
ಬೆನ್ನು ನೋವು ಅತೀವವಾಗಿ ಕಾಡಿದ್ದಾಗಿ ದರ್ಶನ್ (Darshan) ಈ ಮೊದಲು ಅಳಲು ತೋಡಿಕೊಂಡಿದ್ದರು. ಆಪರೇಷನ್ ಮಾಡಿಸಿಕೊಳ್ಳಬೇಕು ಎಂಬ ಕಾರಣದಿಂದ ಅವರು ಮಧ್ಯಂತರ ಜಾಮೀನು ಕೂಡ ಪಡೆದರು. ಸಿನಿಮಾ ಶೂಟ್ನಲ್ಲಿ ಬ್ಯುಸಿ ಆದ ಅವರು ಸರ್ಜರಿ ಮಾಡಿಸಿಕೊಳ್ಳಲೇ ಇಲ್ಲ. ಈಗ ಅವರು ಮತ್ತೆ ಜೈಲು ಸೇರಿದ್ದಾರೆ. ಈಗ ಅವರಿಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದೆಯಂತೆ. ಜೈಲಾಧಿಕಾರಿಗಳಿಗೆ ಪತ್ರ ಬರೆದು ಚಿಕಿತ್ಸೆಗೆ ಮನವಿ ಮಾಡಿದ್ದಾರೆ ಎಂದು ವರದಿ ಆಗಿದೆ.
ದರ್ಶನ್ ಅವರು ಕಳೆದ ಒಂದು ವಾರದಿಂದ ಬೆನ್ನು ನೋವು ಹೆಚ್ಚಾಗಿದ್ದು, ಕುಂಟುತ್ತಲೇ ನಡೆಯುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ, ಚಿಕಿತ್ಸೆ ಕೊಡಿಸಿ ಎಂದು ದರ್ಶನ್ ಮನವಿ ಮಾಡಿದ್ದಾರೆ. ಅವರ ಮನವಿ ಮೇರೆಗೆ ಸಿವಿ ರಾಮನ್ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆ ಜೈಲಧಿಕಾರಿಗಳು ಪತ್ರ ಬರೆದಿದ್ದರು. ತಪಾಸಣೆ ವೇಳೆ ಫಿಜಿಯೋಥೆರಫಿ ಅವಶ್ಯಕತೆ ಇದೆ ಎಂದು ವೈದ್ಯರು ಸೂಚಿಸಿದ್ದಾರೆ. ಸದ್ಯ ವಾರಕ್ಕೆ ಎರಡು ಬಾರಿ ಮಾತ್ರ ಫಿಸಿಯೋ ಥೆರಪಿ ಮಾಡಲು ವೈದ್ಯರು ಮುಂದಾಗಿದ್ದಾರೆ.
ಬೆನ್ನುನೋವಿನ ಜೊತೆಗೆ ದರ್ಶನ್ ಮೊಣಕೈ ನೋವು ಎಂದು ದೂರಿದ್ದಾರೆ. ಅವರಿಗೆ ಕಾರು ಅಪಘಾತ ಆದಾಗ ಮೊಣಕೈಗೆ ಪೆಟ್ಟು ಬಿದ್ದು ಶಸ್ತ್ರಚಿಕಿತ್ಸೆ ಆಗಿತ್ತು. ಈ ವೇಳೆ ಕೈಗೆ ರಾಡ್ ಹಾಕಲಾಗಿದೆ. ಈಗ ನೋವು ಹೆಚ್ಚಿದ್ದು, ಎರಡು ಬೆರಳು ಮರಗಟ್ಟಿದೆ ಎನ್ನಲಾಗುತ್ತಿದೆ.
ದರ್ಶನ್ ಹಾಸಿಗೆ-ದಿಂಬು ನೀಡಿ ಎಂದು ಅಲವತ್ತು ಕೊಳ್ಳುತ್ತಿದ್ದಾರೆ. ಈಗ ಅವರು ನೆಲದ ಮೇಲೆ ಮಲಗುತ್ತಿದ್ದು, ಶೀತಾಂಶಕ್ಕೆ ಬೆನ್ನು ನೋವು ಮತ್ತೆ ನೋವು ಜಾಸ್ತಿಯಾಗಿದೆ. ಹೀಗಾಗಿ ಮೊಣಕೈ ನೋವಿಗೂ ಚಿಕಿತ್ಸೆ ನೀಡಲು ಚಿಂತಿಸಲಾಗಿದೆ.
ಇದನ್ನೂ ಓದಿ: ದರ್ಶನ್ ಅಂಥಹಾ ವ್ಯಕ್ತಿಯ ನೋಡಿಯೇ ಇಲ್ಲ ಎಂದ ರಚನಾ: ಚಿತ್ರಗಳಲ್ಲಿ ನೋಡಿ ನಟಿಯ ಅಂದ
ಸದ್ಯ ದರ್ಶನ್ ಅವರು ‘ಡೆವಿಲ್’ ಸಿನಿಮಾ ಕೆಲಸ ಪೂರ್ಣಗೊಳಿಸಿದ್ದಾರೆ. ಈ ಚಿತ್ರ ಡಿಸೆಂಬರ್ 12ರಂದು ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಕೆಲವು ಹಾಡುಗಳು ರಿಲೀಸ್ ಆಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:51 am, Wed, 15 October 25