Martin Collection: ‘ಮಾರ್ಟಿನ್’ ಸಿನಿಮಾ ಮೂರು ದಿನಕ್ಕೆ ಗಳಿಸಿದ್ದೆಷ್ಟು? ಇಲ್ಲಿದೆ ಕಲೆಕ್ಷನ್ ವಿವರ

|

Updated on: Oct 14, 2024 | 7:22 AM

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಬಗ್ಗೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಈ ಚಿತ್ರವನ್ನು ರಿಲೀಸ್ ಮಾಡಲಾಯಿತು. ಅದ್ದೂರಿ ಬಜೆಟ್​ನಲ್ಲಿ ಸಿನಿಮಾ ಸಿದ್ಧವಾಗಿದೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಹಲವು ವರ್ಷಗಳು ಕಾದಿದ್ದರು. ಈಗ ಸಿನಿಮಾದ ಮೂರು ದಿನದ ಗಳಿಕೆ ವಿಚಾರದ ಬಗ್ಗೆ ಮಾಹಿತಿ ಸಿಕ್ಕಿದೆ.

Martin Collection: ‘ಮಾರ್ಟಿನ್’ ಸಿನಿಮಾ ಮೂರು ದಿನಕ್ಕೆ ಗಳಿಸಿದ್ದೆಷ್ಟು? ಇಲ್ಲಿದೆ ಕಲೆಕ್ಷನ್ ವಿವರ
ಧ್ರುವ
Follow us on

‘ಮಾರ್ಟಿನ್’ ಸಿನಿಮಾ ರಿಲೀಸ್ ಆಗಿ ಮೂರು ದಿನಗಳು ಕಳೆದಿವೆ. ಈ ಚಿತ್ರವನ್ನು ಅವರ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಧ್ರುವ ಸರ್ಜಾ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಗಳಿಕೆ ಬಗ್ಗೆ ಮಾಹಿತಿ ಸಿಕ್ಕಿದೆ. ದಸರಾ ಸಂದರ್ಭದಲ್ಲಿ ರಿಲೀಸ್ ಆದ ಈ ಚಿತ್ರ ಮೂರು ದಿನಗಳಲ್ಲಿ ಗಳಿಕೆ ಮಾಡಿದ್ದು ಎಷ್ಟು ಎಂಬ ಬಗ್ಗೆ ಮಾಹಿತಿ ರಿವೀಲ್ ಆಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ಎಪಿ ಅರ್ಜುನ್ ಅವರು ‘ಮಾರ್ಟಿನ್’ ಚಿತ್ರವನ್ನು ನಿರ್ದೇಶನ ಮಾಡಿದರೆ, ಉದಯ್ ಮೆಹ್ತಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ಧ್ರುವ ಸರ್ಜಾ ವೃತ್ತಿ ಬದುಕಿನಲ್ಲೇ ಅತಿ ದೊಡ್ಡ ಬಜೆಟ್​ನ ಚಿತ್ರವಾಗಿದೆ. ಸಿನಿಮಾದ ಬಜೆಟ್ 100 ಕೋಟಿ ರೂಪಾಯಿ ದಾಟಿದೆ ಎಂದು ವರದಿ ಆಗಿದೆ. ಈ ಚಿತ್ರದ ಕಲೆಕ್ಷನ್ ಬಗ್ಗೆ sacnilk ವರದಿ ಮಾಡಿದೆ.

Sacnilk ವರದಿ ಮಾಡಿರುವ ಪ್ರಕಾರ ‘ಮಾರ್ಟಿನ್’ ಸಿನಿಮಾ ಮೂರು ದಿನಗಳಲ್ಲಿ ಸುಮಾರು 16 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆಯಂತೆ. ಬಜೆಟ್​ಗೆ ಹೋಲಿಕೆ ಮಾಡಿದರೆ ಸಿನಿಮಾದ ಗಳಿಕ ಸ್ವಲ್ಪ ಕಡಿಮೆ ಆಯಿತು ಎಂದೇ ಹೇಳಬಹುದು. ಏಕೆಂದರೆ ಇದು ಕೇವಲ ಕನ್ನಡದ ಸಿನಿಮಾ ಮಾತ್ರವಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ರಿಲೀಸ್ ಆಗಿದೆ. ಹೀಗಾಗಿ, ಇನ್ನೂ ಹೆಚ್ಚಿನ ಗಳಿಕೆ ಮಾಡೋ ಅಗತ್ಯತೆ ಚಿತ್ರಕ್ಕೆ ಇತ್ತು.

ಮೊದಲ ದಿನ (ಅಕ್ಟೋಬರ್ 11) ‘ಮಾರ್ಟಿನ್’ ಚಿತ್ರ 6.7 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಎರನಡೇ ದಿನ (ಅಕ್ಟೋಬರ್ 12) 5.5 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಮೂರನೇ ದಿನ ಸುಮಾರು ನಾಲ್ಕು ಕೋಟಿ ರೂಪಾಯಿ ಹರಿದು ಬಂದಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 16 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ: ‘ಮಾರ್ಟಿನ್’ ಸಿನಿಮಾ ಗಳಿಸಿದ್ದೆಷ್ಟು? ಹೇಗಿದೆ ಓಪನಿಂಗ್ ಡೇ ಕಲೆಕ್ಷನ್? ಇಲ್ಲಿದೆ ಲೆಕ್ಕಾಚಾರ

ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಕುರಿತು ತಂಡದವರು ಅಧಿಕೃತ ಮಾಹಿತಿ ನೀಡಲಿ ಎಂದು ಫ್ಯಾನ್ಸ್​ ಬಯಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಸಿನಿಮಾ ಕೆಲವರು ತೆಗಳಿದರೆ, ಧ್ರುವ ಅಭಿಮಾನಿಗಳು ಹೊಗಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:20 am, Mon, 14 October 24