
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ (Devil Movie) ಡಿಸೆಂಬರ್ 12ರಂದು ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ಈ ಚಿತ್ರ ಅಭಿಮಾನಿಗಳ ಪಾಲಿಗೆ ಸಖತ್ ವಿಶೇಷ. ದರ್ಶನ್ ಅವರು ಜೈಲಿನಲ್ಲಿ ಇರುವಾಗಲೇ ಚಿತ್ರ ರಿಲೀಸ್ ಆಗುತ್ತಿದೆ. ಹೀಗಾಗಿ, ಇದನ್ನು ಪ್ರಚಾರ ಮಾಡುವ ಜವಾಬ್ದಾರಿ ಅಭಿಮಾನಿಗಳ ಮೇಲೆ ಇದೆ. ಈಗ ಚಿತ್ರದ ಟ್ರೇಲರ್ ರಿಲೀಸ್ ದಿನಾಂಕ ರಿವೀಲ್ ಆಗಿದೆ. ಈ ವಿಷಯ ತಿಳಿದು ಫ್ಯಾನ್ಸ್ ಸಾಕಷ್ಟು ಖುಷಿಪಟ್ಟಿದ್ದಾರೆ.
ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದರು. ಅದಕ್ಕೂ ಮೊದಲೇ ಕೆಲವು ಭಾಗದ ಶೂಟ್ ಮುಗಿದಿತ್ತು. ಆ ಬಳಿಕ ದರ್ಶನ್ ಅವರು ಜಾಮೀನು ಪಡೆದು ಹೊರಗೆ ಬಂದರು. ಈ ವೇಳೆ ದೇಶದ ವಿವಿಧ ಕಡೆ ಹಾಗೂ ವಿದೇಶಕ್ಕೆ ತೆರಳಿ ಸಿನಿಮಾದ ಶೂಟ್ನ ಪೂರ್ಣಗೊಳಿಸಿದರು. ಆ ಬಳಿಕ ಅವರು ಡಬ್ಬಿಂಗ್ ಕೆಲಸವನ್ನು ಮಾಡಿಕೊಟ್ಟಿದ್ದಾರೆ. ಈಗ ದರ್ಶನ್ ಜೈಲಿನಲ್ಲಿರುವಾಗಲೇ ಸಿನಿಮಾ ರಿಲೀಸ್ ಆಗುತ್ತಿದೆ.
‘ಡೆವಿಲ್’ ತಂಡದವರು ಟ್ರೇಲರ್ ಬಗ್ಗೆ ಮಾಹಿತಿ ನೀಡಿದ್ದಾರೆ. ಡಿಸೆಂಬರ್ 5ರಂದು ಬೆಳಿಗ್ಗೆ 10.05ಕ್ಕೆ ಸಿನಿಮಾದ ಟ್ರೇಲರ್ ಬಿಡುಗಡೆ ಆಗಲಿದೆ. ‘ಸರಿಗಮ’ ಯೂಟ್ಯೂಬ್ ಚಾನೆಲ್ ಮೂಲಕ ಟ್ರೇಲರ್ ನೋಡಬಹುದು. ಅಂದು ಅಭಿಮಾನಿಗಳು ಹಬ್ಬ ಮಾಡಲು ರೆಡಿ ಆಗಿದ್ದಾರೆ.
ಇದನ್ನೂ ಓದಿ: ದರ್ಶನ್ ಫಾರ್ಮ್ಹೌಸ್ ಎದುರು ಮುಗಿಲೆತ್ತರದ ‘ದಿ ಡೆವಿಲ್’ ಪೋಸ್ಟರ್
ಡೆವಿಲ್ ಚಿತ್ರದಲ್ಲಿ ದರ್ಶನ್ ಲುಕ್ ಹೇಗಿದೆ ಎಂಬ ಝಲಕ್ ಸಿಕ್ಕಿದೆ. ರಿಲೀಸ್ ಆದ ಟೀಸರ್ ಕೂಡ ಗಮನ ಸೆಳೆದಿತ್ತು. ಈಗ ಟ್ರೇಲರ್ ರಿಲೀಸ್ ಆದರೆ ಸಿನಿಮಾದ ಕಥೆ ಯಾವ ರೀತಿ ಇರಲಿದೆ, ಮೇಕಿಂಗ್ನ ಯಾವ ರೀತಿ ಮಾಡಲಾಗಿದೆ ಎಂಬ ಬಗ್ಗೆ ಐಡಿಯಾ ಸಿಗಲಿದೆ.
ಡಿಸೆಂಬರ್ 5, 10AM — ‘ದಿ ಡೆವಿಲ್’ ಟ್ರೈಲರ್ ಬರ್ತಿದೆ🔥
The moment is here… The Devil’s Aura is ready to roar on Dec 5th at 10:05 AM.
Thank you for the love, the hype, and the craze you’ve shown. ❤️𝐓𝐡𝐞 𝐝𝐞𝐯𝐢𝐥 𝐢𝐧 𝐭𝐡𝐞𝐚𝐭𝐫𝐞𝐬 𝐟𝐫𝐨𝐦 𝐃𝐞𝐜𝐞𝐦𝐛𝐞𝐫 𝟏𝟏𝐭𝐡✨… pic.twitter.com/AEtvCZfRCW
— Shri Jaimatha Combines (@sjmcfilms) December 1, 2025
ಈಗಾಗಲೇ ವಿಜಯಲಕ್ಷ್ಮೀ ಅವರು ದರ್ಶನ್ ಅಭಿಮಾನಿಗಳನ್ನು ಕರೆಸಿ ಸಭೆ ಮಾಡಿದ್ದಾರೆ. ಈ ವೇಳೆ ಸಿನಿಮಾ ಪ್ರಚಾರ ರೂಪುರೇಷೆ ರಚಿಸಲಾಗಿದೆ ಎನ್ನಲಾಗುತ್ತಿದೆ. ಡಿಸೆಂಬರ್ 12ರಂದು ಸಿನಿಮಾನ ದೊಡ್ಡ ಮಟ್ಟದಲ್ಲಿ ತೆರೆಗೆ ತರುವ ಪ್ಲ್ಯಾನ್ ನಡೆದಿದೆ. ಮಿಲನ ಪ್ರಕಾಶ್ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ರಚನಾ ರೈ ಚಿತ್ರಕ್ಕೆ ನಾಯಕಿ. ಅಚ್ಯುತ್ ಕುಮಾರ್, ಗಿಲ್ಲಿ ನಟ, ಶೋಭರಾಜ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:22 am, Mon, 1 December 25