ರಿಯಾಲಿಟಿ ಶೋಗಳ ಬಗ್ಗೆ ಒಬ್ಬೊಬ್ಬರು ಒಂದೊಂದು ಅಭಿಪ್ರಾಯಗಳನ್ನು ಹೊಂದಿದ್ದಾರೆ. ಈ ಅಭಿಪ್ರಾಯ ಮೂಡಲೂ ಅವರದ್ದೇ ಆದ ಕಾರಣಗಳು ಇರುತ್ತವೆ. ಅದೇ ರೀತಿ ಸೆಲೆಬ್ರಿಟಿಗಳ ವಲಯದಲ್ಲೂ ಈ ರಿಯಾಲಿಟಿ ಶೋಗಳ ಬಗ್ಗೆ ವಿವಿಧ ಅಭಿಪ್ರಾಯ ಇರುತ್ತದೆ. ದರ್ಶನ್ ಅವರು ಈ ಮೊದಲು ರಿಯಾಲಿಟಿ ಶೋಗಳ ಬಗ್ಗೆ ಮಾತನಾಡಿದ್ದರು. ಆ ವಿಡಿಯೋ ಈಗ ವೈರಲ್ ಆಗಿದೆ. ಇದನ್ನು ಫ್ಯಾನ್ಸ್ ಹಂಚಿಕೊಳ್ಳುತ್ತಿದ್ದಾರೆ.
ರಿಯಾಲಿಟಿ ಶೋಗಳ ಬಗ್ಗೆ ಒಬ್ಬರು ಒಂದೊಂದು ಅಭಿಪ್ರಾಯ ಹೊಂದಿರುತ್ತಾರೆ ಎಂಬುದು ಗೊತ್ತೇ ಇದೆ. ಸುದೀಪ್ ಅವರು ಬಿಗ್ ಬಾಸ್ನ ನಡೆಸಿಕೊಡುತ್ತಾರೆ. ಈ ಕಾರಣಕ್ಕೆ ಅವರಿಗೆ ಶೋ ಮೇಲೆ ನಂಬಿಕೆ ಇದೆ. ಅವರು ‘ಬಿಗ್ ಬಾಸ್’ನ ಸ್ಕ್ರಿಪ್ಟೆಡ್ ಶೋ ಎಂದು ಕರೆಯಲು ಸಿದ್ಧರಿಲ್ಲ. ಈ ಬಗ್ಗೆ ಅನೇಕ ಬಾರಿ ಅವರು ಸ್ಪಷ್ಟನೆ ಕೊಟ್ಟಿದ್ದೂ ಇದೆ. ಈ ಮಧ್ಯೆ ಹಳೆಯ ವಿಡಿಯೋ ಒಂದನ್ನು ವೈರಲ್ ಮಾಡಲಾಗಿದೆ. ಇದರಲ್ಲಿ ದರ್ಶನ್ ಅವರು ರಿಯಾಲಿಟಿ ಶೋ ಬಗ್ಗೆ ಮಾತನಾಡಿದ್ದರು.
ಆರ್ಯವರ್ಧನ್ ಗುರೂಜಿ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದುಕೊಂಡೇ ಬಿಗ್ ಬಾಸ್ ಶೋ ಬಗ್ಗೆ ಅಪಸ್ವರ ತೆಗೆದಿದ್ದರು. ಈ ಶೋ ಮ್ಯಾಕ್ಸ್ ಫಿಕ್ಸಿಂಗ್ ಎಂಬ ರೀತಿ ಮಾತನಾಡಿದ್ದರು. ಇದನ್ನು ಸುದೀಪ್ ಖಂಡಿಸಿದ್ದರು. ಇದಕ್ಕೆ ದರ್ಶನ್ ಅವರು ಮಾತನಾಡಿರುವ ವಿಡಿಯೋನ ಸೇರಿಸಲಾಗಿದೆ.
‘ರಿಯಾಲಿಟಿ ಶೋಗಳನ್ನು ನೋಡಿದ್ದೇವೆ. ಅಲ್ಲಿ ನಾವು ಪೊಪೆಟ್ ಆಗಿರುತ್ತೇವೆ. ವಾಹಿನಿಗಳಲ್ಲಿ 10 ಜನ ಕೂರಿಸಿದಾಗ ಆ್ಯಂಕರ್ ಧ್ವನಿ ದೊಡ್ಡದಾಗಿರುತ್ತದೆ. ಉಳಿದವರ ಧ್ವನಿ ಕೇಳುವುದೇ ಇಲ್ಲ. ಏಕೆಂದರೆ ಅವರು ಸರಿ ಹೇಳುತ್ತಾ ಇರುತ್ತಾರೆ. ವಾಹಿನಿಗಳಲ್ಲೇ ಹೀಗಿರುವಾಗ ರಿಯಾಲಿಟಿ ಶೋನಲ್ಲಿ ಎಷ್ಟಿರಬೇಡಿ. ಒಬ್ಬನು ಚೆನ್ನಾಗಿ ಆಡ್ತಾ ಇರ್ತಾರೆ. ಅವರಿಗೆ ಬೈಯ್ಯಿರಿ ಎನ್ನುತ್ತಾರೆ. ಇದೆಲ್ಲ ಬೇಕಾ? ಟೈಮ್ ಹಾಗೂ ತಾಳ್ಮೆ ಎರಡೂ ಬೇಕು. ಈಗ ಏನು ಬೇಕೋ ಅದನ್ನು ತೆಗೆದುಕೊಳ್ಳುವ ಅರ್ಹತೆ ಕೊಟ್ಟಿದ್ದಾರೆ. ಇನ್ಯಾಕೆ ಅವೆಲ್ಲ’ ಎಂದಿದ್ದರು ದರ್ಶನ್.
ಇದನ್ನೂ ಓದಿ: ದರ್ಶನ್, ವಿಜಯಲಕ್ಷ್ಮೀ, ವಿನೀಶ್; ಹ್ಯಾಪಿ ಫ್ಯಾಮಿಲಿಯ ಫೋಟೋ ನೋಡಿ
ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿ ಸಾಕಷ್ಟು ತೊಂದರೆ ಅನುಭವಿಸಿದರು. ಈಗ ಅವರು ಜಾಮೀನು ಪಡೆದು ಹೊರ ಬಂದಿದ್ದಾರೆ. ಶೀಘ್ರವೇ ಅವರು ‘ಡೆವಿಲ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಲಿದ್ದಾರೆ ಎನ್ನಲಾಗಿದೆ. ಸದ್ಯ ಅವರು ಮೈಸೂರಿನಲ್ಲಿ ಇದ್ದಾರೆ. ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.