ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಹರಸಾಹಸ ಪಡುತ್ತಿದೆ. ಇದರ ಜತೆಗೆ ಕೊರೊನಾ ಲಸಿಕೆ ನೀಡುವ ವೇಗವನ್ನು ಹೆಚ್ಚಿಸಿದೆ. ಅನೇಕ ಸೆಲೆಬ್ರಿಟಿಗಳು ಕೊವಿಡ್ ಲಸಿಕೆ ಪಡೆದು ತಮ್ಮ ಅಭಿಮಾನಿಗಳ ಬಳಿ ಕೊರೊನಾ ಲಸಿಕೆ ಪಡೆಯವಂತೆ ಕರೆ ನೀಡುತ್ತಿದ್ದಾರೆ. ಈಗ ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಕೂಡ ಕೊವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಿದ ದಂಪತಿ ಲಸಿಕೆ ಪಡೆದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಧ್ರುವ, ನೀವೂ ಕೂಡ ತಪ್ಪದೇ ವ್ಯಾಕ್ಸಿನೇಷನ್ ಮಾಡಿಕೊಂಡು ಕೊವಿಡ್ ಮುಕ್ತ ಭಾರತ ನಿರ್ಮಾಣ ಮಾಡಲು ಸಹಕರಿಸಿ ಎಂದು ಮನವಿ ಮಾಡಿದ್ದಾರೆ.
ಇನ್ನು, ಅವರು ಲಸಿಕೆ ಹಾಕಿಸಿಕೊಳ್ಳುವಾಗ ಶರ್ಟ್ ತೆಗೆದಿದ್ದರು. ಹೀಗಾಗಿ, ಅವರ ಬೈಸೆಪ್ಸ್ ಎದ್ದು ಕಾಣುತ್ತಿತ್ತು. ಇದನ್ನು ನೋಡಿದ ಅಭಿಮಾನಿಗಳು ದಂಗಾಗಿದ್ದಾರೆ. ಅಲ್ಲದೆ, ನಿಮ್ಮ ಬೈಸೆಪ್ಸ್ ಅದ್ಭುತವಾಗಿದೆ ಎಂದು ಹೇಳಿಕೊಂಡಿದ್ದಾರೆ. ಇನ್ನೂ ಕೆಲವರು, ಅಗತ್ಯವಿದ್ದಲ್ಲಿ ಮಾತ್ರ ಶರ್ಟ್ ತೆಗೆಯಿರಿ ಎಂದು ಕಿವಿಮಾತು ಹೇಳಿದ್ದಾರೆ.
ನೀವೂ ಕೂಡ ತಪ್ಪದೇ ವ್ಯಾಕ್ಸಿನೇಷನ್ ನ್ನು ಮಾಡಿಕೊಂಡು ಕೊವಿಡ್ ಮುಕ್ತ ಭಾರತ ನಿರ್ಮಾಣ ಮಾಡಲು ಸಹಕರಿಸಿ?
ಜೈ ಆಂಜನೇಯ ?? pic.twitter.com/j07eXH0gzK
— Dhruva Sarja (@DhruvaSarja) June 5, 2021
ಧ್ರುವ ಸರ್ಜಾ ಅವರಿಗೆ ಕಳೆದ ವರ್ಷ ಕೊವಿಡ್ ಪಾಸಿಟಿವ್ ಆಗಿತ್ತು. ಈ ವೇಳೆ ಟ್ವೀಟ್ ಮಾಡಿದ್ದ ಅವರು, ನನಗೆ ಕೊವಿಡ್ ಪಾಸಿಟಿವ್ ಆಗಿದೆ. ಹೀಗಾಗಿ, ನಮ್ಮ ಸಂಪರ್ಕಕ್ಕೆ ಬಂದ ಎಲ್ಲರೂ ಪರೀಕ್ಷೆಗೆ ಒಳಪಡಿ ಎಂದು ಮನವಿ ಮಾಡಿದ್ದರು. ನಂತರ ಅವರು ಕೊವಿಡ್ನಿಂದ ಚೇತರಿಸಿಕೊಂಡಿದ್ದರು.
ಇದೇ ವೇಳೆ ಧ್ರುವ ಅತ್ತಿಗೆ ಮೇಘನಾ ರಾಜ್ ಕುಟುಂಬದ ಎಲ್ಲರಿಗೂ ಕೊರೊನಾ ಪಾಸಿಟಿವ್ ಆಗಿತ್ತು. ಆ ವಿಚಾರವನ್ನು ಅವರು ಡಿ.8ರಂದು ಸೋಶಿಯಲ್ ಮೀಡಿಯಾ ಮೂಲಕ ಖಚಿತಪಡಿಸಿದ್ದರು. ಮೇಘನಾ ರಾಜ್ ಮತ್ತು ಅವರ ಪುತ್ರ ಮನೆಯಲ್ಲೇ ಐಸೋಲೇಟ್ ಆಗಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾದರು.
ಇದನ್ನೂ ಓದಿ: Meghana Raj: ಮೇಘನಾ ರಾಜ್ ಮನೆಯಲ್ಲಿ ಮತ್ತೆ ಶೋಕ; ಕುಟುಂಬದ ಸದಸ್ಯನಂತಿದ್ದ ಬ್ರುನೋ ಸಾವು
Published On - 7:31 pm, Sat, 5 June 21