ರಾಯಚೂರು: ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗುತ್ತಿದೆ. ರಾಬರ್ಟ್ ರಿಲೀಸ್ ಆದ ಕೇವಲ 6 ದಿನಕ್ಕೆಯೇ 60 ಕೋಟಿಗೂ ಅಧಿಕ ಹಣವನ್ನು ಬಾಚಿಕೊಂಡಿತ್ತು. ಸದ್ಯ ಯಶಸ್ಸಿನ ಉತ್ತುಂಗದಲ್ಲಿರುವ ನಾಯಕನಟ ದರ್ಶನ್ ಅವರು ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ. ಗುರು ರಾಘವೇಂದ್ರ ಸ್ವಾಮಿಗಳ ದರ್ಶನದ ಬಳಿಕ ಗೋಶಾಲೆಗೆ ಭೇಟಿ ನೀಡಿ ಗೋವುಗಳ ಜೊತೆ ಸಮಯ ಕಳೆದಿದ್ದಾರೆ.
ಈ ವೇಳೆ ಮಂತ್ರಾಲಯದಲ್ಲಿ ಗುರು ಭಕ್ತಿ ಉತ್ಸವ ಸಂಭ್ರಮ ಹಿನ್ನೆಲೆಯಲ್ಲಿ ಮಂತ್ರಾಲಯದ ರಾಯರ ಮಠಕ್ಕೆ ನಟ ದರ್ಶನ್ ಭೇಟಿ ನೀಡಿದ್ದು ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶಾಲು ಹೊದಿಸಿ ಸನ್ಮಾನ ಮಾಡಿದ್ರು. ಬಳಿಕ ದರ್ಶನ್ ಪೀಠಾಧಿಪತಿಯ ಕಾಲನ್ನು ಮುಟ್ಟಿ ನಮಸ್ಕರಿಸಿದ್ರು. ಇನ್ನು ಇದೇ ವೇಳೆ ನಟ ದರ್ಶನ್ ಕಾಮಿಡಿ ಕಿಂಗ್ ಪ್ರಾಣೇಶ್ ಅವರ ಮಾತುಗಳಿಗೆ ಮನ ಬಿಚ್ಚಿ ನಕ್ಕರು.
MANTRALAYA temple felicitated & blessed BOSS today ❤❤??
Jai Thoogudeepa #DBoss #ChallengingStar #Darshan@dasadarshan @Dcompany171 pic.twitter.com/5mmN8lZLQ8— Thoogudeepa Dynasty ® (@Darshanfans171) March 17, 2021
ಇದನ್ನೂ ಓದಿ: ಹಾಗೆ ನೋಡಿದ್ರೆ ನನಗೆ ಡಬಲ್ ಸಂಭಾವನೆ ಕೊಡಬೇಕು: ರಾಬರ್ಟ್ ಸಕ್ಸಸ್ ಮೀಟ್ನಲ್ಲಿ ದರ್ಶನ್ ಹೀಗೆ ಅಂದಿದ್ಯಾಕೆ?