಪ್ರಕರಣವನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಈ ಧಾರಾವಾಹಿ ಮಾಡಿದಂತೆ ಕಾಣುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ.

‘ಬಾಸ್-ಅಕ್ಕ ಚೆನ್ನಾಗಿದ್ರು, ನಟಿ ಬಂದಮೇಲೆ ಹೀಗಾಗಿದ್ದು’; ಜನಪ್ರಿಯ ಧಾರಾವಾಹಿಯಲ್ಲಿ ದರ್ಶನ್ ಕಥೆ?
‘ಬಾಸ್-ಅಕ್ಕ ಚೆನ್ನಾಗಿದ್ರು, ನಟಿ ಬಂದಮೇಲೆ ಹೀಗಾಗಿದ್ದು’; ಜನಪ್ರಿಯ ಧಾರಾವಾಹಿಯಲ್ಲಿ ದರ್ಶನ್ ಕಥೆ?
ರಾಜೇಶ್ ದುಗ್ಗುಮನೆ
|

Updated on: Jun 29, 2024 | 9:19 AM

Share

ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದಾರೆ. ಅವರ ವಿಚಾರಣೆ ನಡೆಸಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಕುರಿತು ಭರ್ಜರಿ ಚರ್ಚೆಗಳು ನಡೆಯುತ್ತಿವೆ. ಅನೇಕರು ನಾನಾ ರೀತಿಯ ಮೀಮ್​ಗಳನ್ನು ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಸಿನಿಮಾ ಮಾಡೋಕೆ ಕೆಲವರು ಟೈಟಲ್ ರಿಜಿಸ್ಟರ್ ಮಾಡುವ ಪ್ರಯತ್ನದಲ್ಲಿದ್ದಾರೆ. ಈ ಮಧ್ಯೆ ಧಾರಾವಾಹಿಯಲ್ಲಿ ದರ್ಶನ್ ಕಥೆ ಬಂತೇ ಎನ್ನುವ ಪ್ರಶ್ನೆ ಮೂಡಿದೆ.

ಕಲರ್ಸ್ ಕನ್ನಡದಲ್ಲಿ ‘ಶಾಂತಂ ಪಾಪಂ’ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ನೋಡಿದ ಅನೇಕರಿಗೆ ರೇಣುಕಾ ಸ್ವಾಮಿ ಕೊಲೆ ಕೇಸ್ ನೆನಪಾಗಿದೆ. ‘ಬಾಸ್​ ಹಾಗೂ ಅಕ್ಕ ಚೆನ್ನಾಗಿಯೇ ಇದ್ದರು. ನಟಿ ಬಂದಮೇಲೆ ಹೀಗೆ ಆಗಿದ್ದು’ ಎಂದು ದೇವನ ಸಹಾಯಕ ಹೇಳುತ್ತಾನೆ. ದರ್ಶನ್ ಜೀವನದಲ್ಲೂ ಹೀಗೆಯೇ ಆಗಿದೆ. ನಟಿಗೆ ತೊಂದರೆ ಕೊಟ್ಟವನ ಕರೆ ತರುವಂತೆ ದೇವ ತನ್ನ ಸಹಚರರಿಗೆ ಹೇಳುತ್ತಾನೆ. ಆ ಬಳಿಕ ನಟಿಗೆ ತೊಂದರೆ ಕೊಟ್ಟವನ ಚಿತ್ರಹಿಂಸೆ ಕೊಟ್ಟು ಸಾಯಿಸಲಾಗುತ್ತದೆ. ಆ ಬಳಿಕ ದೇವ ಅರೆಸ್ಟ್ ಆಗುತ್ತಾನೆ. ಈ ರೀತಿಯಲ್ಲಿ ಧಾರಾವಾಹಿ ಮೂಡಿ ಬಂದಿದೆ.

ಈ ಧಾರಾವಾಹಿ ಎಪಿಸೋಡ್ ನೋಡಿದ ಅನೇಕರು ದರ್ಶನ್ ಕಥೆಗೆ ಹೋಲಿಕೆ ಮಾಡಿಕೊಂಡಿದ್ದಾರೆ. ಆಪ್ತೆ ಪವಿತ್ರಾಗೆ ಕಿರುಕುಳ ನೀಡಿದ್ದಕ್ಕೆ ರೇಣುಕಾ ಸ್ವಾಮಿಯನ್ನು ದರ್ಶನ್ ಅವರು ಕೊಲೆ ಮಾಡಿದರು ಎನ್ನಲಾಗಿದೆ. ಈ ಆರೋಪದಲ್ಲಿ ಅರೆಸ್ಟ್ ಆಗಿ ಅವರು ವಿಚಾರಣೆ ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ದರ್ಶನ್​ನ ಬೆಂಬಲಿಸಿ ಪೋಸ್ಟ್ ಹಾಕಿದ್ದ ನಾಗಶೌರ್ಯಗೆ ಟ್ರೋಲ್ ಕಾಟ

ರೇಣುಕಾ ಸ್ವಾಮಿ ಕೊಲೆ ಕೇಸ್ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿದೆ. ದರ್ಶನ್ ಅವರು ಈ ಪ್ರಕರಣದಿಂದ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅವರ ಜೊತೆ ಪವಿತ್ರಾ ಗೌಡ ಸೇರಿ ಅನೇಕರು ಅರೆಸ್ಟ್ ಆಗಿದ್ದಾರೆ. ಕೆಲವರನ್ನು ತುಮಕೂರು ಜೈಲಿಗೆ ಶಿಫ್ಟ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More