
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುವ ದರ್ಶನ್, ಇನ್ನೂ ಸಂಪೂರ್ಣವಾಗಿ ಸಾಮಾನ್ಯ ಜೀವನಕ್ಕೆ ಮರಳಲಾಗಿಲ್ಲ. ಆಗೊಮ್ಮೆ ಈಗೊಮ್ಮೆ ಕೆಲ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರಾದರೂ ಬಹಿರಂಗ ಕಾರ್ಯಕ್ರಮದಲ್ಲಿ ಅವರು ತೊಡಗಿಕೊಂಡಿಲ್ಲ. ಇದೀಗ ದರ್ಶನ್ರ ಹುಟ್ಟುಹಬ್ಬ ಬಂದಿದೆ. ಫೆಬ್ರವರಿ 16 ರಂದು ದರ್ಶನ್ ಹುಟ್ಟುಹಬ್ಬವಿದೆ. ದರ್ಶನ್ ಹುಟ್ಟುಹಬ್ಬದಂದು ಅಭಿಮಾನಿಗಳು ಸಂಭ್ರಮಾಚರಣೆ ಮಾಡುವುದು ಸಾಮಾನ್ಯ, ದರ್ಶನ್ ಸಹ ಅಭಿಮಾನಿಗಳನ್ನು ಭೇಟಿ ಮಾಡಿ ಖುಷಿ ಪಡುವುದು ನಡೆದುಕೊಂಡು ಬಂದಿದೆ. ಆದರೆ ಈ ಹುಟ್ಟುಹಬ್ಬ ಭಿನ್ನವಾಗಿರಲಿದೆ.
ದರ್ಶನ್ರ ಹುಟ್ಟುಹಬ್ಬದಂದು ‘ಡೆವಿಲ್’ ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ. ದರ್ಶನ್ ಜೈಲಿಗೆ ಹೋಗುವ ಸಮಯದಲ್ಲಿ ‘ಡೆವಿಲ್’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿತ್ತು. ‘ಡೆವಿಲ್’ ಚಿತ್ರೀಕರಣದ ಸಮಯದಲ್ಲಿಯೇ ದರ್ಶನ್ ಅನ್ನು ಬಂಧಿಸಲಾಗಿತ್ತು. ಇದೀಗ ಕಳೆದ ಏಳೆಂಟು ತಿಂಗಳಿನಿಂದಲೂ ‘ಡೆವಿಲ್’ ಸಿನಿಮಾದ ಚಿತ್ರೀಕರಣ ಬಂದ್ ಆಗಿದ್ದು, ಇದೀಗ ದರ್ಶನ್ ಹುಟ್ಟುಹಬ್ಬವಾದ ಫೆಬ್ರವರಿ 16 ರಂದು ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗುತ್ತಿದೆ.
‘ಡೆವಿಲ್’ ಸಿನಿಮಾದ ಹೆಸರನ್ನು ಸಹ ತುಸು ಬದಲಾವಣೆ ಮಾಡಲಾಗಿದೆ. ‘ಈ ಮೊದಲು ‘ಡೆವಿಲ್’ ಸಿನಿಮಾಕ್ಕೆ ‘ದಿ ಹೀರೋ’ ಎಂಬ ಅಡಿ ಬರಹ ಇತ್ತು. ಆದರೆ ಈಗ ‘ದಿ ಡೆವಿಲ್’ ಎಂದಷ್ಟೆ ಇದೆ. ‘ದಿ ಹೀರೋ’ ಅಡಿಬರಹವನ್ನು ತೆಗೆದು ಹಾಕಲಾಗಿದೆ. ಈ ನಿರ್ಣಯ ಏಕೆ ಮಾಡಬೇಕಾಯ್ತು ಎಂಬ ಮಾಹಿತಿ ಇಲ್ಲ. ರೇಣುಕಾ ಸ್ವಾಮಿ ಪ್ರಕರಣದ ಬಳಿಕ ಈ ಬದಲಾವಣೆ ಆಗಿರುವ ಸಾಧ್ಯತೆ ಇದೆ.
ಇದನ್ನೂ ಓದಿ:‘ನಮ್ಮ ಪ್ರೀತಿಯ ರಾಮು’ ಸಿನಿಮಾ ನೋಡಿ ಖುಷಿಪಟ್ಟ ದರ್ಶನ್ ಅಭಿಮಾನಿಗಳು
‘ಡೆವಿಲ್’ ಸಿನಿಮಾ ಅನ್ನು ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ 2017 ರಲ್ಲಿ ದರ್ಶನ್ ನಟನೆಯ ‘ತಾರಕ್’ ಸಿನಿಮಾ ಅನ್ನು ಪ್ರಕಾಶ್ ನಿರ್ದೇಶಿಸಿದ್ದರು. ಅದಾದ ಬಳಿಕ ಅವರು ಯಾವುದೇ ಸಿನಿಮಾ ನಿರ್ದೇಶನ ಮಾಡಿರಲಿಲ್ಲ, ಇದೀಗ ‘ಡೆವಿಲ್’ ಸಿನಿಮಾ ಮೂಲಕ ಮತ್ತೆ ನಿರ್ದೇಶನಕಕ್ಕೆ ಇಳಿದಿದ್ದರು. ಸಿನಿಮಾ ಶುರುವಾದ ಬೆನ್ನಲ್ಲೆ ದರ್ಶನ್ ಬಂದನವಾಗಿ ಸಿನಿಮಾ ನಿಂತು ಹೋಯಿತು. ಸಿನಿಮಾದಲ್ಲಿ ರಚನಾ ರೈ ನಾಯಕಿ. ಬಿಗ್ಬಾಸ್ಗೆ ಬಂದಿದ್ದ ವಿನಯ್ ಗೌಡ ಸಹ ಮುಖ್ಯ ಪಾತ್ರದಲ್ಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ