AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುರುವಾಯ್ತು ಡಾಲಿ-ಧನ್ಯತಾ ಕಲ್ಯಾಣ, ನಡೆಯುವ ಶಾಸ್ತ್ರಗಳೇನು? ಇಲ್ಲಿದೆ ಸಮಯ ಸಹಿತ ಮಾಹಿತಿ

Daali Dhananjay: ಡಾಲಿ ಧನಂಜಯ್ ಮತ್ತು ಧನ್ಯತಾ ಮದುವೆ ಶಾಸ್ತ್ರ ಈಗಾಗಲೇ ಆರಂಭವಾಗಿದೆ. ಮೈಸೂರಿನ ರಿವರ್ ರಂಚಿ ರೆಸಾರ್ಟ್​​ನಲ್ಲಿ ನಿನ್ನೆ ಹಳದಿ ಶಾಸ್ತ್ರ ನಡೆದಿದೆ. ಇಂದು ಮೈಸೂರು ಅರಮನೆ ಮುಂದಿನ ಮೈದಾನದಲ್ಲಿ ಹಾಕಲಾಗಿರುವ ಬೃಹತ್ ಮಂಟಪದಲ್ಲಿ ಮದುವೆ ಶಾಸ್ತ್ರಗಳು ಶುರುವಾಗಿವೆ. ಯಾವ ಯಾವ ಶಾಸ್ತ್ರಗಳು ಇಂದು ಮತ್ತು ನಾಳೆ ನಡೆಯಲಿವೆ ಎಂಬ ಮಾಹಿತಿ ಇಲ್ಲಿದೆ.

ಶುರುವಾಯ್ತು ಡಾಲಿ-ಧನ್ಯತಾ ಕಲ್ಯಾಣ, ನಡೆಯುವ ಶಾಸ್ತ್ರಗಳೇನು? ಇಲ್ಲಿದೆ ಸಮಯ ಸಹಿತ ಮಾಹಿತಿ
Daali Dhanyatha
ಮಂಜುನಾಥ ಸಿ.
|

Updated on:Feb 15, 2025 | 9:14 AM

Share

ಡಾಲಿ ಧನಂಜಯ್ ಮತ್ತು ಧನ್ಯತಾ ಅವರ ವಿವಾಹ ಕಾರ್ಯ ಶುರುವಾಗಿದೆ. ಡಾಲಿ ಧನಂಜಯ್ ತಮ್ಮ ಹುಟ್ಟೂರು ಕಾಳೇನಹಳ್ಳಿಯಲ್ಲಿ ಕೆಂಡ ಹಾಯುವ ಮೂಲಕ ಮದುವೆ ಕಾರ್ಯಕ್ಕೆ ಪ್ರಾರಂಭ ಹೇಳಿದ್ದಾರೆ. ನಿನ್ನೆಯೇ ಧನಂಜಯ್ ಮತ್ತು ಧನ್ಯತಾ ಅವರುಗಳು ಮೈಸೂರಿಗೆ ಬಂದಿದ್ದು, ಮೈಸೂರಿನ ರಿವರ್ ರಂಚಿ ರೆಸಾರ್ಟ್ ಒಂದರಲ್ಲಿ ಅದ್ಧೂರಿಯಾಗಿ ಹಳದಿ ಶಾಸ್ತ್ರ ನಡೆದಿದೆ. ಹಳದಿ ಶಾಸ್ತ್ರದಲ್ಲಿ ಧನಂಜಯ್ ಕುಟುಂಬದವರು, ಅತ್ಯಾಪ್ತರು, ಧನ್ಯತಾ ಅವರ ಗೆಳತಿಯರು, ಕುಟುಂಬದವರು ಆಗಮಿಸಿದ್ದರು. ಇಂದು (ಫೆಬ್ರವರಿ 15) ಮೈಸೂರಿನಲ್ಲಿ ಕೆಲವು ಮದುವೆ ಶಾಸ್ತ್ರಗಳು ನಡೆಯಲಿದ್ದು ಅವುಗಳ ವಿವರ ಹೀಗಿದೆ…

ಇಂದು (ಫೆಬ್ರವರಿ 15) ಬೆಳಿಗ್ಗೆ 8 ಗಂಟೆ ಇಂದಲೇ ಶಾಸ್ತ್ರಗಳು ಶುರುವಾಗಿವೆ. ಮೊದಲಿಗೆ 8.10 ರಿಂದ 9.10 ರ ಒಳಗೆ ಗಂಗೆ ತರುವ ಶಾಸ್ತ್ರ ದಿಂದ ಕಾರ್ಯಕ್ರಮಗಳು ಪ್ರಾರಂಭ ಆಗಿವೆ. ಬೆಳಿಗ್ಗೆ 8.10 ರಿಂದ 9.10 ರ ಒಳಗೆ ಗಂಗೆ ತರು ಶಾಸ್ತ್ರ ನಡೆಯಲಿದೆ. ನಂತರ ವಧು ವರ ತಂದೆ ತಾಯಿ ಇಂದ ವಾಗ್ದಾನ ಶಾಸ್ತ್ರ ನಡೆಯಲಿದೆ. ಆ ಬಳಿಕ ವಧು-ವರ ನೀರಿಕ್ಷಣ ಶಾಸ್ತ್ರ ನಡೆಯಲಿದೆ. ವಧುವಿಗೆ ಗೌರಿ ಶಾಸ್ತ್ರದ ನಂತರ ಶುದ್ಧ ಬಳೆ ಶಾಸ್ತ್ರ ಮಾಡಲಾಗುತ್ತದೆ. ವಧು ವರರ ಪ್ರಥಮ ನಿರೀಕ್ಷೆಣ ಶಾಸ್ತ್ರದ ಮೂಲಕ ಇಂದಿನ ಶಾಸ್ತ್ರಗಳ ಮುಕ್ತಾಯ ಆಗಲಿದೆ. ಬಳಿಕ ಸಂಜೆ 6 ಗಂಟೆಯಿಂದ ಸಂಜೆ 6 ಗಂಟೆ ಇಂದ ರಾತ್ರಿ 12 ರ ವರೆಗೂ ಆರತಕ್ಷತೆ ನಡೆಯಲಿದೆ.

ಇದನ್ನೂ ಓದಿ:ಹುಟ್ಟೂರಿನ ಶಾಲೆಗೆ ಹೊಸ ಮೆರುಗು ಕೊಟ್ಟ ಡಾಲಿ ಧನಂಜಯ್

ಭಾನುವಾರ ಅಂದರೆ ಫೆಬ್ರವರಿ 16 ಸಹ ಹಲವು ಶಾಸ್ತ್ರಗಳು ನಡೆಯಲಿವೆ. ಮೊದಲಿಗೆ ಮಂಟಪ ದೇವತಾ ಪ್ರವೇಶ ಕಾರ್ಯವನ್ನು ಮಾಡಲಿದ್ದಾರೆ. ಆ ಬಳಿಕ ನವ ಪ್ರಧಾನ ಕಳಶ ಪೂಜೆ ನಡೆಯಲಿದೆ. ಕನ್ಯಾಧಾನ ಸಂಬಂಧ ಮಾಲೆ ಅರ್ಪಣೆ ನಡೆಯಲಿದೆ, ವಧು-ವರರ ಪೋಷಕರ ನಡುವೆ ಕೆಲ ಶಾಸ್ತ್ರಗಳು ನಡೆಯಲಿವೆ. ವಧು ವರರ ಧಾರೆ ಮುಹೂರ್ತ ನಡೆಯಲಿದೆ. ಆ ಬಳಿಕ 8:10 ರಿಂದ 9:50ರ ನಡುವೆ ಮಾಂಗಲ್ಯ ಧಾರಣೆ ಮಹೋತ್ಸವ ನಡೆಯಲಿದೆ.

ಮಾಂಗಲ್ಯ ಧಾರಣೆ ಬಳಿಕ ವಧು-ವರರಿಬ್ಬರೂ ಸಪ್ತಪದಿ ತುಳಿಯಲಿದ್ದಾರೆ. ಅಶ್ವಿನಿ ನಕ್ಷತ್ರ ವೀಕ್ಷಣೆ ಶಾಸ್ತ್ರ ನಡೆಯಲಿದೆ. ಅದರ ಬಳಿಕ ಬಾಸಿಂಗ ವಿಸರ್ಜೆ ಶಾಸ್ತ್ರ ನಡೆಯಲಿದೆ, ಬಾಸಿಂಗ ವಿಸರ್ಜನೆ ಮೂಲಕ ಮದುವೆ ಕಾರ್ಯ ಸಂಪನ್ನವಾಗಲಿದೆ. ಆ ಬಳಿಕ ಮತ್ತೊಮ್ಮೆ ಆರತಕ್ಷತೆ ನಡೆಯಲಿದೆ. ಡಾಲಿ ಧನಂಜಯ್ ಮದುವೆ ಕಾರ್ಯಕ್ರಮ ಮೈಸೂರಿನ ಅರಮನೆ ಮುಂಭಾಗದ ಬೃಹತ್ ಮೈದಾನದಲ್ಲಿ ನಡೆಯಲಿದೆ. ಅಭಿಮಾನಿಗಳಿಗೆ ಸಹ ಪ್ರವೇಶವಿದ್ದು, ಸಕಲ ವ್ಯವಸ್ಥೆಯನ್ನು ಈಗಾಗಲೇ ಮಾಡಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:13 am, Sat, 15 February 25

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ