Dr. Rajkumar Birth Anniversary: ರಾಜ್​ಕುಮಾರ್​ ಜತೆ ಫೋಟೋ ತೆಗೆಸಿಕೊಳ್ಳಲು ಲವರ್​​ ಕಾಯಿಸಿದ್ದೆ

ಅದು 1999ನೇ ಇಸವಿ. ಆಗ ಅಣ್ಣಾವ್ರು ಅವರ ಕೊನೆಯ ಸಿನಿಮಾ ಶಬ್ದವೇದಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ವಿಧಾನ ಸೌಧ ಹತ್ತಿರ ಕೆ.ಆರ್​. ವೃತ್ತದಲ್ಲಿ ಶಬ್ದವೇದಿ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿತ್ತು

  • TV9 Web Team
  • Publish Date - 7:32 am, Sat, 24 April 21

ಡಾ. ರಾಜ್​ಕುಮಾರ್​ ಅವರನ್ನು ಕಣ್ತುಂಬಿಕೊಳ್ಳುವ ಭಾಗ್ಯ ಅನೇಕರಿಗೆ ಒದಗಿ ಬಂದಿದ್ದುಂಟು. ಆದರೆ, ಕ್ಯಾಮೆರಾಗಳು ಅಷ್ಟಾಗಿ ಬಳಕೆ ಇಲ್ಲದ ಆ ಕಾಲದಲ್ಲೂ ಫೋಟೋ ತೆಗೆಸಿಕೊಳ್ಳುವ ಅದೃಷ್ಟ ಎಲ್ಲರಿಗೂ ಸಿಕ್ಕಿಲ್ಲ. ಈ ರೀತಿ ಫೋಟೋ ತೆಗೆಸಿಕೊಂಡ ಅದೃಷ್ಟವಂತರಲ್ಲಿ ಬೆಂಗಳೂರಿನ ಬನಶಂಕರಿಯ ಚಂದ್ರ ಶೇಖರ್. ಆರ್ ಕೂಡ ಒಬ್ಬರು. ಅವರು ರಾಜ್​ಕುಮಾರ್​ ಅವರನ್ನ ಭೇಟಿ ಆದ ಅಪರೂಪದ ಘಟನೆಯನ್ನು ಟಿವಿ9 ಕನ್ನಡ ಡಿಜಿಟಲ್​ ಜತೆ ಹಂಚಿಕೊಂಡಿದ್ದಾರೆ. 

ಅದು 1999ನೇ ಇಸವಿ. ಆಗ ಅಣ್ಣಾವ್ರು ಅವರ ಕೊನೆಯ ಸಿನಿಮಾ ಶಬ್ದವೇದಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ವಿಧಾನ ಸೌಧ ಹತ್ತಿರ ಕೆ.ಆರ್​. ವೃತ್ತದಲ್ಲಿ ಶಬ್ದವೇದಿ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿತ್ತು. ಅಶ್ವಥ್ ಅವರನ್ನು ಅಣ್ಣಾವ್ರು ಚೇಸ್ ಮಾಡಿ ಹಿಡಿಯುವ ದೃಶ್ಯದ ಚಿತ್ರೀಕರಣವಾಗುತ್ತಿತ್ತು.

ನನಗೆ ಆಗಿನ್ನೂ ಮದುವೆ ಆಗಿರಲಿಲ್ಲ. ಶಾಂತಿ ಎಂಬುವವರನ್ನು ಪ್ರೀತಿಸುತ್ತಿದೆ. ನಂತರ ಅವರನ್ನೇ ಮದುವೆ ಆದೆ. ಪ್ರೀತಿ ಮಾಡುತ್ತಿದ್ದ ದಿನಗಳಲ್ಲಿ  ನಾವಿಬ್ಬರೂ ಸೈಕಲ್​​ನಲ್ಲಿ ವಿಧಾನ ಸೌಧ ನೋಡಲು ಹೋಗುತ್ತಿದ್ದೆವು. ಶೂಟಿಂಗ್​ ನಡೆಯುತ್ತಿದ್ದ ದಿನವದು. ನಾನು ವಿಧಾನಸೌಧ ಬಳಿ ಹೋದಾಗ ಒಂದು ಗುಂಪು ಕಾಣಿಸಿತು. ನಾನು ಶಾಂತಿಯನ್ನು ಅಲ್ಲೇ ನಿಲ್ಲಿಸಿ ಆ ಗುಂಪು ಏನೆಂದು ನೋಡಲು ಹೋದೆ. ನನ್ನ ಏಳೇಳು ಜನ್ಮದ ಪುಣ್ಯವೋ ಏನೋ. ಆ ಗುಂಪಿನ ಒಳಗೆ ನುಗ್ಗಿ ನೋಡಿದಾಗ ರಾಜ್​​ಕುಮಾರ್​ ಅವರು ಕಂಡರು.

ಅಣ್ಣಾವ್ರು ಜತೆ ಒಂದು ಫೋಟೋ ತೆಗಿಸಿಕೊಳ್ಳಲೇ ಬೇಕೆಂದು ಹಠಕ್ಕೆ ಬಿದ್ದೆ. ಅಲ್ಲೇ ಕಾಯುತ್ತಾ ನಿಂತೆ. ಸಂಜೆ ಸುಮಾರು 4 ಗಂಟೆ ಆಗುತ್ತಾ ಬಂತು. ಊಟವೂ ಇಲ್ಲ. ಶಾಂತಿಯನ್ನು ನೋಡಲು ಹೋಗಲಿಲ್ಲ. ಕೊನೆಗೂ ಅಣ್ಣಾವ್ರು ಎಲ್ಲರ ಜೊತೆ ಫೋಟೋ ತೆಗಿಸಿಕೊಳ್ಳಲು ಮುಂದಾದರು. ಅಣ್ಣಾವ್ರ ಜೊತೆ ಜತೆ ಫೋಟೋ ತೆಗಿಸಿ ನನ್ನ ಜನ್ಮ ಪಾವನ ಆಯಿತು.

ಫೋಟೋ ತೆಗೆಸಿಕೊಳ್ಳುವಾಗ ಅಣ್ಣಾವ್ರು ನನ್ನ ಊರು ಯಾವುದು ಎಂದು ಕೇಳಿದರು. ಅದಕ್ಕೆ ನಾನು ಮೈಸೂರು ಎಂದೆ. ಆಗ ಅಣ್ಣಾವ್ರು, ನಮ್ಮ ಊರಿನ ಕಡೆಯವರು ಎಂದು ನಕ್ಕರು. ಬೆಳಗ್ಗೆ 11 ಗಂಟೆ ಇಂದ ಸಂಜೆ 4 ಗಂಟೆವರೆಗೆ ನನನ್ನೇ ಕಾಯುತ್ತಿದ್ದ ನನ್ನ ಪ್ರಿಯತಮೆ ಹತ್ತಿರ ಹೋದೆ. ಅವಳನ್ನು ನೋಡಿ ನನಗೆ ಪಾಪ ಎನ್ನಿಸಿತು. ಅವಳು ಕೊಂಚ ಭಯಗೊಂಡಿದ್ದಳು. ನಂತರ ಫೋಟೋ ತೆಗೆಸಿಕೊಂಡ ವಿಚಾರ ಹೇಳಿದಾಗ ಅವಳು ಖುಷಿಪಟ್ಟಳು.

ಇದನ್ನೂ ಓದಿ: ರಾಜ್​ಕುಮಾರ್​ ಕಿಡ್ನ್ಯಾಪ್​​ ಆದಾಗ ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿಯ ಎಕ್ಸ್​ಕ್ಲ್ಯೂಸಿವ್ ಸಂದರ್ಶನ

Ads By Adgebra

Karnataka Bengaluru News LIVE: ಈ ವೇಳೆ ಸಂಪುಟ ರಚನೆ ವಿಚಾರವಾಗಿ ಬಿಎಸ್​ವೈ ಜೊತೆ ಬೊಮ್ಮಾಯಿ ಚರ್ಚೆ ನಡೆಸಿರುವ ಸಾಧ್ಯತೆಯಿದೆ. ಈಗಾಗಲೇ ಬಿಎಸ್​ವೈ ಆಪ್ತ ಶಾಸಕರು ಬೊಮ್ಮಾಯಿ ಸಂಪುಟ ಸೇರಲು ಲಾಬಿ ನಡೆಸುತ್ತಿದ್ದಾರೆ.