ಕಿರುತೆರೆ ನಟಿಗೆ ಸ್ತನದ ಕ್ಯಾನ್ಸರ್; ಮೂರನೇ ಸ್ಟೇಜ್​ನಲ್ಲಿದೆ ಅಪಾಯಕಾರಿ ರೋಗ

ಸಾಮಾಜಿಕ ಜಾಲತಾಣದಲ್ಲಿ ಹಿನಾ ಖಾನ್ ಅವರು ಈ ಬಗ್ಗೆ ಪೋಸ್ಟ್ ಹಾಕಿದ್ದಾರೆ. ‘ನಾನು ಒಂದು ಪ್ರಮುಖ ಸುದ್ದಿ ಹಂಚಿಕೊಳ್ಳಬೇಕು. ನನಗೆ ಮೂರನೇ ಸ್ಟೇಜ್​ನ ಸ್ತನ ಕ್ಯಾನ್ಸರ್ ಇದೆ’ ಎಂದು ಹಿನಾ ಖಾನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಬಲ ತುಂಬುವ ಕೆಲಸ ಆಗುತ್ತಿದೆ.

ಕಿರುತೆರೆ ನಟಿಗೆ ಸ್ತನದ ಕ್ಯಾನ್ಸರ್; ಮೂರನೇ ಸ್ಟೇಜ್​ನಲ್ಲಿದೆ ಅಪಾಯಕಾರಿ ರೋಗ
ಹಿನಾ ಖಾನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Jun 30, 2024 | 8:34 PM

ಖ್ಯಾತ ಹಿಂದಿ ಕಿರುತೆರೆ ನಟಿ ಹಿನಾ ಖಾನ್ ಅವರಿಗೆ ಸ್ತನದ ಕ್ಯಾನ್ಸರ್ ಪತ್ತೆ ಆಗಿದೆ. ಈ ರೋಗ ಮೂರನೇ ಹಂತದಲ್ಲಿ ಇದೆ. ಈ ಬಗ್ಗೆ ಅವರು ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಅವರಿಗೆ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಫ್ಯಾನ್ಸ್ ಕೋರಿಕೊಂಡಿದ್ದಾರೆ. ಅವರು ಈ ರೋಗದ ವಿರುದ್ಧ ಜಯಸಿ ಬರಲಿ ಎಂದು ಫ್ಯಾನ್ಸ್ ಪ್ರಾರ್ಥಿಸುತ್ತಿದ್ದಾರೆ. ‘ಯೇ ರಿಷ್ತಾ ಕ್ಯಾ ಕೆಹ್ಲಾತಾ ಹೇ’, ‘ಕೌಸಟಿ ಜಿಂದಗಿ ಕೇ 2’ ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಹಿನಾ ಖಾನ್ ಅವರು ಈ ಬಗ್ಗೆ ಪೋಸ್ಟ್ ಹಾಕಿದ್ದಾರೆ. ‘ನಾನು ಒಂದು ಪ್ರಮುಖ ಸುದ್ದಿ ಹಂಚಿಕೊಳ್ಳಬೇಕು. ನನಗೆ ಮೂರನೇ ಸ್ಟೇಜ್​ನ ಸ್ತನ ಕ್ಯಾನ್ಸರ್ ಇದೆ’ ಎಂದು ಹಿನಾ ಖಾನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ನಾನು ಚೆನ್ನಾಗಿಯೇ ಇದ್ದೇನೆ. ನಾನು ಗಟ್ಟಿ ಇದ್ದೇನೆ. ಈ ರೋಗದಿಂದ ಹೊರ ಬರಲು ಪ್ರಯತ್ನಿಸುತ್ತಿದ್ದೇನೆ. ನನಗೆ ಚಿಕಿತ್ಸೆ ಕೊಡಿಸುವ ಕೆಲಸ ಶುರುವಾಗಿದೆ. ಮತ್ತಷ್ಟು ಗಟ್ಟಿಯಾಗಿ ಬರಲು ಏನೆಲ್ಲ ಬೇಕೋ ಅದೆಲ್ಲವನ್ನೂ ಮಾಡುತ್ತೇನೆ’ ಎಂದಿದ್ದಾರೆ ಹಿನಾ ಖಾನ್.

‘ನನಗೆ ಗೌರವ ಹಾಗೂ ಖಾಸಗಿತನವನ್ನು ನೀಡಿ. ನೀವು ನೀಡಿರುವ ಪ್ರೀತಿ ಹಾಗೂ ಆಶೀರ್ವಾದವನ್ನು ನಾನು ಪ್ರಶಂಶಿಸುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ. ಹಿನಾಗೆ ಈಗ 36 ವರ್ಷ ವಯಸ್ಸು. ಹಿಂದಿಯಲ್ಲಿ ಕೆಲವು ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. ಅವರು ಸಾಕಷ್ಟು ಪಾಸಿಟಿವ್ ಆಗಿದ್ದಾರೆ.

ಇದನ್ನೂ ಓದಿ:  ಶಾರುಖ್ ಖಾನ್-ಹಿರಾನಿ ಸಿನಿಮಾಗೆ ಆರಂಭದಲ್ಲೇ ಹಿನ್ನಡೆ; ಸಿನಿಮಾದಿಂದ ಹೊರ ನಡೆದ ಪ್ರಮುಖ ವ್ಯಕ್ತಿ

ಹಿನಾ ಅವರನ್ನು ಬೆಂಬಲಿಸಿ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ಗಳನ್ನು ಹಾಕುತ್ತಿದ್ದಾರೆ. ಹಿನಾಗೆ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿಯನ್ನು ಫ್ಯಾನ್ಸ್ ನೀಡಲಿ ಎಂದು ಅನೇಕರು ಕೋರಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:28 am, Sat, 29 June 24

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ