
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಈ ವಾರ ಎರಡು ದೊಡ್ಡ ಚಾಲೆಂಜ್ಗಳು ಎದುರಾಗುತ್ತಾ ಇವೆ. ಅದುವೇ ಮಾರ್ಕ್ ಹಾಗೂ ‘45’ ಸಿನಿಮಾಗಳು. ಎರಡೂ ಭಿನ್ನ ಜಾನರ್ ಚಿತ್ರಗಳು. ಎರಡೂ ಚಿತ್ರಕ್ಕೆ ಅದರದ್ದೇ ಆದ ಆಡಿಯನ್ಸ್ ಇದ್ದಾರೆ. ಈ ಎರಡೂ ಸಿನಿಮಾಗಳು ಡೆವಿಲ್ ಕಲೆಕ್ಷನ್‌ಗೆ ಸಾಕಷ್ಟು ಹೊಡೆತ ಕೊಡೋ ಎಲ್ಲಾ ಸಾಧ್ಯತೆ ಇದೆ. ಈಗೇ ತಗ್ಗಿರೋ ಕಲೆಕ್ಷನ್, ನಂತರ ಪಾತಾಳ ಕಾಣಲಿದೆ.
‘ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ರಿಲೀಸ್ ಆಯಿತು. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆ ತಕ್ಕ ಮಟ್ಟಿಗೆ ರೀಚ್ ಆಗಲು ಸಿನಿಮಾ ಬಳಿ ಸಾಧ್ಯವಾಗಿದೆ. ಈ ಸಿನಿಮಾ ಮೊದಲ ದಿನ 10 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಆ ಬಳಿಕ ನಿಧಾನವಾಗಿ ಸಿನಿಮಾ ಗಳಿಕೆಯಲ್ಲಿ ಕುಸಿತ ಕಂಡಿತು. ಈಗ ಸಿನಿಮಾದ ಒಟ್ಟಾರೆ ಕಲೆಕ್ಷನ್ 33.26 ಕೋಟಿ ರೂಪಾಯಿ (ಗ್ರಾಸ್ ಕಲೆಕ್ಷನ್) ಆಗಿದೆ.
ಚಿತ್ರದ ಬಜೆಟ್ ಸರಿ ಸುಮಾರು 45 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಟಿವಿ ಹಕ್ಕು, ಒಟಿಟಿ ಹಕ್ಕು ಮಾರಾಟ ಸೇರಿದರೂ ನಿರ್ಮಾಪಕರಿಗೆ ದೊಡ್ಡ ಮಟ್ಟದಲ್ಲಿ ಲಾಭ ಆಗೋದು ಅನುಮಾನವೇ. ಮುಂದಿನ ದಿನಗಳಲ್ಲಿ ಚಿತ್ರದ ಲೈಪ್ಟೈಮ್ ಕಲೆಕ್ಷನ್ ಇನ್ನು ತೀವ್ರವಾಗಿ ಏರಿಕೆ ಕಾಣೊದು ಅನುಮಾನವೇ.
ಇದನ್ನೂ ಓದಿ: ‘ಈ ಹಿಂದೆ ದರ್ಶನ್ ಬಗ್ಗೆ ಕೆಟ್ಟದ್ದು ಮಾತನಾಡಿದ್ರೆ ತೋರಿಸಲಿ’; ಕಿಚ್ಚ ಸುದೀಪ್ ಸವಾಲು
ದರ್ಶನ್ ಅವರು ಸದ್ಯ ಜೈಲಿನಲ್ಲಿ ಇದ್ದಾರೆ. ಹೀಗಿರುವಾಗಲೇ ಅವರ ಚಿತ್ರ ತೆರೆಗೆ ಬಂದಿದೆ. ಈ ಸಿನಿಮಾ ಪ್ರಚಾರ ಜವಾಬ್ದಾರಿಯನ್ನು ಅಭಿಮಾನಿಗಳು ವಹಿಸಿಕೊಂಡಿದ್ದರು. ಅವರು ಒಂದು ಹಂತಕ್ಕೆ ಸಿನಿಮಾನ ಮೇಲಕ್ಕೆ ತೆಗೆದುಕೊಂಡು ಹೋದರು. ಈಗ ‘ಮಾರ್ಕ್’ ಹಾಗೂ ‘45’ ಚಿತ್ರದಿಂದ ಸಿನಿಮಾ ಸಾಕಷ್ಟು ಸ್ಪರ್ಧೆ ಎದುರಿಸಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.