‘ಭೀಮ’ ರಿಲೀಸ್ ದಿನಾಂಕ ಘೋಷಿಸಿದ ದುನಿಯಾ ವಿಜಯ್; ಸ್ಟಾರ್ ಹೀರೋ ಸಿನಿಮಾ ಜೊತೆ ಕ್ಲ್ಯಾಶ್?

ವಿಜಯ್ ಅವರು ‘ಸಲಗ’ ಸಿನಿಮಾ ನಿರ್ದೇಶನ ಮಾಡಿ ನಟಿಸಿದ್ದರು. ಇದು ಅವರ ನಿರ್ದೇಶನದ ಮೊದಲ ಸಿನಿಮಾ. ಮೊದಲ ಚಿತ್ರದಲ್ಲೇ ಅವರಿಗೆ ಗೆಲುವಿನ ರುಚಿ ಸಿಕ್ಕಿತು. ಈ ಚಿತ್ರ ರೌಡಿಸಂ ಕಥೆಯನ್ನು ಹೊಂದಿತ್ತು. ಈಗ ಅದೇ ರೀತಿಯ ಥೀಮ್ ಇಟ್ಟುಕೊಂಡು ‘ಭೀಮ’ ಸಿನಿಮಾ ನಿರ್ದೇಶನ ಮಾಡಿದ್ದಾರೆ ವಿಜಯ್. ಈ ಚಿತ್ರವನ್ನು ಆಗಸ್ಟ್ 9ರಂದು ರಿಲೀಸ್ ಮಾಡೋ ಘೋಷಣೆ ಮಾಡಿದ್ದಾರೆ.

‘ಭೀಮ’ ರಿಲೀಸ್ ದಿನಾಂಕ ಘೋಷಿಸಿದ ದುನಿಯಾ ವಿಜಯ್; ಸ್ಟಾರ್ ಹೀರೋ ಸಿನಿಮಾ ಜೊತೆ ಕ್ಲ್ಯಾಶ್?

Updated on: Jun 21, 2024 | 10:52 AM

‘ದುನಿಯಾ’ ವಿಜಯ್ (Duniya Vijay) ಅವರು ‘ಭೀಮ’ ಸಿನಿಮಾದಲ್ಲಿ ನಟಿಸಿದ್ದಾರೆ. ಜೊತೆಗೆ ಇದರ ನಿರ್ದೇಶನದ ಜವಾಬ್ದಾರಿ ಕೂಡ ಅವರದ್ದೇ. ಈ ಚಿತ್ರ ಯಾವಾಗ ರಿಲೀಸ್ ಆಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿತ್ತು. ಇದಕ್ಕೆ ದುನಿಯಾ ವಿಜಯ್ ಅವರೇ ಉತ್ತರ ಕೊಟ್ಟಿದ್ದಾರೆ. ಈ ಸಿನಿಮಾ ಆಗಸ್ಟ್ 9ರಂದು ರಿಲೀಸ್ ಆಗಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಮಧ್ಯೆ ‘ಭೀಮ’ ಸಿನಿಮಾ ಕನ್ನಡದ ಸ್ಟಾರ್ ಹೀರೋ ಸಿನಿಮಾ ಜೊತೆ ಕ್ಲ್ಯಾಶ್ ಆಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ವಿಜಯ್ ಅವರು ‘ಸಲಗ’ ಸಿನಿಮಾ ನಿರ್ದೇಶನ ಮಾಡಿ ನಟಿಸಿದ್ದರು. ಇದು ಅವರ ನಿರ್ದೇಶನದ ಮೊದಲ ಸಿನಿಮಾ. ಮೊದಲ ಚಿತ್ರದಲ್ಲೇ ಅವರಿಗೆ ಗೆಲುವಿನ ರುಚಿ ಸಿಕ್ಕಿತು. ಈ ಚಿತ್ರ ರೌಡಿಸಂ ಕಥೆಯನ್ನು ಹೊಂದಿತ್ತು. ಈಗ ಅದೇ ರೀತಿಯ ಥೀಮ್ ಇಟ್ಟುಕೊಂಡು ‘ಭೀಮ’ ಸಿನಿಮಾ ನಿರ್ದೇಶನ ಮಾಡಿದ್ದಾರೆ ವಿಜಯ್. ಈ ಚಿತ್ರವನ್ನು ಆಗಸ್ಟ್ 9ರಂದು ರಿಲೀಸ್ ಮಾಡೋ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ನಟ ದುನಿಯಾ ವಿಜಯ್​ಗೆ ಸಿಕ್ಕಿಲ್ಲ ವಿಚ್ಛೇದನ; ಅರ್ಜಿ ವಜಾಗೊಳಿಸಿದ ಫ್ಯಾಮಿಲಿ ಕೋರ್ಟ್

‘ಭೀಮ’ ಸಿನಿಮಾದಲ್ಲಿ ಅಶ್ವಿನಿ ಅಂಬರೀಷ್, ಕಾಕ್ರೋಚ್ ಸುಧಿ, ರಂಗಾಯಣ ರಘು, ಅಚ್ಯುತ್ ಕುಮಾರ್ ಮೊದಲಾದವರು ನಟಿಸಿದ್ದಾರೆ. ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ, ಶಿವ ಕುಮಾರ್, ಛಾಯಾಗ್ರಹಣ, ಮಾಸ್ತಿ ಸಂಭಾಷಣೆ, ಧನು ಕುಮಾರ್ ಕೋರಿಯೋಗ್ರಫಿ, ದೀಪು ಕುಮಾರ್ ಸಂಕಲನ ಚಿತ್ರಕ್ಕೆ ಇದೆ.

ಕ್ಲ್ಯಾಶ್?

ಈ ಮೊದಲು ‘ಸಲಗ’ ಹಾಗೂ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಚಿತ್ರ ರಿಲೀಸ್ ಆಗಿತ್ತು. ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಸುದೀಪ್ ಅವರು, ‘ಮ್ಯಾಕ್ಸ್’ ಚಿತ್ರ ಆಗಸ್ಟ್​ನಲ್ಲಿ ರಿಲೀಸ್ ಆಗಲಿದೆ ಎಂದಿದ್ದರು. ಹೀಗಾಗಿ, ಮತ್ತೊಮ್ಮೆ ದುನಿಯಾ ವಿಜಯ್ ಹಾಗೂ ಸುದೀಪ್ ಸಿನಿಮಾ ಮುಖಾಮುಖಿ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.