AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಷ್ಣುವರ್ಧನ್ ಕೊನೆಯ ವರ್ಷಗಳಲ್ಲಿ ಹಾಗೆ ನಡೆದುಕೊಂಡಿದ್ದೇಕೆ? ವಿವರಿಸಿದ ಕಿಚ್ಚ ಸುದೀಪ್

ಸುದೀಪ್ ಅವರ ‘ಮಾರ್ಕ್’ ಸಿನಿಮಾ ಪ್ರಚಾರದ ನಡುವೆ ಎದುರಾದ ವಿವಾದದ ಬಗ್ಗೆ ಮಾತನಾಡಿದ್ದಾರೆ. ಅವರು ನೀಡಿದ ಜೀವನ ಪಾಠ ಎಲ್ಲರಿಗೂ ಅನ್ವಯ ಆಗುವಂಥದ್ದು. ‘ನಮ್ಮ ಜೊತೆ ನಿಲ್ಲುವವರು ಇದ್ದರೆ ಮಾತ್ರ ಯುದ್ಧಕ್ಕೆ ಹೋಗಿ’ ಎಂಬ ಕಿವಿಮಾತು ಹೇಳಿದ್ದಾರೆ. ವಿಷ್ಣುವರ್ಧನ್ ಅವರ ಮೌನದ ತಾತ್ವಿಕತೆಯನ್ನು ಕಿಚ್ಚ ಹತ್ತಿರದಿಂದ ಕಂಡಿದ್ದರು.

ವಿಷ್ಣುವರ್ಧನ್ ಕೊನೆಯ ವರ್ಷಗಳಲ್ಲಿ ಹಾಗೆ ನಡೆದುಕೊಂಡಿದ್ದೇಕೆ? ವಿವರಿಸಿದ ಕಿಚ್ಚ ಸುದೀಪ್
ಸುದೀಪ್ ವಿಷ್ಣು
ರಾಜೇಶ್ ದುಗ್ಗುಮನೆ
|

Updated on:Dec 24, 2025 | 7:34 AM

Share

ಸುದೀಪ್ (Sudeep) ಅವರು ‘ಮಾರ್ಕ್’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಡಿಸೆಂಬರ್ 25ರಂದು ಸಿನಿಮಾ ತೆರೆಗೆ ಬರಲಿದೆ. ಈ ಮಧ್ಯೆ ಸುದೀಪ್ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ‘ಮಾರ್ಕ್’ ಪ್ರೀರಿಲೀಸ್ ಈವೆಂಟ್​​ನಲ್ಲಿ ಮಾತನಾಡುವಾಗ ಅವರು ಆಡಿದ ಮಾತು ಚರ್ಚೆಗೆ ಕಾರಣ ಆಗಿತ್ತು. ಈ ವಿವಾದ ಮಧ್ಯೆ ಸುದೀಪ್ ಅವರು ಒಂದು ಜೀವನದ ಪಾಠ ಹೇಳಿದ್ದಾರೆ. ‘ನಮ್ಮ ಜೊತೆ ನಿಂತುಕೊಳ್ಳುತ್ತಾರೆ ಎಂಬುದು ಗೊತ್ತಿದ್ದರೆ ಮಾತ್ರ ಯುದ್ಧಕ್ಕೆ ಹೋಗಿ’ ಎಂದು ಕಿವಿ ಮಾತು ಹೇಳಿದ್ದಾರೆ ಸುದೀಪ್.

ವಿಷ್ಣುವರ್ಧನ್ ಅವರಿಗೆ ಸುದೀಪ್ ತುಂಬಾನೇ ಆಪ್ತರಾಗಿದ್ದರು. ವಿಷ್ಣು ಅವರನ್ನು ಸುದೀಪ್ ಯಾವಾಗಲೂ ಪ್ರೀತಿಯಿಂದ ದಾದಾ ಎನ್ನುತ್ತಿದ್ದರು. ಕಿಚ್ಚ ಅವರು ವಿಷ್ಣುವರ್ಧನ್ ಕಂಡ ರೀತಿಯ ಬಗ್ಗೆ ಹೇಳಿದ್ದರು. ಅವರು ತಮ್ಮ ಕೊನೆಯ ವರ್ಷಗಳಲ್ಲಿ ತುಂಬಾನೇ ಸೈಲೆಂಟ್ ಆಗಿಯೇ ಇದ್ದರಂತೆ. ಹೀಗೇಕೆ ಎಂಬ ಪ್ರಶ್ನೆಗೆ ಸುದೀಪ್ ಉತ್ತರಿಸಿದರು.

‘ವಿಷ್ಣುವರ್ಧನ್ ದೊಡ್ಡ ವ್ಯಕ್ತಿ. ಅವರು ಬರ್ತಾ ಬರ್ತಾ ಮನೆಯಲ್ಲಿ ದೇವರು ರೀತಿ ಕೂತಿರುತ್ತಿದ್ದರು. ಅವರಿಗೆ ಇರೋ ತಾಕತ್ತಿಗೆ ಎಲ್ಲವನ್ನೂ ಬಗೆಹರಿಸಬಹುದಿತ್ತು. ಆದರೆ, ನೋಡಿ ನೋಡಿ ಸಾಕಾಗಿತ್ತು. ಅಪ್ಪಾಜಿ ಹೀಗಾಗ್ತಾ ಇದೆ ಎಂದು ಹೇಳಿದರೆ ಕಾಫಿ ಕುಡಿಯಿರಿ ಆರಾಮಾಗಿ ಇರಿ ಎನ್ನುತ್ತಿದ್ದರು. ನೀವು ಗಲಾಟೆಗೆ ಹೋದರೆ ನಿಮ್ಮ ಜೊತೆ ಇದ್ದವರು ಇರುತ್ತಲೇ ಇರಲಿಲ್ಲ’ ಎನ್ನುತ್ತಿದ್ದರು ಸುದೀಪ್.

ಇದನ್ನೂ ಓದಿ: ‘ಈ ಹಿಂದೆ ದರ್ಶನ್ ಬಗ್ಗೆ ಕೆಟ್ಟದ್ದು ಮಾತನಾಡಿದ್ರೆ ತೋರಿಸಲಿ’; ಕಿಚ್ಚ ಸುದೀಪ್ ಸವಾಲು

‘ಅದು ಅವರ ಅನುಭವ. ನಾವು ಹೇಗೆ ಇರಬೇಕು ಎಂಬುದನ್ನು ನೋಡಿಕೊಂಡರೆ ಸೊಸೈಟಿ ಇನ್ನೂ ಚೆನ್ನಾಗಿ ಆಗುತ್ತದೆ. ನಮ್ಮನೆ ಸ್ವಚ್ಛವಾಗಿಟ್ಟುಕೊಂಡರೆ ಅದರಿಂದ ಸ್ಫೂರ್ತಿ ಪಡೆದು ಪಕ್ಕದ ಮನೆಯವರು ಕ್ಲೀನ್ ಆಗಿ ಇಟ್ಟುಕೊಳ್ಳಬಹುದು. ಹೀಗೆ ಮುಂದುವರಿದು ಇಡೀ ದೇಶ ಕ್ಲೀನ್ ಆಗುತ್ತದೆ’ ಎನ್ನುತ್ತಾರೆ ಸುದೀಪ್. ‘ಮಾರ್ಕ್’ ಸಿನಿಮಾ ಡಿಸೆಂಬರ್ 25ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ವಿಜಯ್ ಕಾರ್ತಿಕೇಯನ್ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:34 am, Wed, 24 December 25

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!