ಆಕ್ಷನ್ ಪ್ರಿನ್ಸ್​ಗೆ ಆಕ್ಷನ್ ಕಟ್ ಹೇಳಲಿದ್ದಾರೆ ಶೋ ಮ್ಯಾನ್; ಅನೌನ್ಸ್ ಆಯ್ತು ಧ್ರುವ ಸರ್ಜಾ- ಪ್ರೇಮ್ ಕಾಂಬಿನೇಷನ್​ನಲ್ಲಿ ಹೊಸ ಚಿತ್ರ

ಶೋ ಮ್ಯಾನ್ ಪ್ರೇಮ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಕಾಂಬಿನೇಷನ್​ನಲ್ಲಿ ಹೊಸ ಚಿತ್ರವೊಂದು ಸೆಟ್ಟೇರಲಿದೆ. ಈ ಸುದ್ದಿಯನ್ನು ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಹೌಸ್ ಖಚಿತಪಡಿಸಿದ್ದು, ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ಹಂಚಿಕೊಳ್ಳುವುದಾಗಿ ತಿಳಿಸಿದೆ.

ಆಕ್ಷನ್ ಪ್ರಿನ್ಸ್​ಗೆ ಆಕ್ಷನ್ ಕಟ್ ಹೇಳಲಿದ್ದಾರೆ ಶೋ ಮ್ಯಾನ್; ಅನೌನ್ಸ್ ಆಯ್ತು ಧ್ರುವ ಸರ್ಜಾ- ಪ್ರೇಮ್ ಕಾಂಬಿನೇಷನ್​ನಲ್ಲಿ ಹೊಸ ಚಿತ್ರ
ಧ್ರುವ ಸರ್ಜಾ, ಪ್ರೇಮ್
Edited By:

Updated on: Aug 24, 2021 | 5:27 PM

ಧ್ರುವ ಸರ್ಜಾ ಇತ್ತೀಚೆಗಷ್ಟೇ ತಮ್ಮ ನೂತನ ಚಿತ್ರ ‘ಮಾರ್ಟಿನ್’ನ ಟೈಟಲ್ ರಿವೀಲ್ ಮಾಡಿದ್ದರು. ಅದಕ್ಕೆ ಸಿನಿಮಾ ರಸಿಕರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು. ಇದೀಗ ಚಂದನವನದಲ್ಲಿ ಹೊಸ ಸುದ್ದಿಯೊಂದು ಬಂದಿದ್ದು, ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಕಾರಣ, ನಿರ್ದೇಶಕ ಶೋ ಮ್ಯಾನ್ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಪ್ರೇಮ್ ನಿರ್ದೇಶಿಸಲಿರುವ ಹೊಸ ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಣ್ಣ ಹಚ್ಚಲಿದ್ದಾರೆ. ಇದನ್ನು ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಖಚಿತಪಡಿಸಿದೆ.

ಕೆವಿಎನ್​ ಪ್ರೊಡಕ್ಷನ್ ಹೌಸ್ ಹಂಚಿಕೊಂಡಿರುವ ಟ್ವೀಟ್:

ಈ ಚಿತ್ರಕ್ಕೆ ಇನ್ನಷ್ಟೇ ಶೀರ್ಷಿಕೆಯನ್ನು ಇಡಬೇಕಾಗಿದ್ದು, ಚಿತ್ರದ ಕುರಿತ ಉಳಿದ ಮಾಹಿತಿಗಳನ್ನು ಶೀಘ್ರದಲ್ಲೇ ನೀಡುವುದಾಗಿ ನಿರ್ಮಾಣ ಸಂಸ್ಥೆ ಮಾಹಿತಿ ನೀಡಿದೆ. ಈ ಚಿತ್ರವು ಧ್ರುವಚ ಸರ್ಜಾರ ಆರನೇ ಚಿತ್ರವಾಗಲಿದ್ದು, ಪ್ರೇಮ್ ಅವರ ಒಂಬತ್ತನೇ ಚಿತ್ರವಾಗಲಿದೆ. ಈ ಕುರಿತು ಪ್ರೇಮ್ ಕೂಡಾ ಟ್ವೀಟ್ ಮಾಡಿದ್ದು, ‘ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ. ನಿಮ್ಮ ಪ್ರೀತಿ, ಪ್ರೋತ್ಸಾಹ, ಅಭಿಮಾನವಿರಲಿ’ ಎಂದು ಕೇಳಿಕೊಂಡಿದ್ದಾರೆ. ಈ ಮೂಲಕ ಚಿತ್ರದ ಸಣ್ಣ ಕುರುಹನ್ನೂ ಅವರು ಬಿಟ್ಟುಕೊಟ್ಟಿದ್ದು, ಭರ್ಜರಿ ಆಕ್ಷನ್ ಚಿತ್ರವಾಗಲಿದೆಯಾ ಈ ಚಿತ್ರ ಎಂಬ ಕುತೂಹಲವನ್ನೂ ಹುಟ್ಟು ಹಾಕಿದೆ. ಪ್ರೇಮ್ ನಿರ್ದೇಶನದ ಚಿತ್ರಗಳೆಂದರೆ ಅದರಲ್ಲಿ ಆಕ್ಷನ್, ಹಾಡು, ಮನೋರಂಜನೆ, ಭಾವನಾತ್ಮಕ ಅಂಶಗಳಿಗೆ ಕೊರತೆಯಿರುವುದಿಲ್ಲ ಎಂಬುದನ್ನು ಅವರ ಹಿಂದಿನ ಚಿತ್ರಗಳು ಸ್ಪಷ್ಟಪಡಿಸಿವೆ. ಅದಾಗ್ಯೂ ಆಕ್ಷನ್ ಪ್ರಿನ್ಸ್ ಜೊತೆ ಅವರ ಹೊಸ ಸಿನಿಮಾ ಸೆಟ್ಟೇರುವುದರಿಂದ ವಿಭಿನ್ನ ಮಾದರಿಯಲ್ಲಿ ಚಿತ್ರ ಮೂಡಿ ಬರಬಹುದೇ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಪ್ರೇಮ್ ಹಂಚಿಕೊಂಡ ಮಾಹಿತಿ ಇಲ್ಲಿದೆ:

ಪ್ರೇಮ್ ತಮ್ಮ ‘ಏಕ್ ಲವ್ ಯಾ’ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಧ್ರುವ ಸರ್ಜಾ ಮಾರ್ಟಿನ್ ಚಿತ್ರವನ್ನು ಮುಗಿಸಿಕೊಳ್ಳಲಿದ್ದಾರೆ. ನಂತರ ಈ ಚಿತ್ರ ಸೆಟ್ಟೇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:

‘ಲವ್ ಯೂ ರಚ್ಚು’ ಶೂಟಿಂಗ್​ ಅವಘಡ ಪ್ರಕರಣ; ಮೂವರು ಆರೋಪಿಗಳಿಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ

‘ನೀ ಸಿಗೋವರೆಗೂ’ ಚಿತ್ರದ ಲವರ್ ಬಾಯ್ ಶಿವಣ್ಣ ಲುಕ್ ರಿಲೀಸ್; ಹ್ಯಾಟ್ರಿಕ್ ಹೀರೋಗೆ ವಯಸ್ಸೇ ಆಗೋಲ್ಲ ಎಂದ ಅಭಿಮಾನಿಗಳು

(dhruva sarja and prem will collaborate for a new movie)