AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಟೀಲು ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಬಂದ ಬಾಲಿವುಡ್​ ಬಾಬ

ಬಾಲಿವುಡ್​ನ ಸ್ಟಾರ್ ನಟ, ಕನ್ನಡದ ‘ಕೆಜಿಎಫ್ 2’ನಲ್ಲಿ ಅಧೀರನಾಗಿ ಮಿಂಚಿದ ಸಂಜಯ್ ದತ್ ಇಂದು ರಾಜ್ಯದ ಪ್ರಸಿದ್ಧ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು. ಸಂಜಯ್ ದತ್ ಅವರು ಕಟೀಲು ದುರ್ಗಾ ಪರಮೇಶ್ವರಿ ಪೂಜೆಯಲ್ಲಿ ಭಾಗಿ ಆಗಿದ್ದರು.

ಕಟೀಲು ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಬಂದ ಬಾಲಿವುಡ್​ ಬಾಬ
Follow us
ಮಂಜುನಾಥ ಸಿ.
|

Updated on: Oct 12, 2024 | 6:54 PM

ಸಂಜಯ್ ದತ್ ಬಾಲಿವುಡ್​ನ ಸ್ಟಾರ್ ನಟ. ಕನ್ನಡದ ‘ಕೆಜಿಎಫ್’ ಸೇರಿದಂತೆ ತಮಿಳು, ತೆಲುಗು ಸಿನಿಮಾಗಳಲ್ಲಿಯೂ ಸಹ ಸಂಜಯ್ ದತ್ ನಟಿಸಿದ್ದಾರೆ. ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿರುವ ಸಂಜಯ್ ದತ್, ಕಳೆದ ಕೆಲ ವರ್ಷಗಳಿಂದಲೂ ಧಾರ್ಮಿಕ ವ್ಯಕ್ತಿ ಆಗಿದ್ದಾರಂತೆ. ಆಗಾಗ್ಗೆ ದೇವಾಲಯಗಳಿಗೆ ಭೇಟಿ ನೀಡುವ ಸಂಜಯ್ ದತ್. ಇಂದು (ಅಕ್ಟೋಬರ್ 12) ಕರ್ನಾಟಕದ ಪ್ರಸಿದ್ಧ ದೇವಾಲಯ ಕಟೀಲು ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ತಮ್ಮ ಕೆಲವು ಗೆಳೆಯರೊಟ್ಟಿಗೆ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಬಂದಿದ್ದ ಸಂಜಯ್ ದತ್ ಅವರು ಹುಲಿ ಕುಣಿತದ ಊದು ಪೂಜೆ ಯಲ್ಲಿ ಭಾಗವಹಿದರು. ಇದೇ ಪೂಜೆಯಲ್ಲಿ ಪಾಲ್ಗೊಳ್ಳಲೆಂದು ಸಂಜಯ್ ದತ್ ಅವರು ಮುಂಬೈನಿಂದ ಮಂಗಳೂರಿಗೆ ಬಂದಿದ್ದರು. ಬಿರುವೆರ್ ಕುಡ್ಲ ಸಂಘಟನೆಯ ಹುಲಿವೇಷ ಕುಣಿತದ ಊದು ಪೂಜೆ ಆಯೋಜಿಸಿದ್ದರು. ಈ ವಿಶೇಷ ಪೂಜೆಯಲ್ಲಿ ನಟ ಸಂಜಯ್ ದತ್ ಭಾಗವಹಿಸಿದ್ದರು.

ದೇವಾಲಯಕ್ಕೆ ಆಗಮಿಸಿದ್ದ ಸಂಜಯ್ ದತ್ ಅವರಿಗೆ ದೇವಸ್ಥಾನದ ವತಿಯಿಂದ ವಿಶೇಷ ಗೌರವ ಸಲ್ಲಿಕೆ ಮಾಡಲಾಯ್ತು. ದೇವರ ಶೇಷ ವಸ್ತ್ರ, ಪ್ರಸಾದ ನೀಡಿ ಗೌರವಿಸಲಾಯ್ತು. ಸಂಜಯ್ ದತ್ ದೇವಾಲಯಕ್ಕೆ ಆಗಮಿಸಿದಾಗ ಅವರನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಅವರೊಟ್ಟಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನ ಮುಗಬಿದ್ದರು.

ಇದನ್ನೂ ಓದಿ:ಮತ್ತೆ ಮದುವೆ ಆದ್ರಾ ಸಂಜಯ್ ದತ್? ಫೋಟೋ ವೈರಲ್

ಕಟೀಲು ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಹಲವು ಸ್ಟಾರ್ ನಟ-ನಟಿಯರು ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ. ಸಚಿನ್ ತೆಂಡೂಲ್ಕರ್ ಇಂದು ಹಿಡಿದು ಹಲವಾರು ಮಂದಿ ಇಲ್ಲಿಗೆ ಬಂದು ವಿಶೇಷ ಪೂಜೆ ಮಾಡಿಸಿದ್ದಾರೆ. ಕೆಲ ವಾರದ ಹಿಂದೆಯಷ್ಟೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ದೇವಾಲಯಕ್ಕೆ ಬಂದು ವಿಶೇಷ ಪೂಜೆ ಮಾಡಿಸಿದ್ದರು. ಕೆಎಲ್ ರಾಹುಲ್ ಸಹ ಬಂದು ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು. ಅದಕ್ಕೂ ಮುಂಚೆ ಯಶ್ ಬಂದಿದ್ದರು. ಜೂ ಎನ್​ಟಿಆರ್ ಸಹ ಬಂದಿದ್ದರು. ಶಿಲ್ಪಾ ಶೆಟ್ಟಿ, ಸುನಿಲ್ ಶೆಟ್ಟಿ ಇನ್ನೂ ಹಲವರು ಈ ದೇವಾಲಯಕ್ಕೆ ಆಗಾಗ್ಗೆ ಬಂದು ಹೋಗುತ್ತಿರುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ