
ನಟ ದರ್ಶನ್ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿ ಇದ್ದಾರೆ. ಜೈಲಿನಲ್ಲಿ ಇರುವಾಗಲೇ ಅವರ ನಟನೆಯ ‘ಡೆವಿಲ್’ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಟ್ರೇಲರ್ ಇಂದು (ಡಿಸೆಂಬರ್ 5) ರಿಲೀಸ್ ಆಗಿದೆ. ಔಟ್ ಆ್ಯಂಡ್ ಔಟ್ ಮಾಸ್ ಆ್ಯಕ್ಷನ್ ಅಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ಅಲ್ಲೇ ಅವರು ಅಭಿಮಾನಿಗಳಿಗೆ ಸಂದೇಶ ಒಂದನ್ನು ನೀಡಿದ್ದಾರೆ.
ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ ಅಲ್ಲಿ ಒಮ್ಮೆ ಜೈಲಿಗೆ ಹೋದರು. ಈ ವೇಳೆ ಅವರಿಗೆ ಜಾಮೀನು ಸಿಕ್ಕಿತು. ಈ ವರ್ಷ ಆಗಸ್ಟ್ 14ರಂದು ಜಾಮೀನು ರದ್ದಾಗಿ ಅವರು ಮತ್ತೆ ಜೈಲಿಗೆ ಹೋಗಬೇಕಾಯಿತು. ಸದ್ಯ ಅವರು ಜೈಲಿನಲ್ಲೇ ಇದ್ದಾರೆ. ಜೈಲಿಗೆ ತೆರಳುವುದಕ್ಕೂ ಮೊದಲು ಸಿನಿಮಾ ಕೆಲಸ ಪೂರ್ಣಗೊಳಿಸಿದ್ದಾರೆ. ಅವರು ಜೈಲು ಸೇರಿ ನಾಲ್ಕು ತಿಂಗಳು ಕಳೆಯುತ್ತಾ ಬಂದಿದೆ. ಈಗ ಅವರ ಚಿತ್ರ ತೆರೆಗೆ ಬರುತ್ತಿದೆ.
ಮಿಲನ ಪ್ರಕಾಶ್ ನಿರ್ದೇಶನದ ‘ಡೆವಿಲ್’ ಡಿಸೆಂಬರ್ 11ರಂದು ತೆರೆಗೆ ಬರುತ್ತಿದೆ. ಟ್ರೇಲರ್ ಮೂಲಕ ಸಿನಿಮಾದ ಝಲಕ್ ತೋರಿಸಲಾಗಿದೆ. ಸಿನಿಮಾ ಉದ್ದಕ್ಕೂ ದರ್ಶನ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಟ್ರೇಲರ್ ಅಭಿಮಾನಿಗಳಿಗೆ ಇಷ್ಟ ಆಗಿದೆ. ಅಭಿಮಾನಿಗಳು ಮುಗಿಬಿದ್ದು ವೀಕ್ಷಿಸುತ್ತಿದ್ದು, ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಸಿನಿಮಾದ ಟ್ರೇಲರ್ ಕೊನೆಯಲ್ಲಿ ಬರೋ ಡೈಲಾಗ್ ಗಮನ ಸೆಳೆಯುವ ರೀತಿಯಲ್ಲಿ ಇದೆ.
ಇದನ್ನೂ ಓದಿ: Devil Trailer: ಕ್ಷಣಕ್ಕೊಂದು ಬಣ್ಣ, ಗಳಿಗೆಗೊಂದು ವೇಷ; ಇದು ‘ಡೆವಿಲ್’ ನಿಜರೂಪ
‘ಸೂರ್ಯಂಗೆ ತುಂಬ ಹೊತ್ತು ಗ್ರಹಣ ಹಿಡ್ಯಲ್ಲ, ನಾನು ಬರ್ತಾ ಇದೀನಿ ಚಿನ್ನ’ ಎಂದು ದರ್ಶನ್ ಹೇಳುತ್ತಾರೆ. ದರ್ಶನ್ ಸದ್ಯ ಜೈಲಿನಲ್ಲಿದ್ದು, ಅಪರಾಧ ಮುಕ್ತನಾಗಿ ಹೊರ ಬರೋ ಪ್ರಯತ್ನದಲ್ಲಿ ಇದ್ದಾರೆ. ಬೇಗ ಹೊರಗೆ ಬರ್ತೀನಿ ಅನ್ನೋದನ್ನು ಸೂಚಿಸಲು ಸಿನಿಮಾದಲ್ಲಿ ಈ ಡೈಲಾಗ್ ಇಡಲಾಗಿದೆಯೇ ಎಂಬ ಪ್ರಶ್ನೆ ಕಾಡಿದೆ.
ಇದನ್ನೂ ಓದಿ: ‘ಡೆವಿಲ್’ ಟ್ರೇಲರ್ನಲ್ಲಿ ಗಿಲ್ಲಿ ಪಾತ್ರದ ಝಲಕ್; ಸಖತ್ ಮಾಸ್
ಡೆವಿಲ್ ಚಿತ್ರಕ್ಕೆ ರಚನಾ ರೈ ನಾಯಕಿ. ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್, ವಿನಯ್ ಗೌಡ, ಗಿಲ್ಲಿ ನಟ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಡಿಸೆಂಬರ್ 11ರಂದು ವಿಶ್ವಾದ್ಯಂತ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.