ಪವಿತ್ರಾ ಗೌಡಗೆ ಜೈಲಲ್ಲೂ ಸಿಕ್ತು ‘D’ ಬ್ಯಾರಾಕ್; ನಿದ್ರೆ ಮಾಡದೆ ಜೈಲಿನಲ್ಲಿ ಚಡಪಡಿಕೆ

ದರ್ಶನ್​ಗೆ ಡಿ ಬಾಸ್ ಎಂದು ಕರೆಲಾಗುತ್ತದೆ. ಪವಿತ್ರಾ ಹಾಗೂ ದರ್ಶನ್ ಮಧ್ಯೆ ಒಳ್ಳೆಯ ಗೆಳೆತನ ಇದೆ. ಕಾಕತಾಳೀಯವೋ ಎಂಬಂತೆ ಜೈಲಲ್ಲಿ ಪವಿತ್ರಾಗೆ ಡಿ ಬ್ಯಾರಕ್ ಸಿಕ್ಕಿದೆ. ಉಳಿದ ಆರೋಪಿಗಳು ಜೈಲಿನ ಕ್ವಾರೆಂಟೈನ್ ಬ್ಯಾರಕ್​ನಲ್ಲಿ ಇಡಲಾಗಿದೆ.

Follow us
|

Updated on: Jun 21, 2024 | 9:45 AM

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ (Darshan), ಅವರ ಗೆಳೆತಿ ಪವಿತ್ರಾ ಗೌಡ ಸೇರಿ ಹಲವು ಮಂದಿ ಅರೆಸ್ಟ್ ಆಗಿದ್ದಾರೆ. ಈ ಪೈಕಿ ದರ್ಶನ್, ಧನರಾಜ್, ವಿನಯ್, ಪ್ರದೋಶ್​ನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಉಳಿದವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಹೀಗಾಗಿ ಪವಿತ್ರಾ ಗೌಡ ಸೇರಿ ಅನೇಕರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಅವರು ಜೈಲಲ್ಲಿ ಒಂದು ದಿನ ಕಳೆದಿದ್ದಾರೆ.

ದರ್ಶನ್​ಗೆ ಡಿ ಬಾಸ್ ಎಂದು ಕರೆಲಾಗುತ್ತದೆ. ಪವಿತ್ರಾ ಹಾಗೂ ದರ್ಶನ್ ಮಧ್ಯೆ ಒಳ್ಳೆಯ ಗೆಳೆತನ ಇದೆ. ಕಾಕತಾಳೀಯವೋ ಎಂಬಂತೆ ಜೈಲಲ್ಲಿ ಪವಿತ್ರಾಗೆ ಡಿ ಬ್ಯಾರಕ್ ಸಿಕ್ಕಿದೆ. ಉಳಿದ ಆರೋಪಿಗಳು ಜೈಲಿನ ಕ್ವಾರೆಂಟೈನ್ ಬ್ಯಾರಕ್​ನಲ್ಲಿ ಇಡಲಾಗಿದೆ.

ಗುರುವಾರ (ಜೂನ್ 20) ಜೈಲಿಗೆ ಆರೋಪಿಗಳನ್ನು ತಡವಾಗಿ ಕರೆತರಲಾಗಿದೆ. ಹೀಗಾಗಿ, ಇಂದು ಎಲ್ಲಾ ಆರೋಪಿಗಳಿಗೆ ವಿಚಾರಣಾಧೀನ ಕೈದಿ ನಂಬರ್ ನೀಡಲಾಗುತ್ತದೆ. ಹತ್ತು ಗಂಟೆಯ ಬಳಿಕ ಜೈಲಾಧಿಕಾರಿಗಳು ಈ ಸಂಖ್ಯೆಯನ್ನು ನೀಡಲಿದ್ದಾರೆ.

ಪವಿತ್ರಾಗೆ ರಾತ್ರಿವೇಳೆ ನಿದ್ದೆ ಬಂದಿಲ್ಲವಂತೆ. ರಾತ್ರಿ 11 ಗಂಟೆಯ ಸುಮಾರಿಗೆ ಪವಿತ್ರಾ ನಿದ್ರೆಗೆ ಜಾರಿದ್ದರು. ಸರಿಯಾಗಿ ನಿದ್ರೆ ಮಾಡದೆ ಆಗಾಗ ಎದ್ದು ಕುಳಿತು ಪವಿತ್ರಾ ಗೌಡ ಯೋಚನೆ ಮಾಡಿದ್ದಾರೆ. ಹೊರಗೆ ಅವರು ಹೈಫೈ ಜೀವನ ನಡೆಸುತ್ತಿದ್ದರು. ನಿತ್ಯ ಹಾಯಾದ ಬೆಡ್​ನಲ್ಲಿ ಮಲಗುತ್ತಿದ್ದರು. ಆದರೆ, ಈಗ ಜೀವನ ಹಾಗಿಲ್ಲ.

ಇದನ್ನೂ ಓದಿ: ದರ್ಶನ್ ಜಾತಕದಲ್ಲಿನ ಸಮಸ್ಯೆ ಹದಿಮೂರು ವರ್ಷದ ಹಿಂದೆಯೇ ಎಚ್ಚರಿಸಲಾಗಿತ್ತೆ?

ಜೈಲಿನಲ್ಲಿದ್ದರೂ ಫಿಟ್ನೆಸ್ ಬಗ್ಗೆ ಅವರು ಗಮನ ಹರಿಸುತ್ತಿದ್ದಾರೆ. ಮುಂಜಾನೆ 5 ಗಂಟೆಗೆ ಎದ್ದು ಜೈಲಿನ ಬ್ಯಾರಕ್​ನಲ್ಲಿ ವಾಕಿಂಗ್ ಮಾಡಿದ್ದಾರೆ. ಆ ಬಳಿಕ ಜೈಲಿನ ಸಿಬ್ಬಂದಿ ನೀಡಿದ ಕಾಫಿಯನ್ನು ಪವಿತ್ರಾ ಹೀರಿದ್ದಾರೆ. ಆ ಬಳಿಕ ಅವರು ಸುದ್ದಿ ಪತ್ರಿಕೆ ಓದಿದ್ದಾರೆ. ಜೈಲಿನ ಮೆನುವಿನಂತೆ ಕೈದಿಗಳಿಗೆ ಇಂದು ತಿಂಡಿಗೆ ಉಪ್ಪಿಟ್ಟು ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
‘ದರ್ಶನ್​ ಜೈಲಿಗೆ ಹೋದಮೇಲೆ ನನ್ನ ಮಗಳು ಸರಿಯಾಗಿ ಊಟ ಮಾಡುತ್ತಿಲ್ಲ’

ಶ್ರೀಗಳು ಸ್ಥಾನ ಬಿಟ್ಟುಕೊಡಿ ಅಂದಿದ್ದು ಸಿದ್ದರಾಮಯ್ಯರನ್ನು ವಿಚಲಿತರಾಗಿಸಿದೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲೆಗ, ಕಾಲೇಜುಗಳಿಗೆ ರಜೆ ಘೋಷಣೆ

ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?

ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ

ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?

ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!

ಮಳೆಯಿಂದಾಗಿ ಯೂನಿಯನ್ ಬ್ಯಾಂಕ್ ಎಸಿಯೊಳಗೆ ಬಂದು ಅವಿತು ಕುಳಿತ ಮರಿ ಹೆಬ್ಬಾವು

ಶ್ರೀಗಳು ಹೇಳಿದ ಮಾತ್ರಕ್ಕೆ ಸಿಎಂ ಬದಲಾವಣೆ ಆಗಲ್ಲ: ಶಾಮನೂರು ಶಿವಶಂಕರಪ್ಪ

ಮಂಗಳೂರು: ಜಲದಿಗ್ಭಂದನಕ್ಕೊಳಗಾದ ಮನೆ, ಮನೆಯಲ್ಲಿ ಒಂಟಿ ಮಹಿಳೆ ವಾಸ!