ಪೊಲೀಸರು ಬಂದಿಲ್ಲ ಅಂತ ಸುಳ್ಳು ಹೇಳಿದ್ರಾ ರಾಕ್​ಲೈನ್? ಪಬ್​ ಸಿಸಿಟಿವಿಯಲ್ಲಿದೆ ದಾಖಲೆ

| Updated By: ಮದನ್​ ಕುಮಾರ್​

Updated on: Jan 14, 2024 | 2:15 PM

ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್ಐಆರ್​ನಲ್ಲಿ ಉಲ್ಲೇಖ ಆಗಿರುವಂತೆ ಸುಬ್ರಹ್ಮಣ್ಯ ನಗರ ಪೊಲೀಸರು ರಾತ್ರಿ 12:40ಕ್ಕೆ ಪಬ್ ಕ್ಲೋಸ್ ಮಾಡಿಸಲು ಹೋಗಿದ್ದರು. ಪೊಲೀಸರು ಎರಡನೇ ಬಾರಿಗೆ ಪಬ್​ಗೆ ಬಂದಿದ್ದು ರಾತ್ರಿ 2:51ಕ್ಕೆ. ಆ ವೇಳೆ ಅಲ್ಲಿ ಜನ ಸೇರಿದ್ದನ್ನು ಕ್ಲಿಯರ್ ಮಾಡಿಸಿದ್ದರು. ಆದರೆ ರಾಕ್​ಲೈನ್​ ವೆಂಕಟೇಶ್​ ಹೇಳಿಕೆ ಬೇರೆ ರೀತಿ ಇದೆ.

ಪೊಲೀಸರು ಬಂದಿಲ್ಲ ಅಂತ ಸುಳ್ಳು ಹೇಳಿದ್ರಾ ರಾಕ್​ಲೈನ್? ಪಬ್​ ಸಿಸಿಟಿವಿಯಲ್ಲಿದೆ ದಾಖಲೆ
ಸಿಸಿಟಿವಿ ದೃಶ್ಯ, ರಾಕ್​ಲೈನ್​ ವೆಂಕಟೇಶ್​, ದರ್ಶನ್​
Follow us on

ಬೆಂಗಳೂರಿನ ರಾಜಾಜಿನಗರದಲ್ಲಿ ಇರುವ ಜೆಟ್​ ಲ್ಯಾಗ್​ ಪಬ್​ನಲ್ಲಿ ‘ಕಾಟೇರ’ (Kaatera) ಚಿತ್ರತಂಡದವರು ನಿಯಮ ಉಲ್ಲಂಘಿಸಿ ಪಾರ್ಟಿ ಮಾಡಿರುವ ಪ್ರಕರಣ ಈಗ ಹೆಚ್ಚು ಚರ್ಚೆ ಆಗುತ್ತಿದೆ. ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​, ನಟ ದರ್ಶನ್​ (Darshan) ಸೇರಿದಂತೆ ಅನೇಕ ಸೆಲೆಬ್ರಿಟಿಗಳಿಗೆ ಸುಬ್ರಹ್ಮಣ್ಯ ನಗರ ಪೊಲೀಸರು ನೋಟಿಸ್​ ನೀಡಿ ವಿಚಾರಣೆಗೆ ಕರೆಸಿಕೊಂಡಿದ್ದಾರೆ. ವಿಚಾರಣೆಗೆ ಹಾಜರಾದ ಬಳಿಕ ಮಾಧ್ಯಮಗಳ ಎದುರು ಮಾತನಾಡಿದ ರಾಕ್​ಲೈನ್​ ವೆಂಕಟೇಶ್​ (Rockline Venkatesh) ಅವರು ಸುಳ್ಳು ಹೇಳಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ‘ಕಾಟೇರ’ ಚಿತ್ರತಂಡದವರು ಪಬ್​ನಲ್ಲಿ ಇದ್ದಾಗ ಪೊಲೀಸರು ಬಂದಿಲ್ಲ ಎಂದು ರಾಕ್​ಲೈನ್​ ವೆಂಕಟೇಶ್​ ಹೇಳಿದ್ದರು. ಆದರೆ ಅಂದು ರಾತ್ರಿ ಎರಡು ಬಾರಿ ಪೊಲೀಸರು ಭೇಟಿ ನೀಡಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜನವರಿ 3ರಂದು ಜೆಟ್​​ ಲ್ಯಾಗ್​ ಪಬ್​ಗೆ ಪೊಲೀಸರು ಬಂದೇ ಇಲ್ಲ ಎಂದು ರಾಕ್​ಲೈನ್ ವೆಂಕಟೇಶ್ ಹೇಳಿಕೆ ನೀಡಿದ್ದಾರೆ. ಪೊಲೀಸರ ಮೇಲಿನ ಕೋಪಕ್ಕೆ ಅವರು ಸುಳ್ಳು ಹೇಳಿದ್ದಾರಾ ಎಂಬ ಪ್ರಶ್ನೆ ಎದುರಾಗಿದೆ. ಸುಬ್ರಹ್ಮಣ್ಯ ನಗರ ಠಾಣೆಯ ಪೊಲೀಸರು ಅಂದು ರಾತ್ರಿ 12:45ಕ್ಕೆ ಭೇಟಿ ನೀಡಿ ರೆಸ್ಟೋಬಾರ್ ಕ್ಲೋಸ್ ಮಾಡಿಸಿ ಹೋಗಿದ್ದರು. ಪೊಲೀಸರು ಜೆಟ್​​ ಲ್ಯಾಗ್​ ಪಬ್​ಗೆ ಬಂದಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್ಐಆರ್​ನಲ್ಲಿ ಉಲ್ಲೇಖ ಆಗಿರುವಂತೆ ಸುಬ್ರಹ್ಮಣ್ಯ ನಗರ ಪೊಲೀಸರು ರಾತ್ರಿ 12:40ಕ್ಕೆ ಪಬ್ ಕ್ಲೋಸ್ ಮಾಡಿಸಲು ಹೋಗಿದ್ದರು. ಗ್ರಾಹಕರನ್ನು ಹೊರಗೆ ಕಳಿಸಿ ರೆಸ್ಟೋಬಾರ್ ಕ್ಲೋಸ್ ಮಾಡಿಸಿದ್ದರು. ಈ ವೇಳೆ ಸೆಲೆಬ್ರಿಟಿಗಳ ಬಗ್ಗೆಯೂ ಪಬ್​ ಸಿಬ್ಬಂದಿಗೆ ಪ್ರಶ್ನೆ ಮಾಡಲಾಯಿತು. ‘ಸಿನಿಮಾದವರ ಮೀಟಿಂಗ್​ ಇದೆ. 20 ನಿಮಿಷ ಮೀಟಿಂಗ್ ಮಾಡಿ ಎಲ್ಲರೂ ಹೋಗ್ತಾರೆ. ದರ್ಶನ್ ನಮ್ಮ ಫ್ಯಾಮಿಲಿ ಫ್ರೆಂಡ್. ಹೀಗಾಗಿ ವೈಯಕ್ತಿಕ ಮಾತುಕತೆ ಇದೆ. ಬಾರ್ ಕೌಂಟರ್ ಎಲ್ಲವನ್ನೂ ಕ್ಲೋಸ್ ಮಾಡಿದ್ದೇವೆ’ ಎಂದು ಪಬ್​ ಸಿಬ್ಬಂದಿ ಉತ್ತರಿಸಿದ್ದರು. ಬಳಿಕ ರಾಬರಿ ಆಗಿದೆ ಅಂತ ಕಂಟ್ರೋಲ್ ರೂಂಗೆ ಕಾಲ್ ಬಂದಿದ್ದರಿಂದ ಪೊಲೀಸರು ಅಲ್ಲಿಗೆ ತೆರಳಿದ್ದರು.

ಇದನ್ನೂ ಓದಿ: ‘ಆ ಉದ್ದೇಶ ನಮಗೆ ಇರಲಿಲ್ಲ’: ‘ಕಾಟೇರ’ ಪಾರ್ಟಿ ಕೇಸ್​ ಬಗ್ಗೆ ರಾಕ್​ಲೈನ್​ ಮೊದಲ ಪ್ರತಿಕ್ರಿಯೆ

ಇನ್ನು, ಪೊಲೀಸರು ಎರಡನೇ ಬಾರಿಗೆ ಪಬ್​ಗೆ ಬಂದಿದ್ದು ರಾತ್ರಿ 2:51ಕ್ಕೆ. ಆ ವೇಳೆ ಅಲ್ಲಿ ಜನ ಸೇರಿದ್ದನ್ನು ಕ್ಲಿಯರ್ ಮಾಡಿಸಿ ರೆಸ್ಟೋಬಾರ್ ಒಳಗೆ ಎಂಟ್ರಿ ನೀಡಿದರು. ಪಬ್​ ಕ್ಲೋಸ್ ಮಾಡಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡರು. ಪೊಲೀಸ್ ನಿಯಮ ಉಲ್ಲಂಘನೆ ಹಾಗೂ ಅಬಕಾರಿ ನಿಯಮದ ಅಡಿ ಕೇಸ್ ದಾಖಲು ಮಾಡಲಾಯಿತು. ಮಾಲಿಕರಾದ ಶಶಿರೇಖಾ ಹಾಗೂ ಮ್ಯಾನೇಜರ್ ಪ್ರಶಾಂತ್ ವಿರುದ್ಧ ಎಫ್ಐಆರ್ ಆಗಿದೆ. ಆದರೆ ಅಂದು ಪೊಲೀಸರೇ ಬಂದಿಲ್ಲ ಅಂತ ಮಾಧ್ಯಮಗಳ ಮುಂದೆ ರಾಕ್​ಲೈನ್​ ವೆಂಕಟೇಶ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ