ಗ್ಲೆನ್​ ಮ್ಯಾಕ್ಸ್​​ವೆಲ್​​ಗೆ ಗೊತ್ತು ಸೆಂಚುರಿ ಸ್ಟಾರ್​ ಶಿವರಾಜ್​ಕುಮಾರ್​; ಶಿವಣ್ಣನ ಬಗ್ಗೆ ಮ್ಯಾಕ್ಸಿ ಹೇಳಿದ್ದೇನು?

|

Updated on: May 07, 2021 | 6:33 PM

ರಾಯಲ್​ ಚಾಲೆಂಜರ್ಸ್​ ತಂಡ ಮೈದಾನದಲ್ಲಿ ಮನರಂಜನೆ ನೀಡುವುದು ಮಾತ್ರವಲ್ಲ, ಯೂಟ್ಯೂಬ್​ನಲ್ಲೂ ಎಂಟರ್​ಟೇನ್​ಮೆಂಟ್​ ನೀಡುತ್ತಿದೆ. ಆರ್​ಸಿಬಿ ತಂಡದ ಇನ್​ಸೈಡರ್​ ಆಗಿರುವ ದ್ಯಾನಿಶ್​​ ಸೇಠ್​ ಮಿಸ್ಟರ್​ ನ್ಯಾಗ್ಸ್​ ಆಗಿ ಎಲ್ಲರನ್ನೂ ನಗಿಸುತ್ತಿದ್ದಾರೆ. ಪ್ರ

ಗ್ಲೆನ್​ ಮ್ಯಾಕ್ಸ್​​ವೆಲ್​​ಗೆ ಗೊತ್ತು ಸೆಂಚುರಿ ಸ್ಟಾರ್​ ಶಿವರಾಜ್​ಕುಮಾರ್​; ಶಿವಣ್ಣನ ಬಗ್ಗೆ ಮ್ಯಾಕ್ಸಿ ಹೇಳಿದ್ದೇನು?
ಗ್ಲೆನ್​ ಮ್ಯಾಕ್ಸ್​ವೆಲ್​-ಶಿವರಾಜ್​ಕುಮಾರ್​
Follow us on

ಸೆಂಚುರಿ ಸ್ಟಾರ್​ ಶಿವರಾಜ್​ಕುಮಾರ್ ಖ್ಯಾತಿ ಕರ್ನಾಟಕಕ್ಕೆ ಮಾತ್ರ ಸೀಮಿತಾಗಿಲ್ಲ. ಅವರ ಸಾಕಷ್ಟು ಸಿನಿಮಾಗಳು ಬೇರೆಬೇರೆ ಭಾಷೆಗೆ ಡಬ್​ ಆಗಿ ತೆರೆಕಂಡಿವೆ. ಹೀಗಾಗಿ ಅವರು ಪರ ಭಾಷೆಯವರಿಗೂ ಗೊತ್ತು. ವಿಶೇಷ ಎಂದರೆ, ಆಸ್ಟ್ರೇಲಿಯಾದ ಪ್ರಮುಖ ಆಟಗಾರ ಗ್ಲೆನ್​ ಮ್ಯಾಕ್ಸ್​ವೆಲ್​​ಗೂ ಶಿವರಾಜ್​ಕುಮಾರ್​ ಹಾಡಿನ​ ಪರಿಚಯ ಇದೆಯಂತೆ!   

ರಾಯಲ್​ ಚಾಲೆಂಜರ್ಸ್​ ತಂಡ ಮೈದಾನದಲ್ಲಿ ಮನರಂಜನೆ ನೀಡುವುದು ಮಾತ್ರವಲ್ಲ, ಯೂಟ್ಯೂಬ್​ನಲ್ಲೂ ಎಂಟರ್​ಟೇನ್​ಮೆಂಟ್​ ನೀಡುತ್ತಿದೆ. ಆರ್​ಸಿಬಿ ತಂಡದ ಇನ್​ಸೈಡರ್​ ಆಗಿರುವ ದ್ಯಾನಿಶ್​​ ಸೇಠ್​ ಮಿಸ್ಟರ್​ ನ್ಯಾಗ್ಸ್​ ಆಗಿ ಎಲ್ಲರನ್ನೂ ನಗಿಸುತ್ತಿದ್ದಾರೆ. ಪ್ರತಿ ಆಟಗಾರರನ್ನೂ ಸಂದರ್ಶನ ಮಾಡುವ ಅವರು ಭರಪೂರ ಮನರಂಜನೆ ನೀಡುತ್ತಿದ್ದಾರೆ. ನಾನಾ ರೀತಿಯ ಕಾಮಿಡಿ ಮಾಡಿ ಜನರನ್ನು ನಗಿಸುತ್ತಿದ್ದಾರೆ. ನ್ಯಾಗ್ಸ್​ ಕ್ಯಾರೆಕ್ಟರ್​ ಬಹುತೇಕರಿಗೆ ಇಷ್ಟವಾಗಿದೆ. ಅವರು ಈ ಬಾರಿ ಮ್ಯಾಕ್ಸ್​ವೆಲ್​ ಸಂದರ್ಶನ ಮಾಡಿದ್ದಾರೆ.

ಈ ವಿಡಿಯೋವನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಯೂಟ್ಯೂಬ್​ನಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಜೋಗಿ ಸಿನಿಮಾದ ಹೊಡಿ ಮಗ ಹಾಡನ್ನು ಮ್ಯಾಕ್ಸ್​ವೆಲ್​ಗೆ ಕಲಿಸಿಕೊಡುವ ಪ್ರಯತ್ನ ಮಾಡಿದ್ದಾರೆ ದ್ಯಾನಿಶ್​. ‘ಹೊಡಿ ಮಗ.. ಹೊಡಿ ಮಗ.. ಹೊಡಿ ಮಗ.. ಹೊಡಿ ಮಗ.. ಬಿಡಬೇಡ ಅವ್ನ…’ ಇದು ಕನ್ನಡದ ಹಾಡು. ಇದನ್ನು ಹೇಳಿ ಎಂದು ಮ್ಯಾಕ್ಸ್​ವೆಲ್​ಗೆ ದ್ಯಾನಿಶ್ ಸೂಚಿಸಿದ್ದಾರೆ . ಆಗ ಮ್ಯಾಕ್ಸಿ, ಇದೇನು ಮೂರು ಸೆಕೆಂಡ್​ ಇದೆ. ಇದನ್ನು ಯಾರಾದರೂ ಹಾಡು ಎನ್ನುತ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಅಯ್ಯೋ ನಾನು ಹಾಡಿನ ಪೂರ್ತಿ ಲಿರಿಕ್ಸ್​ ಹೇಳಿದರೆ ನಾಳೆವರೆಗೂ ನಾವು ಇಲ್ಲಿಯೇ ಇರಬೇಕಾಗುತ್ತದೆ ಎಂದು ದ್ಯಾನಿಶ್ ಉತ್ತರಿಸಿದರು​. ಅಂತೂ 37ನೇ ಟೇಕ್​ಗೆ ಮ್ಯಾಕ್ಸ್​ವೆಲ್​ ಜೋಗಿ ಸಿನಿಮಾದ ಹಾಡಿನ ಸಾಲನ್ನು ಹಾಡಿದರು.

ಈ ಹಾಡು ಯಾರ ಸಿನಿಮಾದ್ದು ಎಂದು ಗೊತ್ತೇ ಎನ್ನುವ ಪ್ರಶ್ನೆಯನ್ನು ದ್ಯಾನಿಶ್​ ಕೇಳಿದರು. ಇದಕ್ಕೆ ಮ್ಯಾಕ್ಸಿ, ಶಿವಣ್ಣ ಎಂದು ಉತ್ತರಿಸಿದರು. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ. ಅನೇಕರು ಮ್ಯಾಕ್ಸಿಗೆ ಶಿವಣ್ಣ ಗೊತ್ತೇ ಎಂದು ಕೇಳಿದ್ದಾರೆ.

ಕೊರೊನಾ ಕಾರಣದಿಂದ ಐಪಿಎಲ್​ ರದ್ದಾಗಿದೆ. ಹೀಗಾಗಿ, ಆರ್​ಸಿಬಿ ತಂಡ ಆಸ್ಟ್ರೇಲಿಯಾ ಆಟಗಾರರನ್ನು ವಿಶೇಷ ವಿಮಾನದಲ್ಲಿ ಆಟಗಾರರನ್ನು ಮಾಲ್ಡೀವ್ಸ್​ಗೆ ಕಳುಹಿಸಿದೆ. ಅಲ್ಲಿ ಅವರು ಕ್ವಾರಂಟೈನ್​ ಆದ ನಂತರ ಆಸ್ಟ್ರೆಲಿಯಾಗೆ ತೆರಳಲಿದ್ದಾರೆ.

ಇದನ್ನೂ ಓದಿ: Glenn Maxwell: ಭಾರತದಲ್ಲಿ ಹೆಚ್ಚಿದ ಕೊರೊನಾ; ಮನೆಗೆ ಹೋಗಲು ಹೊಸ ಉಪಾಯ ಮಾಡಿದ ಗ್ಲೆನ್ ಮ್ಯಾಕ್ಸ್​ವೆಲ್