Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬಿ ಗಾಯಕನಿಗೆ ಕನ್ನಡ ಹೇಳಿಕೊಟ್ಟ ದೀಪಿಕಾ ಪಡುಕೋಣೆ

Deepika Padukone: ಬೆಂಗಳೂರಿನ ದೀಪಿಕಾ ಪಡುಕೋಣೆ ಈಗ ಬಾಲಿವುಡ್​ ಅನ್ನು ಆಳುತ್ತಿದ್ದಾರೆ. ಹಾಲಿವುಡ್​ಗೂ ಹೋಗಿ ಬಂದಿರುವ ದೀಪಿಕಾ ಪಡುಕೋಣೆ ಕನ್ನಡವನ್ನು ಮರೆತಿಲ್ಲ. ಬೆಂಗಳೂರಿನಲ್ಲಿ ನಡೆದ ಪಂಜಾಬಿ ಗಾಯಕ ದಿಲ್ಜೀತ್ ದೊಸ್ಸಾಂಜ್​ ಅವರ ಕಾನ್ಸರ್ಟ್​ನಲ್ಲಿ ಅವರಿಗೆ ಕನ್ನಡ ಹೇಳಿಕೊಟ್ಟಿದ್ದಾರೆ.

ಪಂಜಾಬಿ ಗಾಯಕನಿಗೆ ಕನ್ನಡ ಹೇಳಿಕೊಟ್ಟ ದೀಪಿಕಾ ಪಡುಕೋಣೆ
Follow us
ಮಂಜುನಾಥ ಸಿ.
|

Updated on:Dec 07, 2024 | 4:00 PM

ಬೆಂಗಳೂರಿನ ಚೆಲುವೆ ದೀಪಿಕಾ ಪಡುಕೋಣೆ ಈಗ ಬಾಲಿವುಡ್​ನ ನಂಬರ್ 1 ಸ್ಟಾರ್ ನಟಿ. ಬಾಲಿವುಡ್ ಮಾತ್ರವೇ ಅಲ್ಲದೆ ಹಾಲಿವುಡ್​ನಲ್ಲಿಯೂ ಕಮಾಲ್ ತೋರಿಸಿ ಬಂದಿರುವ ದೀಪಿಕಾ ಪಡುಕೋಣೆ ಕನ್ನಡವನ್ನು ಮಾತ್ರ ಮರೆತಿಲ್ಲ. ಇತ್ತೀಚೆಗಷ್ಟೆ ತಾಯಿಯಾಗಿರುವ ದೀಪಿಕಾ ಪಡುಕೋಣೆ ಸಿನಿಮಾ ಚಿತ್ರೀಕರಣಗಳಿಂದ ಬಿಡುವು ಪಡೆದಿದ್ದಾರೆ. ಆದರೆ ಇದೀಗ ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಲೈವ್ ಕಾನ್ಸರ್ಟ್​ನಲ್ಲಿ ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದು ಮಾತ್ರವೇ ಅಲ್ಲದೆ, ಖ್ಯಾತ ಗಾಯಕ ದಿಲ್ಜೀತ್ ದೊಸ್ಸಾಂಗ್​ಗೆ ಕನ್ನಡ ಸಹ ಹೇಳಿಕೊಟ್ಟಿದ್ದಾರೆ.

ಭಾರತದ ಖ್ಯಾತ ಪಂಜಾಬಿ ಗಾಯಕ ದಿಲ್ಜೀತ್ ದೊಸ್ಸಾಂಜ್ ಭಾರತದ ಪ್ರಮುಖ ನಗರಗಳಲ್ಲಿ ಸಂಗೀತ ಗೋಷ್ಠಿಗಳನ್ನು ಆಯೋಜನೆ ಮಾಡುತ್ತಿದ್ದಾರೆ. ದಿಲ್ಜೀತ್​ರ ಲೈವ್ ಕಾನ್ಸರ್ಟ್​ ಟಿಕೆಟ್​ಗಳು ಲಕ್ಷಗಳಲ್ಲಿ ಮಾರಾಟವಾಗುತ್ತಿವೆ. ಪ್ರತಿ ಟಿಕೆಟ್​ಗೆ ಲಕ್ಷಕ್ಕೂ ಹೆಚ್ಚು ಮೊತ್ತಕ್ಕೆ ಬ್ಲಾಕ್​ನಲ್ಲಿ ಮಾರಾಟವಾಗುತ್ತಿವೆ. ಇದೀಗ ಭಾರತದಲ್ಲಿ ‘ದಿಲ್ಲುಮಿನಾಟಿ’ ಟೂರ್ ನಡೆಯುತ್ತಿದ್ದು, ನಿನ್ನೆ (ಡಿಸೆಂಬರ್ 06) ಬೆಂಗಳೂರಿನಲ್ಲಿ ದಿಲ್ಜೀತ್​ರ ಅದ್ಧೂರಿ ಕಾನ್ಸರ್ಟ್​ ನಡೆಯಿತು.

ದಿಲ್ಜೀತ್​ರ ಬೆಂಗಳೂರು ಕಾನ್ಸರ್ಟ್​ಗೆ ಭಾರಿ ಸಂಖ್ಯೆಯ ಅಭಿಮಾನಿಗಳು ಸೇರಿದ್ದರು. ದಿಲ್ಜೀತ್​, ತಮ್ಮ ಪ್ರತಿ ಕಾನ್ಸರ್ಟ್​ನಲ್ಲಿ ಒಬ್ಬ ವಿಶೇಷ ಅತಿಥಿಯನ್ನು ವೇದಿಕೆಗೆ ಕರೆತರುತ್ತಾರೆ. ವಿದೇಶಗಳಲ್ಲಿ ಶೋ ಮಾಡಿದಾಗ ಹಾಲಿವುಡ್ ತಾರೆಯರನ್ನು ಅತಿಥಿಯಾಗಿ ವೇದಿಕೆಗೆ ಕರೆತಂದಿದ್ದರು ದಿಲ್ಜೀತ್ ದೊಸ್ಸಾಂಜ್. ನಿನ್ನೆ ಬೆಂಗಳೂರಿನಲ್ಲಿ ಶೋ ನಡೆಸಿದಾಗ ಕನ್ನಡ ಚಿತ್ರರಂಗದ ಯಾವುದಾದರೂ ತಾರೆಯರನ್ನು ದಿಲ್ಜೀತ್ ಸ್ಟೇಜ್​ಗೆ ಕರೆತರುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ದಿಲ್ಜೀತ್ ದೊಸ್ಸಾಂಜ್ ದೀಪಿಕಾ ಪಡುಕೋಣೆಯನ್ನು ಸರ್ಪ್ರೈಸ್ ಅತಿಥಿಯಾಗಿ ಕರೆತಂದರು.

ಇದನ್ನೂ ಓದಿ:ಪ್ಯಾನ್ ವರ್ಲ್ಡ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ಆದರೆ ನಾಯಕಿಯಾಗಿ ಅಲ್ಲ

ವೇದಿಕೆಗೆ ಬಂದ ದೀಪಿಕಾ ಪಡುಕೋಣೆ ದಿಲ್ಜೀತ್ ದೊಸ್ಸಾಂಜ್​ಗೆ ಕನ್ನಡ ಹೇಳಿಕೊಟ್ಟರು. ದೀಪಿಕಾ ಪಡುಕೋಣೆ, ವೇದಿಕೆಗೆ ಬಂದಾಗ ಕನ್ನಡದಲ್ಲಿ ಮಾತನಾಡಲು ದಿಲ್ಜೀತ್ ಯತ್ನಿಸಿದರು. ಆದರೆ ಸರಿಯಾಗಿ ಮಾತನಾಡಲು ಆಗಲಿಲ್ಲ. ಆಗ ದೀಪಿಕಾ ಪಡುಕೋಣೆ, ‘ನಾನು ನಿಮ್ಮನ್ನು ಪ್ರೀತಿಸ್ತೀನಿ’ ಎಂದು ಕನ್ನಡದಲ್ಲಿ ಹೇಳಿಕೊಟ್ಟರು, ದಿಲ್ಜೀತ್ ದೊಸ್ಸಾಂಜ್ ಸಹ ದೀಪಿಕಾ ಪಡುಕೋಣೆ ಹೇಳಿಕೊಟ್ಟಂತೆ ಹೇಳಿದರು.

ದೀಪಿಕಾ ಪಡುಕೋಣೆ ಬೆಂಗಳೂರಿನ ಹುಡುಗಿ, ಅವರಿಗೆ ಕನ್ನಡ ಭಾಷೆ ಚೆನ್ನಾಗಿಯೇ ಗೊತ್ತು. ಅವರ ತಂದೆ ಪ್ರಕಾಶ್ ಪಡುಕೊಣೆ, ಈ ಹಿಂದೆ ಟಿವಿ9ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದಂತೆ, ದೀಪಿಕಾ ಪಡುಕೋಣೆ, ಬೆಂಗಳೂರಿನ ಮನೆಗೆ ಬಂದರೆ ಕನ್ನಡದಲ್ಲಿಯೇ ಮಾತನಾಡುತ್ತಾರಂತೆ. ಅಂದಹಾಗೆ ತಮ್ಮ ಸಹನಟರಿಗೆ ದೀಪಿಕಾ ಪಡುಕೋಣೆ ಈ ಹಿಂದೆಯೂ ಕೆಲ ಬಾರಿ ಕನ್ನಡ ಹೇಳಿಕೊಟ್ಟಿದ್ದಾರೆ. ‘ಚೆನ್ನೈ ಎಕ್ಸ್​ ಪ್ರೆಸ್​‘ ಸಿನಿಮಾ ಸಂದರ್ಭದಲ್ಲಿ ಶಾರುಖ್ ಖಾನ್​ಗೆ ದೀಪಿಕಾ ಕನ್ನಡ ಹೇಳಿಕೊಟ್ಟಿದ್ದರು. ಪತಿ ರಣ್ವೀರ್​ ಸಿಂಗ್​ಗೂ ಸಹ ಕನ್ನಡ ಹೇಳಿಕೊಟ್ಟಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:19 pm, Sat, 7 December 24