ಶಾರುಖ್ ಖಾನ್-ಹಿರಾನಿ ಸಿನಿಮಾಗೆ ಆರಂಭದಲ್ಲೇ ಹಿನ್ನಡೆ; ಸಿನಿಮಾದಿಂದ ಹೊರ ನಡೆದ ಪ್ರಮುಖ ವ್ಯಕ್ತಿ

‘ಡಂಕಿ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಕಂಬ್ಯಾಕ್ ಮಾಡಿದ ನಂತರ ಶಾರುಖ್ ಖಾನ್ ಒಪ್ಪಿಕೊಂಡ ಮೂರನೇ ಚಿತ್ರ ಇದಾಗಿದೆ. ಇನ್ನು, ಸೋಲೇ ಕಾಣದೇ ಇರುವ ರಾಜ್​ಕುಮಾರ್ ಹಿರಾನಿ ಅವರು ಈ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳುತ್ತಿದ್ದಾರೆ.

 ಶಾರುಖ್ ಖಾನ್-ಹಿರಾನಿ ಸಿನಿಮಾಗೆ ಆರಂಭದಲ್ಲೇ ಹಿನ್ನಡೆ; ಸಿನಿಮಾದಿಂದ ಹೊರ ನಡೆದ ಪ್ರಮುಖ ವ್ಯಕ್ತಿ
ಹಿರಾನಿ-ಶಾರುಖ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 12, 2022 | 6:45 PM

ಶಾರುಖ್ ಖಾನ್ (Shah Rukh Khan) ಅವರು ‘ಡಂಕಿ’ ಸಿನಿಮಾದ (Dunki Movie) ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ರಾಜ್​ಕುಮಾರ್ ಹಿರಾನಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸುಮಾರು 20 ದಿನಗಳ ಕಾಲ ಸಿನಿಮಾದ ಶೂಟಿಂಗ್ ಕೂಡ ಪೂರ್ಣಗೊಂಡಿತ್ತು. ಈಗ ಚಿತ್ರಕ್ಕೆ ಆಘಾತ ಎದುರಾಗಿದೆ. ಪ್ರಮುಖ ತಂತ್ರಜ್ಞರೊಬ್ಬರು ಚಿತ್ರದಿಂದ ಹೊರ ನಡೆದಿದ್ದಾರೆ. ಇದರಿಂದ ಚಿತ್ರಕ್ಕೆ ಹಿನ್ನಡೆ ಆಗಿದೆ. ಈ ಬಗ್ಗೆ ಶಾರುಖ್ ಖಾನ್ ಫ್ಯಾನ್ಸ್ ಕೊಂಚ ಬೇಸರಗೊಂಡಿದ್ದಾರೆ.

‘ಡಂಕಿ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಇದಕ್ಕೆ ಕಾರಣ ಹಲವು. ಕಂಬ್ಯಾಕ್ ಮಾಡಿದ ನಂತರ ಶಾರುಖ್ ಖಾನ್ ಒಪ್ಪಿಕೊಂಡ ಮೂರನೇ ಚಿತ್ರ ಇದಾಗಿದೆ. ಇನ್ನು, ಸೋಲೇ ಕಾಣದೇ ಇರುವ ರಾಜ್​ಕುಮಾರ್ ಹಿರಾನಿ ಅವರು ಈ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ಅಮಿತ್ ರಾಯ್ ಛಾಯಾಗ್ರಹಣ ಮಾಡಬೇಕಿತ್ತು. ಈಗ ಅವರು ಚಿತ್ರದಿಂದ ಹೊರ ನಡೆದಿರುವ ಬಗ್ಗೆ ಘೋಷಣೆ ಮಾಡಿದ್ದಾರೆ.

ಅಮಿತ್ ಅವರು 2003ರಲ್ಲೇ ಚಿತ್ರರಂಗಕ್ಕೆ ಕಾಲಿಟ್ಟವರು. ‘ಇಷ್ಕ್​ ವಿಷ್ಕ್​’ (2003) ಅವರ ಮೊದಲ ಸಿನಿಮಾ. ನಂತರ, ‘ದಿಲ್ ಮಾಂಗೆ ಮೋರ್​’ (2004), ‘ರಾಮ್ ಗೋಪಾಲ್ ವರ್ಮಾ ಕಿ ಆಗ್​’ (2007), ‘ಸರ್ಕಾರ್​ ರಾಜ್​’ (2008), ‘ದೀವಾನಾ ಮೇ ದೀವಾನಾ’ (2013) ಮೊದಲಾದ ಚಿತ್ರಗಳಿಗೆ ಅವರು ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದಿಂದ ಹೊರ ನಡೆದ ಬಗ್ಗೆ ಅವರು ಇಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ನಾನು ಡಂಕಿ ಸಿನಿಮಾ ಮಾಡುತ್ತಿಲ್ಲ. 18-19 ದಿನಗಳ ಕಾಲ ಶೂಟಿಂಗ್ ಮಾಡಿದೆ. ನಂತರ ಹೊರಬಂದೆ. ರಾಜ್​ಕುಮಾರ್ ಹಿರಾನಿ ಹಾಗೂ ನನ್ನ ಆಲೋಚನೆಗಳು ಬೇರೆ ರೀತಿಯಲ್ಲಿವೆ. ಇಬ್ಬರೂ ಒಂದೇ ರೀತಿಯಲ್ಲಿ ಯೋಚಿಸಲು ಸಾಧ್ಯವಾಗಿಲ್ಲ. ನಾವಿಬ್ಬರೂ ಸೌಹಾರ್ದಯುತವಾಗಿಯೇ ಬೇರೆ ಆಗಿದ್ದೇವೆ’ ಎಂದು ಅಮಿತ್​ ಹೇಳಿಕೊಂಡಿದ್ದಾರೆ.

‘ನಾನು ‘ಸಂಜು’ ಚಿತ್ರಕ್ಕಾಗಿ ‘ಬಾಬಾ ಬೋಲ್ತಾ ಹೈ ಬಸ್ ಹೋ ಗಯಾ..’ ಹಾಡನ್ನು ಶೂಟ್ ಮಾಡಿಕೊಟ್ಟಿದ್ದೆ. ಆಗ ನಾವಿಬ್ಬರೂ ಖುಷಿಯಿಂದ ಸಮಯ ಕಳೆದಿದ್ದೇವೆ. ಅವರ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯ ಇದೆ. ‘ಡಂಕಿ’ ಚಿತ್ರದಲ್ಲಿ ನಾನು ತೆಗದ ಶಾಟ್​ಗಳನ್ನು ಹಾಗೆಯೇ ಇಟ್ಟುಕೊಳ್ಳಲಾಗಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಶಾರುಖ್ ಖಾನ್ ಅಸಲಿ ವಯಸ್ಸೆಷ್ಟು? ಫ್ಯಾನ್ಸ್​ಗೆ ಹುಟ್ಟಿದೆ ದೊಡ್ಡ ಅನುಮಾನ

ಜಿಯೋ ಸ್ಟುಡಿಯೋ, ರೆಡ್​ ಚಿಲ್ಲೀಸ್ ಎಂಟರ್​​ಟೇನ್​ಮೆಂಟ್ ಹಾಗೂ ರಾಜ್​ಕುಮಾರ್ ಹಿರಾನಿ ಫಿಲ್ಮ್ಸ್​ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. 2023ರ ಡಿಸೆಂಬರ್ 22ರಂದು ಚಿತ್ರ ತೆರೆಗೆ ಬರುತ್ತಿದೆ. ಈಗ ಚಿತ್ರಕ್ಕೆ ಬರುವ ಹೊಸ ಕ್ಯಾಮೆರಾಮ್ಯಾನ್​ ಯಾರು ಎಂಬ ಕೌತುಕ ಮೂಡಿದೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ