ಒಂದೇ ಒಂದು ‘ಕೆಜಿಎಫ್’ (KGF Chapter 2) ಸಿನಿಮಾದಿಂದ ಅನೇಕರ ಬದುಕು ಬದಲಾಯಿತು. ಆ ಚಿತ್ರದಲ್ಲಿ ನಟಿಸಿದ ಹಲವು ಕಲಾವಿದರು ರಾತ್ರೋರಾತ್ರಿ ಜನಪ್ರಿಯತೆ ಪಡೆದರು. ಅದರಲ್ಲಿ ಕೆಲಸ ಮಾಡಿದ ತಂತ್ರಜ್ಞರು ಕೂಡ ಗಮನ ಸೆಳೆದರು. ನಾಯಕ ಯಶ್, ನಾಯಕಿ ಶ್ರೀನಿಧಿ ಶೆಟ್ಟಿ ಮಾತ್ರವಲ್ಲದೇ ಬೇರೆ ಪಾತ್ರಧಾರಿಗಳ ವೃತ್ತಿಜೀವನಕ್ಕೂ ‘ಕೆಜಿಎಫ್: ಚಾಪ್ಟರ್ 1’ ಸಿನಿಮಾದಿಂದ ದೊಡ್ಡ ಮೈಲೇಜ್ ಸಿಕ್ಕಿತು. ಆ ಪೈಕಿ ಗರುಡ ಪಾತ್ರ ಮಾಡಿದ ನಟ ರಾಮಚಂದ್ರ ರಾಜು ಸಿಕ್ಕಾಪಟ್ಟೆ ಶೈನ್ ಆದರು. ಆ ಸಿನಿಮಾ ಬಿಡುಗಡೆ ಆದ ಬಳಿಕ ಗರುಡ ರಾಮ್ (Garuda Ram) ಎಂದೇ ಅವರು ಫೇಮಸ್ ಆದರು. ಇಂದು (ಜುಲೈ 7) ಅವರಿಗೆ ಜನ್ಮದಿನದ (Garuda Ram Birthday) ಸಂಭ್ರಮ. ಆ ಪ್ರಯುಕ್ತ ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಕೂಡ ಶುಭ ಕೋರುತ್ತಿದ್ದಾರೆ.
ಮೊದಲ ಸಿನಿಮಾದಲ್ಲಿಯೇ ಪ್ಯಾನ್ ಇಂಡಿಯಾ ಮಟ್ಟದ ಯಶಸ್ಸು ಸಿಗುವುದು ಎಂದರೆ ತಮಾಷೆಯ ಮಾತಲ್ಲ. ಅದಕ್ಕೆ ಪರಿಶ್ರಮದ ಜೊತೆಗೆ ಅದೃಷ್ಟವೂ ಬೇಕು. ‘ಕೆಜಿಎಫ್: ಚಾಪ್ಟರ್ 1’ ಸಿನಿಮಾ 2018ರಲ್ಲಿ ತೆರೆಕಂಡಿತು. ಅದು ರಾಮಚಂದ್ರ ರಾಜು ಅವರ ಚೊಚ್ಚಲ ಸಿನಿಮಾ. ಅವರು ಮಾಡಿದ್ದ ಗರುಡ ಪಾತ್ರಕ್ಕೆ ಸಖತ್ ತೂಕ ಇತ್ತು. ತಮ್ಮ ಖಡಕ್ ಲುಕ್ನಿಂದ ಆ ಪಾತ್ರಕ್ಕೆ ಅವರು ಜೀವ ತುಂಬಿದರು. ಇಡೀ ನರಾಚಿಯನ್ನು ಗಡಗಡ ನಡುಗಿಸುವಂತಹ ಆ ಪಾತ್ರವನ್ನು ಅವರು ಜೀವಿಸಿದ್ದರು ಎಂದೇ ಹೇಳಬೇಕು.
‘ಕೆಜಿಎಫ್: ಚಾಪ್ಟರ್ 1’ ಸಿನಿಮಾದ ಗೆಲುವಿನಿಂದಾಗಿ ಗರುಡ ರಾಮ್ ಅವರಿಗೆ ಹಲವು ಅವಕಾಶಗಳು ಹರಿದುಬರಲು ಆರಂಭಿಸಿದವು. ಪರಿಣಾಮವಾಗಿ ಅವರು ಬಹುಭಾಷಾ ನಟನಾಗಿ ಗುರುತಿಸಿಕೊಂಡರು. ತಮಿಳು, ತೆಲುಗು, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಅವರು ನಟಿಸಿದರು. ಅನೇಕ ಬಿಗ್ ಬಜೆಟ್ ಚಿತ್ರಗಳಿಗೆ ಅವರು ಖಳನಟನಾಗಿ ಆಯ್ಕೆ ಆಗುತ್ತಿದ್ದಾರೆ.
ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಿರುವ ‘ಜನ ಗಣ ಮನ’ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇದೆ. ಆ ಚಿತ್ರಕ್ಕೆ ವಿಜಯ್ ದೇವರಕೊಂಡ ಹೀರೋ. ಈ ಸಿನಿಮಾದಲ್ಲಿ ಗರುಡ ರಾಮ್ ಕೂಡ ನಟಿಸುತ್ತಿದ್ದಾರೆ. ‘ಕೆಜಿಎಫ್’ ರೀತಿಯೇ ‘ಜನ ಗಣ ಮನ’ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಆ ಚಿತ್ರದ ಮೂಲಕ ಮತ್ತೆ ಗರುಡ ರಾಮ್ ಅಬ್ಬರಿಸಲಿ, ಅವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಇದನ್ನೂ ಓದಿ: 10 ತಲೆ ಹೊತ್ತು ಬಂದ ‘ನ್ಯಾನೋ ನಾರಾಯಣಪ್ಪ’; ಹೀರೋ ಆದ ‘ಕೆಜಿಎಫ್’ ತಾತನ ಫಸ್ಟ್ ಲುಕ್ ಇಲ್ಲಿದೆ
‘ನಾವು ‘ಕೆಜಿಎಫ್’ ರೀತಿಯ ಸಿನಿಮಾ ಮಾಡಿದ್ರೆ ಕಟು ಟೀಕೆ ವ್ಯಕ್ತವಾಗುತ್ತಿತ್ತು’: ಕರಣ್ ಜೋಹರ್ ಆರೋಪ