ದರ್ಶನ್ ಪತ್ನಿಗೆ ಅಸಭ್ಯ ಕಮೆಂಟ್ ಪ್ರಕರಣ: 2 ನೋಟಿಸ್​​ಗೂ ಉತ್ತರ ನೀಡದ ವಿಜಯಲಕ್ಷ್ಮಿ

ವಿಜಯಲಕ್ಷ್ಮಿ ದರ್ಶನ್ ಅವರಿಗೆ ಅಶ್ಲೀಲ, ಅಸಭ್ಯ ಕಮೆಂಟ್ ಬಂದಿದೆ ಎಂದು ದೂರು ನೀಡಲಾಗಿತ್ತು. ಆದರೆ ಅದಕ್ಕೆ ಸಂಬಂಧಿಸಿದ ನೋಟಿಸ್​​ಗಳಿಗೆ ವಿಜಯಲಕ್ಷ್ಮಿ ಅವರು ಯಾವುದೇ ಉತ್ತರ ನೀಡುತ್ತಿಲ್ಲ. ಈಗಾಗಲೇ ಎರಡು ನೋಟಿಸ್ ಕಳಿಸಿರುವ ಪೊಲೀಸರು ಮೂರನೇ ನೋಟಿಸ್ ಕಳಿಸಲು ಮುಂದಾಗಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

ದರ್ಶನ್ ಪತ್ನಿಗೆ ಅಸಭ್ಯ ಕಮೆಂಟ್ ಪ್ರಕರಣ: 2 ನೋಟಿಸ್​​ಗೂ ಉತ್ತರ ನೀಡದ ವಿಜಯಲಕ್ಷ್ಮಿ
Darshan, Vijayalakshmi
Edited By:

Updated on: Sep 14, 2025 | 11:19 AM

ನಟ ದರ್ಶನ್ (Darshan) ಅವರ ಪತ್ನಿ ವಿಜಯಲಕ್ಷ್ಮಿಗೆ ಕೆಡಿಗೇಡಿಗಳು ಅಸಭ್ಯ ಕಮೆಂಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭ ಆಗಿತ್ತು. ಅಶ್ಲೀಲ ಕಮೆಂಟ್​​ಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ವಿಜಯಲಕ್ಷ್ಮಿ ಅವರಿಗೆ ಪೊಲೀಸರು ಎರಡು ಬಾರಿ ನೋಟಿಸ್ ಕಳಿಸಿದ್ದಾರೆ. ಆದರೆ ಈ ಎರಡೂ ನೋಟಿಸ್​​ಗಳಿಗೆ ಅವರು ಉತ್ತರ ನೀಡಿಲ್ಲ! ಘಟನೆ ಬಗ್ಗೆ ಹೇಳಿಕೆ ದಾಖಲಿಸಿಕೊಳ್ಳಲು ಚೆನ್ನಮ್ಮನಕರೆ ಅಚ್ಚುಕಟ್ಟು ಪೊಲೀಸರಿಂದ ನೋಟಿಸ್ ಕಳಿಸಲಾಗಿದೆ. ಪೊಲೀಸರ ನೋಟಿಸ್​​ಗಳಿಗೆ ವಿಜಯಲಕ್ಷ್ಮಿ (Vijayalakshmi Darshan) ಅವರು ಕ್ಯಾರೇ ಎನ್ನುತ್ತಿಲ್ಲ.

ವಿಜಯಲಕ್ಷ್ಮಿ ದರ್ಶನ್ ಬಗ್ಗೆ ಕೆಟ್ಟ ಕಮೆಂಟ್​​ಗಳು ಬಂದಿವೆ ಎಂದು ಮಹಿಳಾ ಆಯೋಗಕ್ಕೆ ದೂರು ನೀಡಲಾಗಿತ್ತು. ಹಾಗಾಗಿ ಮಹಿಳಾ ಆಯೋಗದಿಂದ ಸುಮೋಟೊ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಲಾಗಿತ್ತು. ಎರಡು ನೋಟಿಸ್​​ಗಳಿಗೂ ವಿಜಯಲಕ್ಷ್ಮಿ ಅವರಿಂದ ಯಾವುದೇ ಉತ್ತರ ಬಾರದ ಹಿನ್ನೆಲೆಯಲ್ಲಿ ಈಗ ಮೂರನೇ ನೋಟಿಸ್ ನೀಡಲು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರ ಸಿದ್ಧತೆ ಮಾಡಿಕೊಂಡಿದ್ದಾರೆ.

ಒಂದು ವೇಳೆ, ಮೂರನೇ ನೋಟಿಸ್​ಗೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದಾದರೆ ಪೊಲೀಸರು ಈ ಪ್ರಕರಣವನ್ನು ಮುಕ್ತಾಯ ಮಾಡಲಿದ್ದಾರೆ. ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಕೆ ಮಾಡಲಿದ್ದಾರೆ. ಮುಂದಿನ ತನಿಖೆಗೆ ಯಾವುದೇ ಮಾಹಿತಿ ಅಥವಾ ಲೀಡ್ ಸಿಗುತ್ತಿಲ್ಲ ಎಂದು ಸಿ ರಿಪೋರ್ಟ್ ಸಲ್ಲಿಕೆ ಮಾಡಲಾಗುತ್ತದೆ. ಈಗಲಾದರೂ ವಿಜಯಲಕ್ಷ್ಮಿ ಅವರು ನೋಟಿಸ್​​ಗೆ ಪ್ರತಿಕ್ರಿಯಿಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು.

ಕಳೆದ ಎರಡು ವರ್ಷಗಳ ಹಿಂದಿನ ಕಾಮೆಂಟ್​​ಗೆ ಇತ್ತೀಚೆಗೆ ದೂರು ನೀಡಲಾಯಿತು. 6 ಟ್ವಿಟರ್ ಖಾತೆಗಳು ಕೂಡ ಎರಡು ವರ್ಷಗಳ ಹಿಂದೆಯೇ ಡಿಲೀಟ್ ಆಗಿವೆ. ಕಳೆದ ಎರಡು ವರ್ಷಗಳಿಂದ ಆರು ಟ್ಟಿಟರ್ ಅಕೌಂಟ್​​ಗಳಿಂದ ಯಾವುದೇ ಮೆಸೇಜ್​​ಗಳು ವಿನಿಮಯ ಆಗಿಲ್ಲ. ಈ ಎಲ್ಲ ಮಾಹಿತಿಯನ್ನು ಕಲೆ ಹಾಕಿರುವ ಸಿಕೆ ಅಚ್ಚುಕಟ್ಟು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ

ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ಅರೆಸ್ಟ್ ಆದಾಗಿನಿಂದ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಟ್ಟಿಗರು ಪರ-ವಿರೋಧ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಭರದಲ್ಲಿ ಕೆಲವರು ಅಸಭ್ಯ, ಅಶ್ಲೀಲ ಪದ ಬಳಕೆ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.