ಇಂದು (ಸೆಪ್ಟೆಂಬರ್ 18) ಎಲ್ಲೆಲ್ಲೂ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಧ್ರುವ ಸರ್ಜಾ ಮನೆಯಲ್ಲಿ ಈ ದಿನದ ಸಂಭ್ರಮ ಹೆಚ್ಚಿದೆ. ಇದಕ್ಕೆ ಕಾರಣ ಅವರು ಮತ್ತೆ ತಂದೆ ಆಗಿರೋದು. ಧ್ರುವ ಸರ್ಜಾ (Dhruva Sarja) ಪತ್ನಿ ಪ್ರೇರಣಾಗೆ ಗಂಡು ಮಗು ಜನಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಧ್ರುವ ಸರ್ಜಾ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸುತ್ತಿದ್ದಾರೆ.
ಧ್ರುವ ಸರ್ಜಾ ಹಾಗೂ ಪ್ರೇರಣಾ 2019ರಲ್ಲಿ ಮದುವೆ ಆದರು. ಕಳೆದ ವರ್ಷ ಅಕ್ಟೋಬರ್ 2ರಂದು ಧ್ರುವ ಸರ್ಜಾಗೆ ಹೆಣ್ಣು ಮಗು ಜನಿಸಿತು. ಈಗ ಅವರು ಮತ್ತೊಮ್ಮೆ ತಂದೆ ಆಗಿದ್ದಾರೆ. ಈ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಸರ್ಜಾ ಕುಟುಂಬಕ್ಕೆ ಈ ದಿನ ಸಖತ್ ವಿಶೇಷ ಎನಿಸಿದೆ. ಧ್ರುವ ಸರ್ಜಾ ಕುಟುಂಬದವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ.
ಇತ್ತೀಚೆಗೆ ಮೇಘನಾ ರಾಜ್ ನಟನೆಯ ‘ತತ್ಸಮ ತದ್ಭವ’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದ ಮೂಲಕ ಮೇಘನಾ ರಾಜ್ ಅವರು ನಟನೆಗೆ ಕಂಬ್ಯಾಕ್ ಮಾಡಿದ್ದಾರೆ. ಅವರ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕ ಬಗ್ಗೆ ವಿಚಾರ ಸರ್ಜಾ ಕುಟುಂಬಕ್ಕೆ ಖುಷಿ ತಂದಿತ್ತು. ಈಗ ಮತ್ತೊಂದು ಸಿಹಿ ಸುದ್ದಿಯನ್ನು ಈ ಕುಟುಂಬದವರು ನೀಡಿದ್ದಾರೆ. ಧ್ರುವ ಬರ್ತ್ಡೇಗೂ ಕೆಲವೇ ದಿನ ಮೊದಲು ಅವರು ಮತ್ತೊಮ್ಮೆ ತಂದೆ ಆಗಿದ್ದಾರೆ.
ಇದನ್ನೂ ಓದಿ: ಅಣ್ಣನ ಸಮಾಧಿ ಮೇಲೆ ಮಲಗಿ ಮಗಳ ಜೊತೆ ಆಟವಾಡಿದ ಧ್ರುವ ಸರ್ಜಾ
ಧ್ರುವ ಸರ್ಜಾ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ನಟನೆಯ ‘ಮಾರ್ಟಿನ್’ ಚಿತ್ರದ ಟೀಸರ್ ಗಮನ ಸೆಳೆದಿದೆ. ಈ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಇದರ ಜೊತೆಗೆ ‘ಕೆಡಿ’ ಚಿತ್ರದ ಕೆಲಸಗಳಲ್ಲೂ ಅವರು ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಪ್ರೇಮ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಸಂಜಯ್ ದತ್ ಅವರು ಮತ್ತೊಮ್ಮೆ ವಿಲನ್ ಪಾತ್ರದ ಮೂಲಕ ಗಮನ ಸೆಳೆಯಲು ರೆಡಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:13 am, Mon, 18 September 23