ಮತ್ತೊಮ್ಮೆ ಸಾಬೀತಾಯ್ತು ಕನ್ನಡಿಗರ ತಾಕತ್ತು; ಅಣ್ಣಾವ್ರ ವಿಚಾರದಲ್ಲಿ ತಪ್ಪು ತಿದ್ದಿಕೊಂಡ ಗೂಗಲ್​

| Updated By: ಮದನ್​ ಕುಮಾರ್​

Updated on: Jun 25, 2021 | 3:32 PM

ಗೂಗಲ್​ನಲ್ಲಿ Vikram Vedha Cast ಎಂದು ಸರ್ಚ್​ ಮಾಡಿದರೆ ವಿಜಯ್​ ಸೇತುಪತಿ, ಆರ್​. ಮಾಧವನ್​, ಶ್ರದ್ಧಾ ಶ್ರೀನಾಥ್​ ಜತೆಗೆ ರಾಜ್​ಕುಮಾರ್​ ಹೆಸರು ಕೂಡ ತೋರಿಸುತ್ತಿತ್ತು. ಹಾಫ್​ ಬಾಯ್ಲ್​ ಅನ್ನೋದು ಪಾತ್ರದ ಹೆಸರು. ಈ ಬಗ್ಗೆ ಅನೇಕರು ಸೋಶಿಯಲ್​ ಮೀಡಿಯಾದಲ್ಲಿ ಧ್ವನಿ ಎತ್ತಿದ್ದರು.

ಮತ್ತೊಮ್ಮೆ ಸಾಬೀತಾಯ್ತು ಕನ್ನಡಿಗರ ತಾಕತ್ತು; ಅಣ್ಣಾವ್ರ ವಿಚಾರದಲ್ಲಿ ತಪ್ಪು ತಿದ್ದಿಕೊಂಡ ಗೂಗಲ್​
ಮತ್ತೊಮ್ಮೆ ಸಾಬೀತಾಯ್ತು ಕನ್ನಡಿಗರ ತಾಕತ್ತು; ಅಣ್ಣಾವ್ರ ವಿಚಾರದಲ್ಲಿ ತಪ್ಪು ತಿದ್ದಿಕೊಂಡ ಗೂಗಲ್​
Follow us on

ಇತ್ತೀಚಿನ ದಿನಗಳಲ್ಲಿ ಗೂಗಲ್​ನಿಂದ ಕನ್ನಡಕ್ಕೆ ಹಾಗೂ ಕನ್ನಡಿಗರಿಗೆ ಪದೇ ಪದೇ ಅವಮಾನ ಆಗುತ್ತಲೇ ಇದೆ. ಇದರ ವಿರುದ್ಧ ಕನ್ನಡಿಗರು ಹೋರಾಟಕ್ಕೆ ಇಳಿಯುತ್ತಿದ್ದಾರೆ. ಈಗ ಕನ್ನಡಿಗರ ಹೋರಾಟಕ್ಕೆ ಫಲ ಸಿಕ್ಕಿದೆ. ವರನಟ ಡಾ. ರಾಜ್​ಕುಮಾರ್​ ಅವರ ವಿಚಾರದಲ್ಲಿ ಗೂಗಲ್​ ತಾನು ಮಾಡಿದ ತಪ್ಪನ್ನು ತಿದ್ದುಕೊಂಡಿದೆ.

ಗೂಗಲ್​ನಲ್ಲಿ Vikram Vedha Cast ಎಂದು ಸರ್ಚ್​ ಮಾಡಿದರೆ ವಿಜಯ್​ ಸೇತುಪತಿ, ಆರ್​. ಮಾಧವನ್​, ಶ್ರದ್ಧಾ ಶ್ರೀನಾಥ್​ ಜತೆಗೆ ರಾಜ್​ಕುಮಾರ್​ ಹೆಸರು ಕೂಡ ತೋರಿಸುತ್ತಿತ್ತು. ಹಾಫ್​ ಬಾಯ್ಲ್​ ಅನ್ನೋದು ಪಾತ್ರದ ಹೆಸರು. ಈ ಬಗ್ಗೆ ಅನೇಕರು ಸೋಶಿಯಲ್​ ಮೀಡಿಯಾದಲ್ಲಿ ಧ್ವನಿ ಎತ್ತಿದ್ದರು. ನಟ, ನಿರ್ದೇಶಕ ರಿಷಬ್ ಶೆಟ್ಟಿ ಸೇರಿ ಅನೇಕರು ಇದರ ಸ್ಕ್ರೀನ್ ಶಾಟ್​ ಶೇರ್​ ಮಾಡಿಕೊಂಡು ರಿಪೋರ್ಟ್​ ಮಾಡಬೇಕು ಎಂದು ವಿನಂತಿಸಿಕೊಂಡಿದ್ದರು.

ಈಗ ಈ ವಿಚಾರ ಗೂಗಲ್​ಗೆ ತಲುಪಿದ್ದು, ಅದನ್ನು ರಿಮೂವ್​ ಮಾಡಲಾಗಿದೆ. ಈಗ ವಿಕ್ರಂ ವೇದ ಸಿನಿಮಾದ ಪಾತ್ರ ವರ್ಗ ಸರ್ಚ್​ ಮಾಡಿದರೆ ಎಲ್ಲಿಯೂ ರಾಜ್​ಕುಮಾರ್​ ಹೆಸರು ಕಾಣುತ್ತಿಲ್ಲ. ಈ ಮೂಲಕ ಕನ್ನಡಿಗರ ತಾಕತ್ತು ಏನು ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ.

ಇತ್ತೀಚೆಗೆ Ugliest Language of India ಎಂದು ಗೂಗಲ್​ನಲ್ಲಿ ಸರ್ಚ್ ಮಾಡಿದರೆ ಕನ್ನಡ ಎಂದು ಪ್ರದರ್ಶಿಸುತ್ತಿದ್ದ ಬಗ್ಗೆ ಅಪಾರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಗೂಗಲ್ ಈ ಬಗ್ಗೆ ಕ್ಷಮೆ ಯಾಚಿಸಿತ್ತು. ‘ಹುಡುಕುವುದು ಯಾವಾಗಲೂ ಪರಿಪೂರ್ಣವಾಗಿರುವುದಿಲ್ಲ. ಕೆಲವೊಮ್ಮೆ ಇಂಟರ್​ನೆಟ್​ನಲ್ಲಿ ನಿರ್ದಿಷ್ಟವಾದ ಹುಡುಕಾಟಗಳಿಗೆ ಬರುವ ಫಲಿತಾಂಶಗಳು ಆಶ್ಚರ್ಯವನ್ನುಂಟು ಮಾಡುತ್ತದೆ. ಇದು ಸೂಕ್ತವಲ್ಲ ಎಂಬುದು ನಮಗೆ ಗೊತ್ತು. ಆದರೆ ಯಾವುದೇ ಸಮಸ್ಯೆ ಎದುರಾದಾಗ ಮತ್ತು ನಮ್ಮ ಗಮನಕ್ಕೆ ಬಂದಾಗ ನಾವು ಕ್ಷಿಪ್ರವಾಗಿ ಕ್ರಮ ಕೈಗೊಳ್ಳುತ್ತೇವೆ. ಮತ್ತು ನಮ್ಮ ಅಲ್ಗೋರಿಧಂ ಅನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಸದಾ ಕ್ರಿಯಾಶೀಲರಾಗಿರುವುದನ್ನು ಮುಂದುವರೆಸುತ್ತೇವೆ. ತಪ್ಪು ಅರ್ಥ ಬಂದಿರುವುದಕ್ಕೆ ಮತ್ತು ಯಾವುದೇ ಭಾವನೆಗಳಿಗೆ ಧಕ್ಕೆಯಾಗಿದ್ದರೆ ನಾವು ಕ್ಷಮೆ ಯಾಚಿಸುತ್ತಿದ್ದೇವೆ’ ಎಂದು ಗೂಗಲ್​ ಹೇಳಿತ್ತು.

ಇದನ್ನೂ ಓದಿ:

Dr. Rajkumar: ಗೂಗಲ್​ನಲ್ಲಿ ಡಾ. ರಾಜ್​ಕುಮಾರ್​ ಬಗ್ಗೆ ತಪ್ಪು ಮಾಹಿತಿ; ಪಾಠ ಕಲಿಸಲು ಈಗ ಕನ್ನಡಿಗರು ಮಾಡಬೇಕಿರೋದು ಏನು?