‘ಮಾರ್ಟಿನ್’ ಸಿನಿಮಾ ಗಳಿಸಿದ್ದೆಷ್ಟು? ಹೇಗಿದೆ ಓಪನಿಂಗ್ ಡೇ ಕಲೆಕ್ಷನ್? ಇಲ್ಲಿದೆ ಲೆಕ್ಕಾಚಾರ
Martin Movie Collection: ಅಭಿಮಾನಿಗಳಿಂದ ‘ಆ್ಯಕ್ಷನ್ ಪ್ರಿನ್ಸ್’ ಎಂದು ಕರೆಸಿಕೊಳ್ಳುವ ಧ್ರುವ ಸರ್ಜಾ ಅವರು ಪ್ರತಿ ಸಿನಿಮಾದಲ್ಲೂ ಸಾಹಸ ದೃಶ್ಯಗಳ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡಲು ಪ್ರಯತ್ನಿಸುತ್ತಾರೆ. ‘ಮಾರ್ಟಿನ್’ ಸಿನಿಮಾದಲ್ಲೂ ಇದು ಮುಂದುವರಿದಿದೆ. ಇಷ್ಟು ವರ್ಷಗಳ ವೃತ್ತಿಜೀವನದಲ್ಲಿ ಧ್ರುವ ಸರ್ಜಾ ನಟನೆಯ ಅತಿ ಅದ್ದೂರಿಯಾದ ಸಿನಿಮಾ ಇದು.
ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಬಗ್ಗೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಈ ಚಿತ್ರವನ್ನು ರಿಲೀಸ್ ಮಾಡಲಾಯಿತು. ಅದ್ದೂರಿ ಬಜೆಟ್ನಲ್ಲಿ ಸಿನಿಮಾ ಸಿದ್ಧವಾಗಿದೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಹಲವು ವರ್ಷಗಳು ಕಾದಿದ್ದರು. ಈಗ ಸಿನಿಮಾದ ಮೊದಲ ದಿನದ ಗಳಿಕೆ ವಿಚಾರದ ಬಗ್ಗೆ ಮಾಹಿತಿ ಸಿಕ್ಕಿದೆ. ತಂಡ ಯಾವ ರೀತಿಯ ಲೆಕ್ಕ ಕೊಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
‘ಪೊಗರು’ ಬಳಿಕ ರಿಲೀಸ್ ಆಗುತ್ತಿರುವ ಧ್ರುವ ಸರ್ಜಾ ಸಿನಿಮಾ ಎಂಬ ಕಾರಣಕ್ಕೆ ಪ್ರೇಕ್ಷಕರು ‘ಮಾರ್ಟಿನ್’ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ನಿರೀಕ್ಷೆ ಹುಸಿಯಾಗಿದೆ. ಸಿನಿಮಾ ಬುಕ್ ಮೈ ಶೋನಲ್ಲಿ ಕಡಿಮೆ ರೇಟಿಂಗ್ ಪಡೆದಿದೆ. ಇದು ಬಾಕ್ಸ್ ಆಫೀಸ್ ಮೇಲೂ ಪರಿಣಾಮ ಬೀರಿದೆ. ಬಾಕ್ಸ್ ಆಫೀಸ್ ಬಗ್ಗೆ ಲೆಕ್ಕ ಕೊಡುವ sacnilk ಈ ಬಗ್ಗೆ ವರದಿ ಮಾಡಿದೆ.
Sacnilk ವರದಿಯ ಪ್ರಕಾರ ‘ಮಾರ್ಟಿನ್’ ಚಿತ್ರ 6.20 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಮೊದಲ ದಿನದ ಕಲೆಕ್ಷನ್. ಕನ್ನಡದಲ್ಲಿ 5.5 ಕೋಟಿ ರೂಪಾಯಿ, ಹಿಂದಿಯಲ್ಲಿ 25 ಲಕ್ಷ ರೂಪಾಯಿ, ತಮಿಳಿನಲ್ಲಿ 5 ಲಕ್ಷ ರೂಪಾಯಿ, ತೆಲುಗಿನಲ್ಲಿ 4 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ಒಟ್ಟಾರೆ ಗಳಿಕೆ ಆರು ಕೋಟಿ ರೂಪಾಯಿ ದಾಟಿದೆ.
‘ಮಾರ್ಟಿನ್’ ಸಿನಿಮಾದ ಕಲೆಕ್ಷನ್ ಬಗ್ಗೆ ತಂಡದವರೇ ಅಧಿಕೃತವಾಗಿ ಮಾಹಿತಿ ನೀಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ತಂಡದ ಲೆಕ್ಕಕ್ಕೂ ಈ ಲೆಕ್ಕಕ್ಕೂ ವ್ಯತ್ಯಾಸ ಇದ್ದರೂ ಇರಬಹುದು ಎಂದು ಫ್ಯಾನ್ಸ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Martin Review: ಆರ್ಭಟಕ್ಕೆ, ಅದ್ದೂರಿತನಕ್ಕೆ, ಆ್ಯಕ್ಷನ್ಗೆ ಆದ್ಯತೆ ನೀಡಿದ ಮಾರ್ಟಿನ್
‘ಮಾರ್ಟಿನ್’ ಸಿನಿಮಾ ವಿವಾದದ ಮೇಲೆ ವಿವಾದ ಮಾಡಿಕೊಳ್ಳುತ್ತಾ ಬರುತ್ತಿದೆ. ನಿರ್ದೇಶಕರು ಹಾಗೂ ನಿರ್ಮಾಪಕರ ಮಧ್ಯೆ ಸಾಕಷ್ಟು ಕಿರಿಕ್ ಆಗಿತ್ತು. ಈ ಕಾರಣಕ್ಕೆ ಪ್ರಕರಣ ಕೋರ್ಟ್ ಮೆಟ್ಟಿಲನ್ನೂ ಹತ್ತಿತ್ತು. ಎಲ್ಲವನ್ನೂ ಪೂರ್ಣಗೊಳಿಸಿಕೊಂಡು ಸಿನಿಮಾ ಬಿಡುಗಡೆ ಕಂಡರೆ ಫ್ಯಾನ್ಸ್ ಕಡೆಯಿಂದಲೇ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:56 am, Sat, 12 October 24