ಸ್ಯಾಂಡಲ್ವುಡ್ ಡ್ರಗ್ ಕೇಸ್ನಲ್ಲಿ ನಟಿ ಸಂಜನಾ ಗಲ್ರಾನಿ ಜೈಲು ಸೇರಿದ್ದರು. ಕೆಲ ತಿಂಗಳ ಹಿಂದೆ ಜಾಮೀನಿನ ಮೇಲೆ ಅವರು ಜೈಲಿನಿಂದ ಹೊರ ಬಂದಿದ್ದರು. ಕೊವಿಡ್ ಸಂದರ್ಭದಲ್ಲಿ ಅವರು ಸಾಮಾನ್ಯರ ಸಹಾಯಕ್ಕೆ ನಿಂತಿದ್ದಾರೆ. ಈ ಮಧ್ಯೆ, ಸಂಜನಾ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಇದರಿಂದ ಅವರು ಮತ್ತೆ ಸಂಕಷ್ಟಕ್ಕೆ ತುತ್ತಾಗುವ ಸಾಧ್ಯತೆ ಇದೆ.
ಸಂಜನಾ ಡ್ರಗ್ ಕೇಸ್ನಲ್ಲಿ ಬೇಲ್ ಪಡೆದು ಹೊರ ಬಂದಿದ್ದಾರೆ. ಹೀಗಿರುವಾಗಲೇ ಹಳೆಯ ಕೇಸ್ ಒಂದಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಮಾಡೆಲ್ ವಂದನಾ ಜೈನ್ ನೀಡಿದ ದೂರಿನ್ವಯ ಕಬ್ಬನ್ ಪಾರ್ಕ್ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಏನಿದು ಪ್ರಕರಣ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
2019ರಲ್ಲಿ ಲಾವೆಲಿ ರಸ್ತೆಯ ಕ್ಲಬ್ಒಂದಕ್ಕೆ ವಂದನಾ ತೆರಳಿದ್ದರು. ಅದೇ ಕ್ಲಬ್ನಲ್ಲಿ ನಟಿ ಸಂಜನಾ ಗಲ್ರಾನಿ ಕೂಡ ಇದ್ದರು. ಆಗ ಸಂಜನಾ ಅವರು ವಂದನಾ ಜೈನ್ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದರು ಎನ್ನಲಾಗಿದೆ.
ಅವಾಚ್ಯ ಶಬ್ದಗಳನ್ನು ಬಳಸದಂತೆ ವಂದನಾ ಜೈನ್ ಸೂಚನೆ ನೀಡಿದ್ದರು. ಈ ವೇಳೆ ವಂದನಾ ಮುಖಕ್ಕೆ ವಿಸ್ಕಿ ಎರಚಿದ ಸಂಜನಾ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಇದೆ. ಈ ಘಟನೆ ವೇಳೆ ವಂದನಾ ಕಣ್ಣಿಗೆ ಗಾಯ ಆಗಿತ್ತು. ಘಟನೆ ಬಳಿಕ ವಂದನಾಗೆ ಸಂಜನಾ ಬೆದರಿಕೆ ಹಾಕಿದ್ದರಂತೆ.
ಈ ಪ್ರಕರಣದ ಬಗ್ಗೆ ವಂದನಾ ಕೋರ್ಟ್ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಕೋರ್ಟ್ ನಿರ್ದೇಶನದಂತೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊರೊನಾ ವೈರಸ್ ಎರಡನೇ ಅಲೆ ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಕೊರೊನಾ ಬಿಟ್ಟು ಬಿಡದೆ ಕಾಡುತ್ತಿದೆ. ಕಳೆದ ತಿಂಗಳು ನಟಿ ಸಂಜನಾ ಗಲ್ರಾನಿ ಅವರಿಗೂ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ‘ನಮ್ಮ ಕುಟುಂಬದಲ್ಲಿ ಓರ್ವ ಡಾಕ್ಟರ್ ಇದ್ದಾರೆ. ಅವರು ಕೊರೊನಾ ವಾರಿಯರ್. ಹೀಗಾಗಿ ಅವರು ಸಮಾಜಕ್ಕೆ ಸರ್ವ್ ಮಾಡಲೇಬೇಕು. ಹೀಗಾಗಿ, ನನಗೆ ಕೊರೊನಾ ಬಂದಿದೆ. ಆದರೆ, ನನಗೆ ಭಯ ಇಲ್ಲ. ಅವರು ಹೇಳಿದ ಟ್ಯಾಬ್ಲೆಟ್ ತೆಗೆದುಕೊಂಡೆ. ವಿಟಾಮಿನ್ ಮಾತ್ರೆಗಳನ್ನು ತೆಗೆದುಕೊಂಡೆ. ಈ ಮೂಲಕ ಇಮ್ಯುನಿಟಿ ಬೆಳೆಸಿಕೊಂಡೆ ಎಂದಿದ್ದರು.
ಇದನ್ನೂ ಓದಿ: Sanjana Galrani : ಬೆಂಗಳೂರಿನಲ್ಲಿ ಸಂಕಷ್ಟದಲ್ಲಿರೋ ಜನ್ರ ಸಹಾಯಕ್ಕೆ ಮುಂದಾಗ್ತಿರೋ ನಟಿ ಸಂಜನಾ ಗರ್ಲಾನಿ
Published On - 8:29 pm, Thu, 13 May 21