AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನೇಶ್​ಗಾಗಿ ಮಂಗಳೂರು ಮೀನಿನ ಅಡುಗೆ ಮಾಡಿಸಿದ್ದ ಅಣ್ಣಾವ್ರು

ಖ್ಯಾತ ಕನ್ನಡ ಚಿತ್ರನಟ ದಿನೇಶ್ ಮಂಗಳೂರು ಅವರು ಆಗಸ್ಟ್ 25 ರಂದು ನಿಧನರಾದರು. 'ಕೆಜಿಎಫ್', 'ಆ ದಿನಗಳು' ಮುಂತಾದ ಚಿತ್ರಗಳಲ್ಲಿ ಖಡಕ್ ಪಾತ್ರಗಳ ಮೂಲಕ ಅವರು ಪ್ರೇಕ್ಷಕರ ಮನ ಗೆದ್ದಿದ್ದರು. 'ಜನುಮದ ಜೋಡಿ' ಚಿತ್ರದಲ್ಲಿ ಆರ್ಟ್ ಡೈರೆಕ್ಟರ್ ಆಗಿಯೂ ಕೆಲಸ ಮಾಡಿದ್ದ ಅವರು, ರಾಜಕುಮಾರ್ ಅವರೊಂದಿಗಿನ ಅನುಭವಗಳನ್ನು ಹಂಚಿಕೊಂಡಿದ್ದರು.

ದಿನೇಶ್​ಗಾಗಿ ಮಂಗಳೂರು ಮೀನಿನ ಅಡುಗೆ ಮಾಡಿಸಿದ್ದ ಅಣ್ಣಾವ್ರು
ದಿನೇಶ್​-ರಾಜ್​ಕುಮಾರ್
ರಾಜೇಶ್ ದುಗ್ಗುಮನೆ
|

Updated on: Aug 25, 2025 | 1:46 PM

Share

ಖಕಡ್ ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದವರು ದಿನೇಶ್ ಮಂಗಳೂರು (Dinesh Mangalore). ಅವರು ಈಗ ನಮ್ಮ ಜೊತೆ ಇಲ್ಲ. ಇಂದು (ಆಗಸ್ಟ್ 25) ಅವರು ನಿಧನ ಹೊಂದಿದ್ದಾರೆ. ಅವರ ಸಾವು ಅನೇಕರಿಗೆ ಬೇಸರ ತರಿಸಿದೆ. ಒಂದೊಳ್ಳೆಯ ಕಲಾವಿದನನ್ನು ನಾವು ಕಳೆದುಕೊಂಡಿದ್ದೇವೆ. ದಿನೇಶ್ ಅವರು ‘ಕೆಜಿಎಫ್’, ‘ಆ ದಿನಗಳು’, ‘ಉಳಿದವರು ಕಂಡತೆ’ ರೀತಿಯ ಚಿತ್ರದಲ್ಲಿ ಮಾಡಿದ ಪಾತ್ರಗಳು ಯಾವಾಗಲೂ ನಮ್ಮ ಜೊತೆ ಇರುವಂಥದ್ದು.

ದಿನೇಶ್ ಅವರು ‘ಜನುಮದ ಜೋಡಿ’ ಚಿತ್ರದಲ್ಲಿ ಆರ್ಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. ಈ ಚಿತ್ರದ ಅನುಭವವನ್ನು ಈ ಮೊದಲು ‘ಕಲಾ ಮಾಧ್ಯಮ’ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ‘ನನ್ನ ಮೊಟ್ಟ ಮೊದಲ ಕಲಾ ನಿರ್ದೇಶನ ಎಂದರೆ ಅದು ಜನುಮದ ಜೋಡಿ ಸಿನಿಮಾ. ಅಣ್ಣಾವ್ರ ಕಂಪನಿ ಅನ್ನೋ ಖುಷಿ ಇತ್ತು. ನಟರು, ತಂತ್ರಜ್ಞರು ಎಲ್ಲರೂ ಒಟ್ಟಿಗೇ ಇದ್ದಿದ್ದೆವು. ಮೈಸೂರಲ್ಲಿ ಶೂಟ್ ನಡೆದಿತ್ತು’ ಎಂದು ದಿನೇಶ್ ಹೇಳಿದ್ದರು.

‘ರಾಜ್​ಕುಮಾರ್ ಸರಳವಾಗಿ ಇರುತ್ತಿದ್ದರು. ದಿನೇಶ್ ಅವರೇ ನಿಮಗೆ ಮಟನ್ ಆಗಲ್ಲ ಅನಿಸುತ್ತದೆ. ನೀವು ಮಂಗಳೂರಿನವರಲ್ಲವೇ, ಅಂಜಲ್ ಮೀನಿನ ಅಡುಗೆ ಮಾಡಿಸಿದ್ದೇವೆ ಅದನ್ನೇ ಊಟ ಮಾಡಿ ಎಂದು ಹೇಳುತ್ತಿದ್ದರು. ಅವರು ಯಾವಾಗಲೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅವರು ಮಾತೇ ತೃಪ್ತಿ ಕೊಡುತ್ತಿತ್ತು’ ಎಂದಿದ್ದರು ದಿನೇಶ್.

ಇದನ್ನೂ ಓದಿ
Image
ವಿಚ್ಛೇದನದ ಹಂತದಲ್ಲಿ ಗೋವಿಂದ ದಾಂಪತ್ಯ; ಪತಿಯಿಂದ ಮೋಸ ಆಗಿದೆ ಎಂದ ಸುನೀತಾ
Image
‘ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ’; ದೀಪಿಕಾ ದಾಸ್
Image
ವಿಶೇಷ ದಿನದಂದೇ ವಿವಾಹ ಆಗುತ್ತಿದ್ದಾರೆ ಆ್ಯಂಕರ್ ಅನುಶ್ರೀ; ಇಲ್ಲಿದೆ ವಿವರ
Image
‘ಸು ಫ್ರಮ್ ಸೋ’ ಹಂಚಿಕೆಗೆ ಸಹಾಯ ಮಾಡಿದ್ದ ದುಲ್ಖರ್ ​ ಋಣ ತೀರಿಸಿದ ರಾಜ್

ದಿನೇಶ್ ಸಂದರ್ಶನ

‘ಸಿನಿಮಾ ಡಿಸ್ಕಶನ್ ವೇಳೆ ಆರ್ಟ್ ಡೈರೆಕ್ಟರ್​ನೂ ಅವರು ಕರೆಸಿಕೊಳ್ಳುತ್ತಿದ್ದರು. ಹೀಗಾಗಿ ಜನುಮದ ಜೋಡಿ ಸಿನಿಮಾ ವೇಳೆ ನಾನೂ ಹೋಗಿದ್ದೆ. ಇದು ನಿಜಕ್ಕೂ ಖುಷಿಯ ವಿಚಾರ. ಈ ಕಾರಣದಿಂದಲೇ ಅವರ ಸಿನಿಮಾ, ಅವರ ಮಕ್ಕಳ ಸಿನಿಮಾಗಳಿಗೆ ತೂಕ ಇರುತ್ತಿತ್ತು. ಸಿನಿಮಾ ಹಿಟ್ ಆಗಲು ರಾಜ್​ಕುಮಾರ್ ಕೂಡ ಕಾರಣ. ರಾಜ್​ಕುಮಾರ್ ನಾನಾ ರೀತಿಯ ಪಾತ್ರಗಳನ್ನು ಮಾಡಿದ್ದರು. ಎಲ್ಲಾ ಪಾತ್ರಗಳೂ ಭಿನ್ನವಾಗಿದ್ದವು’ ಎಂದು ದಿನೇಶ್ ಹೇಳಿದ್ದರು.

ಇದನ್ನೂ ಓದಿ: ‘ಕೆಜಿಎಫ್’ ಸಿನಿಮಾ ಖ್ಯಾತಿಯ ನಟ ದಿನೇಶ್ ಮಂಗಳೂರು ನಿಧನ

‘ಕಲಾ ನಿರ್ದೇಶನವನ್ನು ಯಾರೂ ಬೇಕಾದರೂ ಮಾಡಬಹುದು ಎಂಬ ಪರಿಸ್ಥಿತಿ ಬಂದಿದೆ. ಇದು ನನಗೆ ಬೇಸರ ಮೂಡಿಸಿತು. ಈ ಕಾರಣಕ್ಕೆ ನಾನು ಕಲಾ ನಿರ್ದೇಶನವನ್ನು 2010ರಲ್ಲೇ ಬಿಟ್ಟೆ’ ಎಂದು ದಿನೇಶ್ ಹೇಳಿದ್ದರು. ಆ ಬಳಿಕ ಅವರು ನಟನೆಯಲ್ಲಿ ತೊಡಗಿಕೊಂಡರು. ಖಡಕ್ ಪಾತ್ರಗಳ ಮೂಲಕ ದಿನೇಶ್ ಮಂಗಳೂರು ಗಮನ ಸೆಳೆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಫ್ಲೈದುಬೈ ಪ್ರಕರಣ: ಸಹ ಪೈಲಟ್ ಕೃತ್ಯವನ್ನು ಶ್ಲಾಘಿಸಿದ ಅಲ್-ಖೈದಾ
ಫ್ಲೈದುಬೈ ಪ್ರಕರಣ: ಸಹ ಪೈಲಟ್ ಕೃತ್ಯವನ್ನು ಶ್ಲಾಘಿಸಿದ ಅಲ್-ಖೈದಾ