ರಾತ್ರಿ ಒಂದೇ ರೂಮಿನಲ್ಲಿದ್ದ ಸಂಜನಾ-ರಾಗಿಣಿ ನಡುವೆ ಕಿರಿಕ್!

ರಾತ್ರಿ ಒಂದೇ ರೂಮಿನಲ್ಲಿದ್ದ ಸಂಜನಾ-ರಾಗಿಣಿ ನಡುವೆ ಕಿರಿಕ್!
ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ

[lazy-load-videos-and-sticky-control id=”h1xRFcKuuKM”]

ಬೆಂಗಳೂರು: ಸ್ಯಾಂಡಲ್‌ವುಡ್​ನಲ್ಲಿ ಡ್ರಗ್ಸ್ ಜಾಲದ ನಂಟು ಪ್ರಕರಣದ ಸಂಬಂಧ ಮಡಿವಾಳದಲ್ಲಿರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಆರೋಪಿಗಳಾದ ಸಂಜನಾ ಮತ್ತು ರಾಗಿಣಿಗೆ ವಾಸ್ತವ್ಯ ಕಲ್ಪಿಸಲಾಗಿದೆ. ಇಬ್ಬರ ಮಧ್ಯೆ ಪುರಾತನ ಹಗೆತನ ಇದೆ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ.

ಇನ್ನು ನಿನ್ನೆ ಇಬ್ಬರೂ ನಟಿಮಣಿಯರು ಒಂದೇ ರೂಮಿನಲ್ಲಿರಬೇಕಾದ ಜರೂರತ್ತು ಎದುರಾಗಿದೆ. ಆ ವೇಳೆ ರೂಮ್‌ನಲ್ಲಿ ಲೈಟ್ ಆಫ್ ಮಾಡುವ ವಿಚಾರಕ್ಕೆ ಇಬ್ಬರೂ ಕಿರಿಕ್ ಮಾಡಿಕೊಂಡಿದ್ದಾರೆ. ನಿನ್ನೆ ತಡರಾತ್ರಿ ತನಗೆ ಎದೆನೋವು ಎಂದು ನಟಿ ರಾಗಿಣಿ ಹೇಳಿಕೊಂಡಿದ್ದಾರೆ. ತಕ್ಷಣವೇ ಸ್ಥಳದಲ್ಲಿದ್ದ ವೈದ್ಯರಿಂದ ನಟಿ ರಾಗಿಣಿಗೆ ಚಿಕಿತ್ಸೆ ಕಲ್ಪಿಸಲಾಗಿದೆ. ಬಳಿಕ ಇಬ್ರೂ ಕೊಠಡಿಯಲ್ಲೇ ಪುಸ್ತಕ ಓದುತ್ತಾ ಕುಳಿತಿದ್ರು.

ಒಬ್ಬರಿಗೆ ನಿದ್ದೆ ಬಂದ ಹಿನ್ನೆಲೆ ಲೈಟ್ ಆಫ್ ಮಾಡಿದ್ದರು. ಲೈಟ್ ಆಫ್ ಮಾಡಿದ್ದಕ್ಕೆ ಮತ್ತೊಬ್ಬರು ಕ್ಯಾತೆ ತೆಗೆದಿದ್ದಾರೆ. ಅಗ ಇಬ್ಬರ ನಡುವೆ ವಾಕ್ಸಮರ ನಡೆದಿದೆ. ರಾಗಿಣಿ ಮತ್ತು ಸಂಜನಾ ಕೊಠಡಿಯೊಳಗೆ ಮಹಿಳಾ ಪೊಲೀಸ್ ಸಿಬ್ಬಂದಿಯೂ ವಾಸ್ತವ್ಯ ಹೂಡಿದ್ದಾರೆ. ಇಬ್ಬರ ನಡುವೆ ಒಬ್ಬರು ಲೇಡಿ ಇನ್ಸ್​ಪೆಕ್ಟರ್​ ಮತ್ತು ಕಾನ್ಸ್​ಟೇಬಲ್​ ಸಹ ಇದ್ದರು.

Click on your DTH Provider to Add TV9 Kannada