ಎಂಗೇಜ್ ಆದ ನಟ ರಾಕೇಶ್ ಅಡಿಗ, ಯುವತಿ ಯಾರು?
ಮಾಜಿ ಬಿಗ್ಬಾಸ್ ಸ್ಪರ್ಧಿ ಮತ್ತು ನಟ ರಾಕೇಶ್ ಅಡಿಗ ಎಂಗೇಜ್ ಆಗಿದ್ದಾರೆ. ರಾಕೇಶ್ ಅಡಿಗ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಸಿಂಗಲ್ ಆಗಿದ್ದ ರಾಕೇಶ್ ಅಡಿಗ ಈಗ ಜೋಡಿ ಆಗಿದ್ದಾರೆ. ರಾಕೇಶ್ ಅವರು ಮಾಧುರಿ ಸಿಂಗ್ ಎಂಬುವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಶೀಘ್ರವೇ ಮದುವೆ ಸಹ ನಡೆಯಲಿದೆ. ರಾಕೇಶ್ ಅವರ ಎಂಗೇಜ್ಮೆಂಟ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಮುಖ್ಯಾಂಶಗಳು
- ನಟ ರಾಕೇಶ್ ಅಡಿಗ ನಿಶ್ಚಿತಾರ್ಥ
- ಮಾಧುರಿ ಸಿಂಗ್ ಅವರೊಟ್ಟಿಗೆ ರಾಕೇಶ್ ನಿಶ್ಚಿತಾರ್ಥ
- ಶೀಘ್ರವೇ ಮದುವೆ ಆಗಲಿರುವ ಜೋಡಿ
ಮಾಜಿ ಬಿಗ್ಬಾಸ್ ಸ್ಪರ್ಧಿ ಮತ್ತು ನಟ ರಾಕೇಶ್ ಅಡಿಗ ಎಂಗೇಜ್ ಆಗಿದ್ದಾರೆ. ರಾಕೇಶ್ ಅಡಿಗ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಸಿಂಗಲ್ ಆಗಿದ್ದ ರಾಕೇಶ್ ಅಡಿಗ ಈಗ ಜೋಡಿ ಆಗಿದ್ದಾರೆ. ರಾಕೇಶ್ ಅವರು ಮಾಧುರಿ ಸಿಂಗ್ ಎಂಬುವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಶೀಘ್ರವೇ ಮದುವೆ ಸಹ ನಡೆಯಲಿದೆ. ರಾಕೇಶ್ ಅವರ ಎಂಗೇಜ್ಮೆಂಟ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ರಾಕೇಶ್ ಅವರು ಬಿಗ್ಬಾಸ್ ಮನೆಯಲ್ಲಿ ಇದ್ದಾಗಿನಿಂದಲೂ ಅವರ ಮದುವೆ ಬಗ್ಗೆ ಅಭಿಮಾನಿಗಳು, ಸಹ ಸ್ಪರ್ಧಿಗಳು ಕೇಳುತ್ತಲೇ ಇದ್ದರು. ಆದರೆ ರಾಕೇಶ್ ಅವರು ಯಾವುದಕ್ಕೂ ಸ್ಪಷ್ಟ ಉತ್ತರ ನೀಡಿರಲಿಲ್ಲ. ರಾಕೇಶ್ ಅವರ ಹೆಸರು ನಟಿಯೊಬ್ಬರ ಜೊತೆಗೂ ಹಿಂದೆ ಕೆಲವೊಮ್ಮೆ ಕೇಳಿ ಬಂದಿತ್ತು. ಆದರೆ ಇದೀಗ ರಾಕೇಶ್ ಅವರು ಮಾಧುರಿ ಸಿಂಗ್ ಅವರೊಟ್ಟಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶೀಘ್ರವೇ ಮದುವೆ ಸಹ ನಡೆಯಲಿದೆ. ಆದರೆ ದಿನಾಂಕ ಇನ್ನೂ ಖಾತ್ರಿ ಆಗಿಲ್ಲ.
ರಾಕೇಶ್ ಅಡಿಗ ಅವರದ್ದು ಪ್ರೇಮ ವಿವಾಹವಾಗಿದ್ದು, ರಾಕೇಶ್ ಅವರು, ಮಾಧುರಿ ಅವರಿಗೆ ಬೀಚ್ ಒಂದರ ಪಕ್ಕದಲ್ಲಿ ಮದುವೆಗೆ ಪ್ರಪೋಸ್ ಮಾಡಿರುವ ವಿಡಿಯೋ ಸಹ ಇದೀಗ ವೈರಲ್ ಆಗಿದೆ. ಬೀಚ್ ಒಂದರ ಪಕ್ಕದಲ್ಲಿ ‘ವಿಲ್ ಯು ಮ್ಯಾರಿ ಮೀ’ ಎಂದು ಬೋರ್ಡ್ ಎಲ್ಲವನ್ನೂ ಅರೇಂಜ್ ಮಾಡಿ, ದೀಪಿಕಾ ಅವರಿಗೆ ಹೂ ಕೊಟ್ಟು ಪ್ರಪೋಸ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಇದನ್ನೂ ಓದಿ: ಬಿಗ್ಬಾಸ್ ಮನೆಗೆ ಮತ್ತೆ ಬಂದ ‘ರೌಡಿ ಮಂಜ’, ಮನೆಯಲ್ಲಿ ಮತ್ತೆ ಶುರುವಾಗುತ್ತಾ ಗಲಾಟೆ?
ರಾಕೇಶ್ ಅಡಿಗ ಅವರು 2009 ರಲ್ಲಿ ರಿಲೀಸ್ ಆದ ‘ಜೋಶ್’ ಸಿನಿಮಾ ಮೂಲಕ ನಟನೆ ಆರಂಭಿಸಿದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಬಳಿಕ ‘ಅರ್ಬಲ್ ಲ್ಯಾಡ್ಸ್’ ಹೆಸರಿನಲ್ಲಿ ತಂಡ ಕಟ್ಟಿಕೊಂಡು ಕನ್ನಡ ರ್ಯಾಪ್ ಸಹ ರಾಕೇಶ್ ಅಡಿಗ ಮಾಡಿದರು. ಆಗಿನ ಕಾಲಕ್ಕೆ ಭಾರಿ ದೊಡ್ಡ ಹಿಟ್ ಆಗಿತ್ತು ಅರ್ಬಲ್ ಲ್ಯಾಡ್ಸ್. ಅದಾದ ಬಳಿಕ ಈ ವರೆಗೆ ಹಲವಾರು ಸಿನಿಮಾಗಳಲ್ಲಿ ರಾಕೇಶ್ ಅಡಿಗ ನಟಿಸಿದ್ದಾರೆ. ಬಿಗ್ಬಾಸ್ ಒಟಿಟಿ ಮತ್ತು ಬಿಗ್ಬಾಸ್ ಕನ್ನಡ ಸೀಸನ್ 10 ಎರಡರಲ್ಲೂ ಭಾಗವಹಿಸಿ, ಎರಡರಲ್ಲೂ ಫೈನಲ್ ವರೆಗೆ ತಲುಪಿದ್ದರು ರಾಕೇಶ್. ಬಿಗ್ಬಾಸ್ ಮನೆಯಲ್ಲಿ ಯಾರೊಟ್ಟಿಗೂ ಜಗಳ ಆಡದೆ, ಪ್ರೀತಿ-ವಿಶ್ವಾಸದಿಂದಲೇ ಫಿನಾಲೆ ವರೆಗೆ ಹೋದ ಸ್ಪರ್ಧಿ ಎನಿಸಿಕೊಂಡಿದ್ದರು ರಾಕೇಶ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




