ಸದ್ಯ ಸ್ಯಾಂಡಲ್ವುಡ್ನಲ್ಲಿ ವಿಚ್ಛೇದನಗಳ ಮೇಲೆ ವಿಚ್ಛೇದನ ನಡೆಯುತ್ತಿದೆ. ಮೊದಲು ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ ವಿಚ್ಛೇದನ ಪಡೆಯೋ ಘೋಷಣೆ ಮಾಡಿದರು. ಆ ಬಳಿಕ ಯುವ ಹಾಗೂ ಶ್ರೀದೇವಿ ವಿಚ್ಛೇದನ ವಿಚಾರ ಚರ್ಚೆ ಆಯಿತು. ಈಗ ದುನಿಯಾ ವಿಜಯ್ ಹಾಗೂ ನಾಗರತ್ನ ವಿಚ್ಛೇದನ ವಿಚಾರ ಚರ್ಚೆಗೆ ಬಂದಿದೆ. ಇಂದು (ಜೂನ್ 13) ಈ ಪ್ರಕರಣದಲ್ಲಿ ತೀರ್ಪು ಹೊರಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ದುನಿಯಾ ವಿಜಯ್ ಹಾಗೂ ನಾಗರತ್ನ ಮಧ್ಯೆ ವೈಮನಸ್ಸು ಮೂಡಿತ್ತು. ಹೀಗಾಗಿ 2018ರಲ್ಲಿ ವಿಜಯ್ ಅವರು ವಿಚ್ಛೇದನ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು. ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ವಿಜಯ್ ರೆಡಿ ಇದ್ದಾರೆ. ಇಷ್ಟೇ ಅಲ್ಲ ಪತ್ನಿಗೆ ಜೀವನಾಂಶ ಕೂಡ ಕೊಡಲು ರೆಡಿ ಇದ್ದಾರೆ. ಆದರೆ, ಕೋರ್ಟ್ಗೆ ಹೋದಾಗಲೆಲ್ಲ ನಾಗರತ್ನ ಅವರು ಪತಿಯನ್ನು ಬಿಡಲು ಒಪ್ಪಿಲ್ಲ. ಹೀಗಾಗಿ ಪ್ರಕರಣ ಮುಂದೂಡುತ್ತಲೇ ಬರುತ್ತೊದೆ. ಇಂದು ಪ್ರಕರಣದ ತೀರ್ಪು ಹೊರ ಬರಲಿದೆ.
ಇದನ್ನೂ ಓದಿ: ಚಂದನ್ ಶೆಟ್ಟಿ, ವಿಚ್ಛೇದಿತ ಪತ್ನಿ ನಿವೇದಿತಾಗೆ ಜೀವನಾಂಶ ನೀಡಿದರಾ?
ಬೆಂಗಳೂರಿನ ಶಾಂತಿನಗರ ಫ್ಯಾಮಿಲಿ ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆದಿದೆ. ವಾದ-ವಿವಾದವನ್ನು ಆಲಿಸಲಾಗಿದೆ. 3 ಘಂಟೆ ನಂತರ ಅರ್ಜಿ ವಿಚಾರಣೆ ನಡೆಯೋ ಸಾಧ್ಯತೆ ಇದೆ ಎನ್ನಲಾಗಿದೆ. ದುನಿಯಾ ವಿಜಯ್ ಅವರು ಸದ್ಯ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ ಅವರ ಪರ ವಕೀಲರು ಮಾತ್ರ ಕೋರ್ಟ್ಗೆ ಹಾಜರಾಗುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.