ಫ್ಯಾಷನ್ ಲೋಕದ ನಯೀಜ್​ಗೆ ಸಂಜನಾ ಪರಿಚಯ ಹೇಗಾಯ್ತು?

ಫ್ಯಾಷನ್ ಲೋಕದ ನಯೀಜ್​ಗೆ ಸಂಜನಾ ಪರಿಚಯ ಹೇಗಾಯ್ತು?

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಮಾದಕ ಲೋಕದಲ್ಲಿ ನಶೆಯ ನಂಟಿದೆ ಎಂಬ ಪ್ರಕರಣದಲ್ಲಿ ಅರೆಸ್ಟ್ ಆದ 13ನೇ ಆರೋಪಿ ಜೊತೆ 14ನೇ ಆರೋಪಿಯಾದ ನಟಿ ಸಂಜನಾ ಪಾರ್ಟನರ್ ಶಿಪ್​ನಲ್ಲಿ ವ್ಯವಹಾರ ನಡೆಸಿತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.

ನಯೀಜ್ ಕೇರಳ ಮೂಲವ ವ್ಯಕ್ತಿ.‌ ನಟಿ ಸಂಜನಾ ಮಲೆಯಾಳಂ ಸಿನಿಮಾದಲ್ಲಿ ನಟಿಸಿದ್ದರು. ಈ ವೇಳೆ ಸಂಜನಾಗೆ ನಯೀಜ್ ಪರಿಚಯವವಾಗಿತ್ತು. ಪರಿಚಯದ ನಂತ್ರ ಬೆಂಗಳೂರಿನಲ್ಲಿ ಇವರಿಬ್ಬರು ಹೆಚ್ಚು ಬಾರಿ ಭೇಟಿಯಾಗಿದ್ರು. ನಯೀಜ್ ತಾನು ಸಂಜನಾಗೆ ಡ್ರಗ್ಸ್ ತರಿಸಿ ನೀಡುತಿದ್ದೆ ಎಂದು ಹೇಳಿಕೆ ನೀಡಿದ್ದ‌. ಇದರಿಂದ ಸಂಜನಾ ಸಿಸಿಬಿ ಬಲೆಗೆ ಬಿದ್ದಿದ್ದಾಳೆ.

ಸಂಜನಾಗೆ ಡ್ರಗ್ಸ್ ತರಿಸಿಕೊಡ್ತಿದ್ದ ನಯೀಜ್:
ನಯೀಜ್ ಫ್ಯಾಷನ್ ಲೋಕದಲ್ಲಿ ಚಿರಪರಿಚಿತ. ಫ್ಯಾಷನ್ ಶೋಗಳಲ್ಲಿ ಜಡ್ಜ್ ಅಗಿ ಭಾಗಿಯಾಗುತ್ತಿದ್ದ. ಕೆಲವೊಮ್ಮೆ ಸಂಜನಾಗೂ ಫ್ಯಾಷನ್ ಶೋಗೆ ಕರೆಸಿಕೊಳ್ಳುತ್ತಿದ್ದ. ಶೋ ನಂತರ ಇವರಿಬ್ಬರು ಆಫ್ಟರ್ ಪಾರ್ಟಿಯಲ್ಲಿ ಭಾಗಿಯಾಗುತಿದ್ರು. ಪಾರ್ಟಿ ಸಮಯದಲ್ಲಿ ಡ್ರಗ್ಸ್ ಸೇವನೆ ಮಾಡಿದ್ದ ಬಗ್ಗೆ ಕೆಲ ಸಾಕ್ಷಿಗಳು ಲಭ್ಯವಾಗಿವೆ.

ನಯೀಜ್ ಫ್ಯಾಷನ್ ಮತ್ತು ಫೋಟೋಗ್ರಫಿ ಸಂಬಂಧಿಸಿ ಕಂಪನಿ ತರದಿದ್ದ. ಈ ವ್ಯವಹಾರದಲ್ಲಿ ನಯೀಜ್ ಮತ್ತು ಸಂಜನಾ ಪಾರ್ಟನರ್ಸ್ ಅಗಿದ್ದರು. ಈ ಎಲ್ಲಾ ವಿಚಾರಗಳನ್ನು ಪೃಥ್ವಿ ಶೆಟ್ಟಿ ಬಾಯಿ ಬಿಟ್ಟಿದ್ದ. ಬಳಿಕ ಸಿಸಿಬಿ ನಯೀಜ್​ನನ್ನು ಅರೆಸ್ಟ್ ಮಾಡಿತ್ತು. ನಯೀಜ್ ಅರೆಸ್ಟ್ ಬಳಿಕ ಸಂಜನಾ ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿರೋದು ಸಿಸಿಬಿಗೆ ಪಕ್ಕ ಆಗಿತ್ತು.

Click on your DTH Provider to Add TV9 Kannada