ಕನ್ನಡದ ಹಿರಿಯ ನಿರ್ದೇಶಕ, ಉದಯಶಂಕರ್ ಸಹೋದರ ದತ್ತರಾಜ್ ನಿಧನ

ದತ್ತರಾಜ್​ ಅವರಿಗೆ ರಾಜ್​ಕುಮಾರ್ ಕುಟುಂಬದ ಜೊತೆ ಒಳ್ಳೆಯ ಆಪ್ತತೆ ಇತ್ತು. ಅವರು ರಾಜ್​ಕುಮಾರ್ ಅವರ ಜೊತೆ ಸಿನಿಮಾ ಮಾಡಿದ್ದರು. ಅಣ್ಣಾವ್ರು ನಟಿಸಿದ ‘ಕೆರಳಿದ ಸಿಂಹ’, ‘ಕಾಮನಬಿಲ್ಲು’, ‘ಅದೇ ಕಣ್ಣು’, ‘ಶೃತಿ ಸೇರಿದಾಗ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.

ಕನ್ನಡದ ಹಿರಿಯ ನಿರ್ದೇಶಕ, ಉದಯಶಂಕರ್ ಸಹೋದರ ದತ್ತರಾಜ್ ನಿಧನ
ದತ್ತರಾಜ್
Follow us
ರಾಜೇಶ್ ದುಗ್ಗುಮನೆ
|

Updated on: Oct 14, 2024 | 12:46 PM

ಕನ್ನಡ ಚಿತ್ರರಂಗದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ್ದ ಹಿರಿಯ ನಿರ್ದೇಶಕ ಚಿ. ದತ್ತರಾಜ್ ಅವರು ಇಂದು (ಅಕ್ಟೋಬರ್ 14) ನಿಧನ ಹೊಂದಿದ್ದಾರೆ. ಅವರಗೆ 87 ವರ್ಷ ವಯಸ್ಸಾಗಿತ್ತು. ಚಿ.ದತ್ತರಾಜ್ ಅವರು ಖ್ಯಾತ ಗೀತ ಸಾಹಿತಿ, ಸಂಭಾಷಾಣಕಾರ ಚಿ. ಉದಯಶಂಕರ್ ಅವರ ಸಹೋದರ ಅನ್ನೋದು ವಿಶೇಷ.

ದತ್ತರಾಜ್​ ಅವರಿಗೆ ರಾಜ್​ಕುಮಾರ್ ಕುಟುಂಬದ ಜೊತೆ ಒಳ್ಳೆಯ ಆಪ್ತತೆ ಇತ್ತು. ಅವರು ರಾಜ್​ಕುಮಾರ್ ಅವರ ಜೊತೆ ಸಿನಿಮಾ ಮಾಡಿದ್ದರು. ಅಣ್ಣಾವ್ರು ನಟಿಸಿದ ‘ಕೆರಳಿದ ಸಿಂಹ’, ‘ಕಾಮನಬಿಲ್ಲು’, ‘ಅದೇ ಕಣ್ಣು’, ‘ಶೃತಿ ಸೇರಿದಾಗ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ದತ್ತರಾಜ್ ಕೆಲಸವನ್ನು ರಾಜ್​ಕುಮಾರ್ ಮೆಚ್ಚಿಕೊಂಡಿದ್ದರು. ಈ ಕಾರಣಕ್ಕೆ ಒಟ್ಟಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು.

ಇದನ್ನೂ ಓದಿ: ‘ನಾನು ಎಮ್ಮೆ ಕಾದವನು ಎಂಎ ಮಾಡಿದವನಲ್ಲ, ನನಗೇಕೆ ಡಾಕ್ಟರೇಟ್’ ಎಂದು ಕೇಳಿದ್ದ ರಾಜ್​ಕುಮಾರ್

ರಾಜ್​ಕುಮಾರ್ ಬಳಿಕ ಶಿವರಾಜ್​ಕುಮಾರ್ ಜೊತೆಯೂ ಕೆಲಸ ಮಾಡುವ ಅವಕಾಶ ದತ್ತರಾಜ್ ಅವರಿಗೆ ಸಿಕ್ಕಿತ್ತು. ಶಿವರಾಜಕುಮಾರ್ ಅಭಿನಯದ ‘ಮೃತ್ಯುಂಜಯ’, ‘ಆನಂದ ಜ್ಯೋತಿ’ ಹಾಗೂ ಮಂಜುಳ ಅವರು ನಟಿಸಿದ್ದ ‘ರುದ್ರಿ’ ಮುಂತಾದ ಚಿತ್ರಗಳನ್ನು ಚಿ.ದತ್ತರಾಜ್ ನಿರ್ದೇಶನ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.