AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್ ಮುಂದಿನ ಸಿನಿಮಾ ಮಿತ್ರನ್ ಜೊತೆ? ದೊಡ್ಡ ವಿಷಯ ರಿವೀಲ್ ಮಾಡಿದ ತಮಿಳು ನಿರ್ದೇಶಕ

ತಮಿಳಿನ ಪ್ರಸಿದ್ಧ ನಿರ್ದೇಶಕ ಪಿ.ಎಸ್. ಮಿತ್ರನ್ ನಟ ಯಶ್‌ಗೆ ಕಥೆ ಹೇಳಿದ್ದು, ಕಥೆ ಯಶ್‌ಗೆ ಇಷ್ಟವಾಗಿದೆ. ಪ್ರಸ್ತುತ ನಟಿಸುತ್ತಿರುವ 'ಟಾಕ್ಸಿಕ್' ಸಿನಿಮಾ ಪೂರ್ಣಗೊಂಡ ನಂತರ ಇಬ್ಬರೂ ಸೇರಿ ಈ ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದಾರೆ. ಪಿ.ಎಸ್. ಮಿತ್ರನ್ ಅವರು ತಮ್ಮ 'ಇರುಂಬು ತಿರೈ', 'ಹೀರೋ' ಹಾಗೂ 'ಸರ್ದಾರ್' ಸಿನಿಮಾಗಳ ಮೂಲಕ ಆಕ್ಷನ್, ಸ್ಪೈ ಹಾಗೂ ಕಂಟೆಂಟ್ ಆಧಾರಿತ ಸಿನಿಮಾಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ.

ಯಶ್ ಮುಂದಿನ ಸಿನಿಮಾ ಮಿತ್ರನ್ ಜೊತೆ? ದೊಡ್ಡ ವಿಷಯ ರಿವೀಲ್ ಮಾಡಿದ ತಮಿಳು ನಿರ್ದೇಶಕ
ಮಿತ್ರನ್-ಯಶ್,ಕಿಯಾರಾ
ರಾಜೇಶ್ ದುಗ್ಗುಮನೆ
|

Updated on: Aug 21, 2026 | 1:11 PM

Share

ಮುಖ್ಯಾಂಶಗಳು

  • 'ಟಾಕ್ಸಿಕ್' ನಂತರ ಯಶ್ ನೆಕ್ಸ್ಟ್ ಮೂವಿ ರಿವೀಲ್
  • 'ಸರ್ದಾರ್' ನಿರ್ದೇಶಕನ ಜೊತೆ ಹೊಸ ಸಿನಿಮಾ
  • ರಾಕಿಂಗ್ ಸ್ಟಾರ್‌ಗೆ ಮಿತ್ರನ್ ಕಥೆ ಇಷ್ಟ

ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ಮತ್ತೊಂದು ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ‘ಸರ್ದಾರ್’ ಹಾಗೂ ‘ಸರ್ದಾರ್ 2’ ನಂತಹ ಬ್ಲಾಕ್‌ಬಸ್ಟರ್ ಆಕ್ಷನ್ ಸಿನಿಮಾಗಳನ್ನು ನಿರ್ದೇಶಿಸಿರುವ ಪ್ರಸಿದ್ಧ ತಮಿಳು ನಿರ್ದೇಶಕ ಪಿ.ಎಸ್. ಮಿತ್ರನ್ ಅವರು ಯಶ್ ಅವರಿಗಾಗಿ ಒಂದು ಅದ್ಭುತ ಕಥೆಯನ್ನು ಸಿದ್ಧಪಡಿಸಿದ್ದು, ಈ ಕಥೆ ಯಶ್ ಅವರಿಗೆ (Yash) ತುಂಬಾ ಇಷ್ಟವಾಗಿದೆ ಎಂದು ಸ್ವತಃ ನಿರ್ದೇಶಕರೇ ಬಹಿರಂಗಪಡಿಸಿದ್ದಾರೆ.

‘ಟಾಕ್ಸಿಕ್’ ನಂತರ ಹೊಸ ಸಿನಿಮಾ ಬಿಗ್ ಪ್ಲಾನ್

ಪ್ರಸ್ತುತ ಯಶ್ ಅವರು ಗೀತು ಮೋಹನ್‌ದಾಸ್ ನಿರ್ದೇಶನದ ಬೃಹತ್ ಪ್ಯಾನ್-ಇಂಡಿಯಾ ಸಿನಿಮಾ ‘ಟಾಕ್ಸಿಕ್’ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾ ಆಗಸ್ಟ್ 26ರಂದು ತೆರೆಗೆ ಬರಲಿದೆ. ಸಿನಿಮಾ ಬಿಡುಗಡೆಯ ನಂತರ ಈ ಹೊಸ ಯೋಜನೆಯನ್ನು ಆರಂಭಿಸಲು ಎಸ್. ಮಿತ್ರನ್ ಹಾಗೂ ಯಶ್ ಪ್ಲ್ಯಾನ್ ಮಾಡಿದ್ದಾರೆಯೇ ಎನ್ನುವ ಪ್ರಶ್ನೆ ಮೂಡಿದೆ. ‘ಟಾಕ್ಸಿಕ್’ ನಂತರ ಯಶ್ ಅವರ ಮುಂದಿನ ಸಿನಿಮಾ ಮಿತ್ರನ್ ಜೊತೆಗೇ ಇರಲಿದೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆ.

ಆಕ್ಷನ್ ಕಥಾಹಂದರದ ನಿರೀಕ್ಷೆ

ಪಿ.ಎಸ್. ಮಿತ್ರನ್ ಅವರು ತಮ್ಮ ‘ಇರುಂಬು ತಿರೈ’, ‘ಹೀರೋ’ ಹಾಗೂ ‘ಸರ್ದಾರ್’ ಸಿನಿಮಾಗಳ ಮೂಲಕ ಆಕ್ಷನ್, ಸ್ಪೈ ಹಾಗೂ ಕಂಟೆಂಟ್ ಆಧಾರಿತ ಸಿನಿಮಾಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಈಗ ಯಶ್ ಅವರ ಮಾಸ್ ಇಮೇಜ್‌ಗೆ ತಕ್ಕಂತೆ ಕಥೆ ಹೆಣೆದಿರುವುದರಿಂದ, ಈ ಕಾಂಬಿನೇಷನ್‌ನಲ್ಲಿ ಮತ್ತೊಂದು ಮೆಗಾ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಮೂಡಿಬರುವುದು ಖಚಿತ ಎನ್ನಲಾಗುತ್ತಿದೆ. ಈ ಸುದ್ದಿ ಯಶ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಬುಕಿಂಗ್ ಓಪನ್ ಆಗುತ್ತಿದ್ದಂತೆ ಟಾಕ್ಸಿಕ್ ಟಿಕೆಟ್‌ಗಳು ಸೋಲ್ಡ್‌ ಔಟ್: ಯಶ್ ಸಿನಿಮಾ ಕ್ರೇಜ್ ನೋಡಿ

ರಾಮಾಯಣದಲ್ಲೂ ಬ್ಯುಸಿ

‘ಟಾಕ್ಸಿಕ್’ ರಿಲೀಸ್ ಬಳಿಕ ಯಶ್ ಅವರು ‘ರಾಮಾಯಣ’ ಸಿನಿಮಾ ಪ್ರಾರದಲ್ಲಿ ತೊಡಗಿಕೊಳ್ಳಲಿದ್ದಾರೆ. ಆ ಬಳಿಕ ಅವರು ‘ರಾಮಾಯಣ 2’ ಸಿನಿಮಾ ಶೂಟ್​​ನಲ್ಲೂ ಬ್ಯುಸಿ ಆಗಬೇಕಿದೆ. ಇವುಗಳ ಜೊತೆ ಜೊತೆಯೇ ಯಶ್ ಮತ್ತೊಂದು ಸಿನಿಮಾ ಆರಂಭಿಸುತ್ತಾರಾ ಎಂಬುದು ಸದ್ಯದ ಪ್ರಶ್ನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್
ಜೈಲಿನಲ್ಲಿ ಮೊಬೈಲ್ ಬಳಕೆ ಒಪ್ಪಿಕೊಂಡ ಪ್ರಜ್ವಲ್ ರೇವಣ್ಣ!
ಜೈಲಿನಲ್ಲಿ ಮೊಬೈಲ್ ಬಳಕೆ ಒಪ್ಪಿಕೊಂಡ ಪ್ರಜ್ವಲ್ ರೇವಣ್ಣ!