ಕಷ್ಟ ಪಟ್ಟು ಹೀರೋ ಆಗಬಹುದು. ಇನ್ನೂ ಹೆಚ್ಚು ಶ್ರಮ ಹಾಕಿ ನಿರ್ದೇಶನ ಮಾಡಬಹುದು. ಆದರೆ ಏಕಕಾಲಕ್ಕೆ ನಟನೆ ಮತ್ತು ನಿರ್ದೇಶನ ಎರಡನ್ನೂ ಮಾಡುವುದು ಸುಲಭದ ಮಾತಲ್ಲ. ಅಂಥ ಪ್ರಯತ್ನದಲ್ಲಿ ಗೆದ್ದವರು ಒಂದಷ್ಟು ಮಂದಿ ಇದ್ದಾರೆ. ಅಂಥವರ ಸಾಲಿನಲ್ಲಿ ‘ನಮ್ ಗಣಿ ಬಿ.ಕಾಂ. ಪಾಸ್’ ಚಿತ್ರದ ನಿರ್ದೇಶಕ ಅಭಿಷೇಕ್ ಶೆಟ್ಟಿ (Director Abhishek Shetty) ಕೂಡ ಗಮನ ಸೆಳೆಯುತ್ತಾರೆ. ಅಭಿನಯ ಮತ್ತು ನಿರ್ದೇಶನ ಎರಡಲ್ಲೂ ಅಭಿಷೇಕ್ ಶೆಟ್ಟಿ ಅವರಿಗೆ ಆಸಕ್ತಿ ಇದೆ. ಹಲವು ಕಿರುಚಿತ್ರಗಳಿಗೆ ನಿರ್ದೇಶನ ಮಾಡಿದ್ದ ಅವರು ನಂತರ ಚಂದನವನಕ್ಕೆ ಕಾಲಿಟ್ಟರು. ‘ನಮ್ ಗಣಿ ಬಿ.ಕಾಂ. ಪಾಸ್’ ಚಿತ್ರಕ್ಕೆ ಹೀರೋ ಆಗಿ ಮತ್ತು ನಿರ್ದೇಶಕನಾಗಿ ಗಮನ ಸೆಳೆದರು. ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಎರಡನೇ ಸಿನಿಮಾ ‘ಗಜಾನನ ಆ್ಯಂಡ್ ಗ್ಯಾಂಗ್’ (Gajanana And Gang Movie) ಈಗ ಬಿಡುಗಡೆಗೆ ಸಜ್ಜಾಗಿದೆ. ಆ ಚಿತ್ರದಲ್ಲಿ ಅದಿತಿ ಪ್ರಭುದೇವ, ಶ್ರೀಮಹದೇವ್ ಜೊತೆಗೆ ಅಭಿಷೇಕ್ ಶೆಟ್ಟಿ ಕೂಡ ನಟಿಸಿದ್ದಾರೆ. ‘ಗಜಾನನ ಆ್ಯಂಡ್ ಗ್ಯಾಂಗ್’ ರಿಲೀಸ್ ಆಗುವುದಕ್ಕೂ ಮುನ್ನವೇ ಅಭಿಷೇಕ್ ಶೆಟ್ಟಿ ಅವರು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಆ ಮೂಲಕ ಸಿನಿಪ್ರಿಯರಲ್ಲಿ ಒಂದಷ್ಟು ಕುತೂಹಲ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಅವರ ಹೊಸ ಚಿತ್ರಕ್ಕೆ ‘ಆರಾಮ್ ಅರವಿಂದ್ ಸ್ವಾಮಿ’ (Aaram Aravind Swamy) ಎಂದು ಶೀರ್ಷಿಕೆ ಇಡಲಾಗಿದೆ.
ಕುಂದಾಪುರ ಮೂಲದ ಅಭಿಷೇಕ್ ಶೆಟ್ಟಿ ಅವರಿಗೆ ಫೆ.24ರಂದು ಹುಟ್ಟುಹಬ್ಬದ ಸಂಭ್ರಮ. ಈ ಪ್ರಯುಕ್ತ ಅವರ ಹೊಸ ಚಿತ್ರದ ಬಗ್ಗೆ ಮಾಹಿತಿ ಬಿಟ್ಟುಕೊಡಲಾಗಿದೆ. ‘ಆರಾಮ್ ಅರವಿಂದ್ ಸ್ವಾಮಿ’ ಚಿತ್ರಕ್ಕೆ ಅಭಿಷೇಕ್ ಅವರು ತಾವೇ ಕಥೆ ಬರೆದು ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಕಾಮಿಡಿ ಜೊತೆಗೆ ಎಮೋಷನಲ್ ಕಥಾಹಂದರ ಹೊಂದಿರುವ ಈ ಸಿನಿಮಾದ ಪಾತ್ರವರ್ಗ ಮತ್ತು ತಂತ್ರಜ್ಞರ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.
‘ಗಜಾನನ ಆ್ಯಂಡ್ ಗ್ಯಾಂಗ್’ ರಿಲೀಸ್ಗೆ ಕಾದಿರುವ ಅಭಿಷೇಕ್:
ಕೆಲವು ತಿಂಗಳ ಹಿಂದೆ ‘ಗಜಾನನ ಆ್ಯಂಡ್ ಗ್ಯಾಂಗ್’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಯಿತು. ನಟಿ ಮೇಘನಾ ರಾಜ್ ಅವರು ಮುಖ್ಯ ಅತಿಥಿಯಾಗಿ ಬಂದು ಟ್ರೇಲರ್ ರಿಲೀಸ್ ಮಾಡಿಕೊಟ್ಟಿದ್ದರು. ಯೂಟ್ಯೂಬ್ನಲ್ಲಿ ಈ ಟ್ರೇಲರ್ಗೆ ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕ ನಾಗೇಶ್ ಕುಮಾರ್ ಸೂಕ್ತ ದಿನಾಂಕಕ್ಕಾಗಿ ಕಾದಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಫೆಬ್ರವರಿ ಮೊದಲ ವಾರದಲ್ಲಿ ‘ಗಜಾನನ ಆ್ಯಂಡ್ ಗ್ಯಾಂಗ್’ ಚಿತ್ರ ಬಿಡುಗಡೆ ಆಗಬೇಕಿತ್ತು. ಆದರೆ ಆ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಅವಕಾಶ ಇಲ್ಲದ ಕಾರಣ ರಿಲೀಸ್ ಡೇಟ್ ಮುಂದೂಡಲಾಯಿತು.
ಮೇಘನಾ ರಾಜ್ ಮೆಚ್ಚಿದ ‘ಗಜಾನನ ಆ್ಯಂಡ್ ಗ್ಯಾಂಗ್’ ಟ್ರೇಲರ್:
ಅಭಿಷೇಕ್ ಶೆಟ್ಟಿ ನಿರ್ದೇಶನ ಮಾಡಿರುವ ‘ಗಜಾನನ ಆ್ಯಂಡ್ ಗ್ಯಾಂಗ್’ ಸಿನಿಮಾದ ಟ್ರೇಲರ್ ಕಂಡು ನಟಿ ಮೇಘನಾ ರಾಜ್ ಅವರು ಬಹಳ ಮೆಚ್ಚಿಕೊಂಡಿದ್ದರು. ಆ ಬಗ್ಗೆ ಅವರು ಮನಸಾರೆ ಹೊಗಳಿದ್ದರು. ಸಿನಿಮಾದ ಶೀರ್ಷಿಕೆಯೇ ಹೇಳುವಂತೆ ಇದರಲ್ಲೊಂದು ಫ್ರೆಂಡ್ಶಿಪ್ ಕಥೆ ಇದೆ. ‘ನೀನು ಯಾವತ್ತು ಇವರ (ಫ್ರೆಂಡ್ಸ್) ಸಹವಾಸ ಬಿಡುತ್ತೀಯೋ ಆವತ್ತು ಉದ್ಧಾರ ಆಗುತ್ತೀಯ’ ಎಂದು ಟ್ರೇಲರ್ನ ಒಂದು ದೃಶ್ಯದಲ್ಲಿ ಹೀರೋಗೆ ಹೀರೋಯಿನ್ ಬಯ್ಯುತ್ತಾಳೆ. ಬಳಿಕ ಇನ್ನೊಂದು ದೃಶ್ಯದಲ್ಲಿ ‘ಎಂತಹ ಪರಿಸ್ಥಿತಿಯಲ್ಲೂ ಏನೇ ಆದರೂ ನಿನ್ನ ಫ್ರೆಂಡ್ಸ್ ಬಿಟ್ಟುಕೊಡಬೇಡ’ ಎಂದು ಆಕೆಯೇ ಹೇಳುತ್ತಾಳೆ. ಈ ಡೈಲಾಗ್ ಕೇಳಿದ ಮೇಘನಾಗೆ ಚಿರಂಜೀವಿ ಸರ್ಜಾ ಅವರ ನೆನಪಾಗಿತ್ತು. ರಿಯಲ್ ಲೈಫ್ನಲ್ಲಿ ಚಿರುಗೆ ಮೇಘನಾ ಕೂಡ ಈ ಎರಡೂ ಡೈಲಾಗ್ಗಳನ್ನು ಹೇಳಿದ್ದರಂತೆ. ಆ ಘಟನೆಯನ್ನು ಟ್ರೇಲರ್ ಲಾಂಚ್ ವೇದಿಕೆಯಲ್ಲಿ ಮೇಘನಾ ನೆನಪು ಮಾಡಿಕೊಂಡಿದ್ದರು.
ಇದನ್ನೂ ಓದಿ:
‘ಇಂಥ ಸಿನಿಮಾ ಮಾಡೋದಕ್ಕೆ ಹೆಮ್ಮೆ ಇದೆ’ ಹೊಸ ಚಿತ್ರದ ಬಗ್ಗೆ ಮಾಹಿತಿ ಬಿಟ್ಟುಕೊಟ್ಟ ಮೇಘನಾ ರಾಜ್
‘ಬ್ಲಾಂಕ್’ ಕನ್ನಡ ಚಿತ್ರಕ್ಕೆ ರಮ್ಯಾ ಶುಭ ಹಾರೈಕೆ; ಟ್ರೇಲರ್ ಕಂಡು ವಾವ್ ಎಂದ ಸೆಲೆಬ್ರಿಟಿಗಳು