
‘ದಿ ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ಅಬ್ಬರದಲ್ಲಿ ರಿಲೀಸ್ ಆಯಿತು. ಸಿನಿಮಾ ರಿಲೀಸ್ ಆಗಿ ಎರಡು ವಾರ ಕಳೆದಿದೆ. ಇಷ್ಟು ದಿನ ಸಿನಿಮಾಗೆ ಕನ್ನಡದಲ್ಲಿ ದೊಡ್ಡ ಸ್ಪರ್ಧೆ ಇರಲಿಲ್ಲ. ಆದರೆ, ಈಗ ಪರಿಸ್ಥಿತಿ ಬದಲಾಗಿ ಹೋಗಿದೆ. ಚಿತ್ರಕ್ಕೆ ಕನ್ನಡ ಚಿತ್ರಗಳಿಂದಲೇ ಸ್ಪರ್ಧೆ ಏರ್ಪಡುತ್ತಾ ಇವೆ. ಕನ್ನಡದಲ್ಲಿ ಇಂದು (ಡಿಸೆಂಬರ್ 25) ‘ಮಾರ್ಕ್’ (Mark Movie) ಹಾಗೂ ‘45’ ಸಿನಿಮಗಳು ರಿಲೀಸ್ ಆಗಿವೆ. ಇದರಿಂದ ‘ಡೆವಿಲ್’ ಚಿತ್ರಕ್ಕೆ ಸಾಕಷ್ಟು ಹಿನ್ನಡೆ ಉಂಟಾಗಿದೆ. ನೂರಾರು ಶೋಗಳನ್ನು ಈ ಚಿತ್ರಕ್ಕೆ ನೀಡಲಾಗಿತ್ತು. ಈಗ ಅದು ಗಣನೀಯವಾಗಿ ಇಳಿಕೆ ಕಂಡಿದೆ.
ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಟ್ರೇಲರ್ ಗಮನ ಸೆಳೆದಿದೆ. ಇನ್ನು, ‘45’ ಸಿನಿಮಾ ಕೂಡ ನಿರೀಕ್ಷೆ ಮೂಡಿಸಿದೆ. ಈ ಚಿತ್ರ ಸಾವು ಹಾಗೂ ಬದುಕಿನ ಕಥೆಯನ್ನು ಹೇಳಲಿದೆ. ಈ ಚಿತ್ರದಲ್ಲಿ ಉಪೇಂದ್ರ, ರಾಜ್ ಬಿ ಶೆಟ್ಟಿ ಹಾಗೂ ಶಿವಣ್ಣ ನಟಿಸಿದ್ದಾರೆ.
ಈ ಎರಡೂ ಚಿತ್ರಗಳ ಅಬ್ಬರದಿಂದ ‘ಡೆವಿಲ್’ ಚಿತ್ರಕ್ಕೆ ದೊಡ್ಡ ಹೊಡೆತ ಉಂಟಾಗಿದೆ. ಈ ಸಿನಿಮಾಗೆ ಸಿಕ್ಕ ಶೋಗಳ ಸಂಖ್ಯೆ ಕಡಿಮೆ ಆಗಿದೆ. ಈ ಸಿನಿಮಾಗೆ ಬೆಂಗಳೂರಿನಲ್ಲಿ ಸಿಕ್ಕಿರುವುದು ಕೇವಲ 28 ಶೋಗಳು. ಶೋಗಳ ಸಂಖ್ಯೆಯಲ್ಲಿ ಕುಸಿತ ಕಂಡಿರುವುದರಿಂದ ಸಿನಿಮಾ ಕಲೆಕ್ಷನ್ ಕೂಡ ತೀವ್ರ ಗತಿಯಲ್ಲಿ ಕುಸಿಯುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಚಿತ್ರ 20-30 ಲಕ್ಷ ರೂಪಾಯಿ ಗಳಿಕೆ ಮಾಡುತ್ತಿದೆ. ಈಗ ಶೋ ಇಳಿಕೆ ಹಿನ್ನೆಲೆಯಲ್ಲಿ ಸಿನಿಮಾಗೆ ತೊಂದರೆ ಉಂಟಾಗಿದೆ.
ಇದನ್ನೂ ಓದಿ: ಈ ವಾರ ಅಖಾಡಕ್ಕೆ ‘ಮಾರ್ಕ್’, ‘45’: ಇನ್ನೂ ಕಡಿಮೆ ಆಗುತ್ತಾ ‘ದಿ ಡೆವಿಲ್’ ಕಲೆಕ್ಷನ್?
ಬಹುತೇಕ ಚಿತ್ರಮಂದಿರಗಳಿಂದ ‘ಡೆವಿಲ್’ ಸಿನಿಮಾವನ್ನು ತೆಗೆಯಲಾಗಿದೆ. ಸದ್ಯ ಮಾಗಡಿ ರಸ್ತೆಯಲ್ಲಿರುವ ವಿರೇಶ್ ಚಿತ್ರಮಂದಿರ ಹಾಗೂ ಬೆಂಗಳೂರಿನ ಗಾಂಧಿನಗರದಲ್ಲಿರುವ ಮುಖ್ಯ ಚಿತ್ರಮಂದಿರ ನರ್ತಕಿಯಲ್ಲಿ ನಾಲ್ಕು ಆಟಗಳನ್ನು ನೀಡಲಾಗಿದೆ. ಉಳಿದಂತೆ ಮಲ್ಟಿಪ್ಲೆಕ್ಸ್ಗಳಲ್ಲಿ ದಿನಕ್ಕೆ ಒಂದು ಅಥವಾ ಎರಡು ಆಟ ನೀಡಲಾಗಿದೆ.ಇದರ ಮಧ್ಯೆಯೂ ಕೆಲವು ಕಡೆಗಳಲ್ಲಿ ಸಿನಿಮಾ ಹೌಸ್ಫುಲ್ ಆಗುವ ಲಕ್ಷಣ ಕಾಣಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.