ದರ್ಶನ್ ಸೇರಿದಂತೆ 4 ಆರೋಪಿಗನ್ನು ಮಾತ್ರ ಪೊಲೀಸ್ ಕಸ್ಟಡಿಗೆ ನೀಡಲು ಇವೆ ಪ್ರಮುಖ ಕಾರಣ
ಜೂನ್ 11ರಂದು ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳನ್ನು ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಬಂಧಿಸಲಾಗಿತ್ತು ದರ್ಶನ್ ಸೇರಿದಂತೆ ನಾಲ್ವರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಪೊಲೀಸರು ಆದೇಶ ಹೊರಡಿಸಿದ್ದಾರೆ. ಇದಕ್ಕೆ ಕಾರಣ ಏನು ಎನ್ನುವ ಬಗ್ಗೆ ಇಲ್ಲಿದೆ ವಿವರ.
ನಟ ದರ್ಶನ್, ಪವಿತ್ರಾ ಗೌಡ (Pavithra Gowda) ಸೇರಿದಂತೆ ಹಲವು ಮಂದಿ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿದ್ದಾರೆ. ಎಲ್ಲರೂ ಎರಡು ಬಾರಿ ಪೊಲೀಸ್ ಕಸ್ಟಡಿ ಎದುರಿಸಿದ್ದರು. ಈಗ ಮೂರನೇ ಬಾರಿಗೆ (ಜೂನ್ 20) ಇವರನ್ನು ಕೋರ್ಟ್ ಎದುರು ಹಾಜರುಪಡಿಸಲಾಗಿದ್ದು, ದರ್ಶನ್, ಧನರಾಜ್, ವಿನಯ್, ಪ್ರದೋಶ್ನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಉಳಿದವರನ್ನು ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ. ಅಷ್ಟಕ್ಕೂ ಈ ನಾಲ್ವರನ್ನೂ ಮಾತ್ರ ಕಸ್ಟಡಿಗೆ ಕೇಳಲು ಪೊಲೀಸರು ಕೊಟ್ಟ ಕಾರಣಗಳು ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ
- ಈ ನಾಲ್ವರು ಆರೋಪಿಗಳು ತನಿಖೆಗೆ ಸರಿಯಾಗಿ ಸ್ಪಂದಿಸದೆ, ಕೆಲ ವಿಚಾರಗಳನ್ನು ಮರೆಮಾಚುತ್ತಿದ್ದಾರೆ.
- ದರ್ಶನ್ ಮನೆಯಿಂದ ವಶಪಡಿಸಿಕೊಂಡ 37.40 ಲಕ್ಷ, ಪತ್ನಿ ಮನೆಯಿಂದ ವಶಪಡಿಸಿಕೊಂಡ 3 ಲಕ್ಷ ರೂಪಾಯಿ ಹಣದ ಮೂಲದ ಬಗ್ಗೆ ತನಿಖೆ ನಡೆಸಬೇಕಿದೆ.
- ಕೊಲೆ ನಡೆದ ನಂತರ ದರ್ಶನ್ ಕೆಲವು ವ್ಯಕ್ತಿಗಳನ್ನ ಸಂಪರ್ಕಿಸಿದ್ದು, ಇದರ ಉದ್ದೇಶ ಮತ್ತು ಕಾರಣವನ್ನು ದರ್ಶನ್ ಉಪಸ್ಥಿತಿಯಲ್ಲೇ ವಿಚಾರಿಸಬೇಕಿದೆ. (ಸಂಪರ್ಕಿಸಿದ್ದವರನ್ನು ಕರೆಸಿ ದರ್ಶನ್ ಜೊತೆ ಮುಖಾಮುಖಿ ಕೂರಿಸಿ ವಿಚಾರಣೆ)
- ಆರೋಪಿ ಪ್ರದೋಶ್ ಸಾಕ್ಷ್ಯ ನಾಶದಲ್ಲಿ ಮುಖ್ಯಪಾತ್ರ ವಹಿಸಿದ್ದಾರೆ. ಆದರೆ ತನಿಖೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ಮತ್ತಷ್ಟು ವಿಚಾರಣೆ ಮಾಡಬೇಕಿದೆ.
- ಆರೋಪಿ ಧನರಾಜ್ ಎಲೆಕ್ಟ್ರಿಕ್ ಚಾರ್ಜ್ ಟಾರ್ಚ್ ಖರೀದಿ ಮಾಡಿದ್ದರು. ಇದ ಮೂಲದ ಬಗ್ಗೆ ತಿಳಿಸುತ್ತಿಲ್ಲ. ಬೇರೆ ವ್ಯಕ್ತಿಗಳ ಜೊತೆ ಶೆಡ್ಗೆ ಬಂದು ಹೋದ ಬಗ್ಗೆ ವಿಚಾರಣೆ ನಡೆಸಬೇಕಿದೆ.
- ಆರೋಪಿ ವಿನಯ್ ಮೊಬೈಲ್ನಲ್ಲಿ ಮುಖ್ಯವಾದ ಸಾಕ್ಷಿ ಸಿಕ್ಕಿದ್ದು, ಅದನ್ನು ಕಳುಹಿಸಿದ್ದವರು ಯಾರು ಎಂದು ವಿಚಾರಣೆ ನಡೆಸಬೇಕಿದೆ
- ಕೊಲೆ ನಡೆದ ಶೆಡ್ನಲ್ಲಿದ್ದ ಕೆಲಗಾರರಿಗೆ ಕೆಲವರು ಸಾಕ್ಷಿ ಹೇಳದಂತೆ ಆಮಿಷ ಒಡ್ಡಿದ್ದಾರೆ. ಆ ಅನಾಮಿಕ ವ್ಯಕ್ತಿಗಳಿಗೂ ಆರೋಪಿಗಳಿಗೂ ಇರೋ ಸಂಬಂಧದ ಬಗ್ಗೆ ವಿಚಾರಣೆ ನಡೆಸಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.