ವಿಷ್ಣುವರ್ಧನ್ ಎಷ್ಟು ಅದ್ಭುತವಾಗಿ ಇಂಗ್ಲಿಷ್​ನಲ್ಲಿ ಮಾತಾಡ್ತಿದ್ರು ನೋಡಿ

ಡಾ. ವಿಷ್ಣುವರ್ಧನ್ ಹಾಗೂ ಡಾ. ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಇಬ್ಬರು ಮೇರು ದಿಗ್ಗಜರು. ಇವರ ನಡುವಿನ ಅನನ್ಯ ಬಾಂಧವ್ಯ, ‘ಯಜಮಾನ’ ಸಿನಿಮಾ ಸಂದರ್ಭದ ಅಪರೂಪದ ನೆನಪುಗಳು, ಶಿಕ್ಷಣ ಹಿನ್ನೆಲೆ ಹಾಗೂ ಇಬ್ಬರ ಸಂಬಂಧದ ಕುರಿತಿದ್ದ ಊಹಾಪೋಹಗಳಿಗೆ ವೇದಿಕೆಗಳಲ್ಲಿ ಸಿಕ್ಕ ಉತ್ತರಗಳ ಪೂರ್ಣ ವಿವರ ಇಲ್ಲಿದೆ. ಅಪ್ರತಿಮ ನಟರ ಅಪರೂಪದ ಕಥಾನಕ ನಿಮಗಾಗಿ.

ವಿಷ್ಣುವರ್ಧನ್ ಎಷ್ಟು ಅದ್ಭುತವಾಗಿ ಇಂಗ್ಲಿಷ್​ನಲ್ಲಿ ಮಾತಾಡ್ತಿದ್ರು ನೋಡಿ
Vishnu
Edited By:

Updated on: Oct 16, 2026 | 10:58 AM

ಮುಖ್ಯಾಂಶಗಳು

  • ಅಣ್ಣಾವ್ರು ಶಾಕ್ ಆಗಿದ್ದ ಆ ಘಟನೆ
  • ಯಜಮಾನ' ಕುರಿತು ವಿಷ್ಣು ಬಿಚ್ಚಿಟ್ಟ ಸತ್ಯ
  • ಸಾಹಸಸಿಂಹನ ಶಿಕ್ಷಣ ಮತ್ತು ಸಿನಿಮಾ ಪಯಣ

ಭಾರತೀಯ ಚಿತ್ರರಂಗ ಕಂಡ ಅತ್ಯಂತ ಶ್ರೇಷ್ಠ ಮತ್ತು ಪ್ರತಿಭಾವಂತ ನಟರಲ್ಲಿ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಗ್ರಗಣ್ಯರು. ಅತ್ಯುತ್ತಮ ನಟನೆಯಷ್ಟೇ ಅಲ್ಲದೆ, ತಮ್ಮ ಅದ್ಭುತ ವ್ಯಕ್ತಿತ್ವ ಹಾಗೂ ಸತ್ಸಂಪ್ರದಾಯದ ಗುಣಗಳಿಂದ ಅವರು ಇಂದಿಗೂ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರು ಹಾಕಿಕೊಟ್ಟ ದಾರಿಯಲ್ಲೇ ಇಂದಿನ ಅನೇಕ ಸ್ಟಾರ್ ನಟರು ಹೆಜ್ಜೆ ಹಾಕುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಅದರಲ್ಲೂ ನಟ ಕಿಚ್ಚ ಸುದೀಪ್ ಅವರು ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ವಿಷ್ಣುವರ್ಧನ್ ಕೇವಲ ಕನ್ನಡದಲ್ಲಷ್ಟೇ ಅಲ್ಲದೆ, ಇಂಗ್ಲಿಷ್ ಭಾಷೆಯ ಮೇಲೂ ಅತ್ಯುತ್ತಮ ಹಿಡಿತ ಹೊಂದಿದ್ದರು.

ಡಾ. ರಾಜ್‌ಕುಮಾರ್ ಕುರಿತು ವಿಷ್ಣುವರ್ಧನ್ ಮೆಚ್ಚುಘಳಿಗೆ

ಒಮ್ಮೆ ಸಂದರ್ಶನವೊಂದರಲ್ಲಿ ತಮ್ಮ ಹಾಗೂ ಅಣ್ಣಾವ್ರ ನಡುವಿನ ಬಾಂಧವ್ಯದ ಬಗ್ಗೆ ವಿಷ್ಣುವರ್ಧನ್ ಅವರು ಇಂಗ್ಲಿಷ್‌ನಲ್ಲಿ ಸುಂದರವಾಗಿ ವಿವರಿಸಿದ್ದರು:

‘ನಾನು ಮೈಸೂರಿನಲ್ಲಿ ಶೂಟಿಂಗ್‌ನಲ್ಲಿದ್ದಾಗ ಡಾ. ರಾಜ್‌ಕುಮಾರ್ ಅವರು ‘ಯಜಮಾನ’ ಸಿನಿಮಾ ವೀಕ್ಷಿಸಿದ್ದರು. ಚಿತ್ರ ನೋಡಿ ಅವರು ದಂಗಾಗಿ ಹೋಗಿದ್ದರು. ಅಲ್ಲದೆ, ಕೂಡಲೇ ನನ್ನನ್ನು ಭೇಟಿ ಮಾಡಬೇಕು ಎಂದು ಬಯಸಿದ್ದರು’ ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದರು.

ಮುಂದುವರಿದು ಮಾತನಾಡುತ್ತಾ, ‘ಬಸವಣ್ಣ, ಕನಕದಾಸರು, ಪುರಂದರದಾಸರು ಮತ್ತು ಕೃಷ್ಣದೇವರಾಯರಂತಹ ಮಹಾನ್ ವ್ಯಕ್ತಿಗಳನ್ನು ನಾವು ಕಣ್ಣಾರೆ ಕಂಡಿಲ್ಲ. ಆದರೆ, ಡಾ. ರಾಜ್‌ಕುಮಾರ್ ಅವರು ತೆರೆಯ ಮೇಲೆ ಇಂತಹ ಐತಿಹಾಸಿಕ ಹಾಗೂ ಪೌರಾಣಿಕ ಪಾತ್ರಗಳನ್ನು ಜೀವಂತಗೊಳಿಸುವ ಮೂಲಕ ಎಲ್ಲರ ಗಮನ ಸೆಳೆದರು. ಹಲವು ದಶಕಗಳ ಕಾಲ ತಮ್ಮ ಜನಪ್ರಿಯತೆಯನ್ನು ಅಚಲವಾಗಿ ಉಳಿಸಿಕೊಂಡರು’ ಎಂದು ರಾಜ್‌ಕುಮಾರ್ ಅವರ ವ್ಯಕ್ತಿತ್ವ ಹಾಗೂ ಕಲಾ ಸೇವೆಯನ್ನು ಮುಕ್ತಕಂಠದಿಂದ ಕೊಂಡಾಡಿದ್ದರು. ಈ ಇಬ್ಬರು ದಿಗ್ಗಜರ ಮಧ್ಯೆ ಅದೆಂಥ ಅಪರೂಪದ ಹಾಗೂ ಅನ್ಯೂನ್ಯ ಸಂಬಂಧವಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

YouTube video player

ಶಿಕ್ಷಣ ಮತ್ತು ವೈಯಕ್ತಿಕ ಹಿನ್ನೆಲೆ

ಕಲಾವಿದರಾಗುವ ಮುನ್ನ ವಿಷ್ಣುವರ್ಧನ್ ಅವರು ಬೆಂಗಳೂರಿನ ಪ್ರತಿಷ್ಠಿತ ನ್ಯಾಷನಲ್ ಕಾಲೇಜಿನಲ್ಲಿ ತಮ್ಮ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ವಿದ್ಯಾರ್ಥಿ ಜೀವನ ಮುಗಿಸಿ ಚಿತ್ರರಂಗಕ್ಕೆ ಕಾಲಿಟ್ಟ ಅವರು, ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದರು ಮತ್ತು ಸಾಲುಸಾಲು ಬ್ಲಾಕ್‌ಬಸ್ಟರ್ ಹಿಟ್ ಚಿತ್ರಗಳನ್ನು ನೀಡುವ ಮೂಲಕ ಅಸಂಖ್ಯಾತ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದೆ ಉಳಿದರು.

ಊಹಾಪೋಹಗಳಿಗೆ ತೆರೆ

ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ನಡುವೆ ವೈಮನಸ್ಸು ಅಥವಾ ಮನಸ್ತಾಪವಿದೆ ಎಂಬ ವಾದಗಳು ಕಾಲಕಾಲಕ್ಕೆ ವಲಯಗಳಲ್ಲಿ ಕೇಳಿಬರುತ್ತಿದ್ದರೂ, ಆ ಮಾತುಗಳೆಲ್ಲವೂ ಕೇವಲ ಗಾಳಿಸುದ್ದಿಗಳು ಎಂಬುದನ್ನು ಇಬ್ಬರೂ ದಿಗ್ಗಜರು ಅನೇಕ ಸಂದರ್ಭಗಳಲ್ಲಿ ಸಾಬೀತುಪಡಿಸಿದ್ದಾರೆ. ಹಲವು ಸಾರ್ವಜನಿಕ ವೇದಿಕೆಗಳಲ್ಲಿ ಇಬ್ಬರೂ ಪರಸ್ಪರರನ್ನು ಮುಕ್ತವಾಗಿ ಹೊಗಳಿಕೊಂಡಿರುವುದೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಕನ್ನಡ ಚಿತ್ರರಂಗದ ಈ ಇಬ್ಬರು ಮೇರು ನಟರ ಬಾಂಧವ್ಯ ಇಂದಿನ ತಲೆಮಾರಿನವರಿಗೂ ಒಂದು ಸುಂದರ ಸಂದೇಶವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us